ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್, ಬೆಂಗ್ರೆ ನಿವಾಸಿ ಯುವಕ ಪೊಲೀಸ್ ವಶಕ್ಕೆ 

08-11-25 11:15 pm       Mangalore Correspondent   ಕ್ರೈಂ

ಸಾಮಾಜಿಕ ಜಾಲತಾಣ  Instagram ನ  target_boy900 ಎಂಬ ಖಾತೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ, ಪ್ರತೀಕಾರಕ್ಕೆ ಪ್ರಚೋದಿಸುವಂತಹ ಸಂದೇಶವನ್ನು ಪ್ರಸಾರ ಮಾಡಿದ ಆರೋಪಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಮಂಗಳೂರು, ನ.8 : ಸಾಮಾಜಿಕ ಜಾಲತಾಣ  Instagram ನ  target_boy900 ಎಂಬ ಖಾತೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ, ಪ್ರತೀಕಾರಕ್ಕೆ ಪ್ರಚೋದಿಸುವಂತಹ ಸಂದೇಶವನ್ನು ಪ್ರಸಾರ ಮಾಡಿದ ಆರೋಪಿಯನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಈ ಬಗ್ಗೆ ಜೂನ್ 2 ರಂದು ಕಡಬ ಪೊಲೀಸ್ ಠಾಣೆಯಲ್ಲಿ ಅಕ್ರ: 40/2025 ಕಲಂ: 55,353(2) r/w 103 BNS-2023 ರಂತೆ ಪ್ರಕರಣ ದಾಖಲಾಗಿತ್ತು. ‌ಸದ್ರಿ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ.8 ರಂದು ಆರೋಪಿ ಮಂಗಳೂರು ಕಸಬಾ ಬೆಂಗ್ರೆ ನಿವಾಸಿ ಮಹಮ್ಮದ್ ಮುನಾವರ್ ನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.

A youth has been taken into custody by the Kadaba Police for allegedly posting a provocative message on Instagram inciting communal hatred and revenge in connection with a recent murder in Dakshina Kannada district.