ಬ್ರೇಕಿಂಗ್ ನ್ಯೂಸ್
30-01-26 02:04 pm HK News Desk ದೇಶ - ವಿದೇಶ
ಅಹಮದಾಬಾದ್, ಜ.30 : ಚಿರತೆ ದಾಳಿಯಿಂದ ರಕ್ಷಿಸಿಕೊಳ್ಳಲು 60 ವರ್ಷದ ರೈತನೊಬ್ಬ ಚಿರತೆಯನ್ನು ಕತ್ತಿಯಿಂದ ಹಲ್ಲೆ ಮಾಡಿ ಕೊಂದ ಘಟನೆ ಗುಜರಾತಿನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ನಡೆದಿದೆ. ಆದರೆ ಚಿರತೆ ಕೊಂದ ರೈತನ ವಿರುದ್ಧವೇ ಅರಣ್ಯ ಇಲಾಖೆಯ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ.
ಚಿರತೆ ದಾಳಿಯಿಂದ ರೈತನ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ತನಗೆ ಮತ್ತು ಮಗನ ಮೇಲೆ ಚಿರತೆ ದಾಳಿ ನಡೆಸಿದ್ದಕ್ಕೆ ರೈತ ಪ್ರತಿ ದಾಳಿ ನಡೆಸಿದ್ದ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕೊಂದ ಆರೋಪದಲ್ಲಿ ರೈತ ಬಾಬು ವಾಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗ್ಯಾಂಗ್ಡಾ ಗ್ರಾಮದ ತಮ್ಮ ಮನೆಯ ವರಾಂಡಾದಲ್ಲಿ ಬಾಬು ವಾಜಾ ವಿಶ್ರಾಂತಿ ಪಡೆಯುತ್ತಿದ್ದ ವೇಳೆ, ಸಮೀಪದ ಹೊಲದಿಂದ ಬಂದ ಚಿರತೆಯೊಂದು ಏಕಾಏಕಿ ದಾಳಿ ಮಾಡಿತ್ತು. ಚಿರತೆ ದಾಳಿಯನ್ನು ಕಂಡು ಬಾಬು ಅವರ ಮಗ ಶಾರ್ದೂಲ್ ತಂದೆಯ ರಕ್ಷಿಸಲು ಧಾವಿಸಿದ್ದು, ಚಿರತೆ ಅವನ ಮೇಲೆ ದಾಳಿ ಮಾಡಿತ್ತು. ಈ ವೇಳೆ, ಇಬ್ಬರೂ ಸೇರಿ ಚಿರತೆಯನ್ನು ಹೊಡೆದು ಕೊಂದಿದ್ದರು.
ಘಟನೆ ಕುರಿತು ಮಾತನಾಡಿದ ಬಾಬು ವಾಜಾ, “ಚಿರತೆ ನನ್ನ ತೋಳನ್ನು ಕಚ್ಚಿ ಎಳೆಯಲು ಶುರು ಮಾಡಿತ್ತು. ನನ್ನ ಕಿರುಚಾಟ ಕೇಳಿ ಮಗ ಶಾರ್ದೂಲ್ ಓಡಿ ಬಂದಿದ್ದ. ಚಿರತೆ ಅವನ ಮೇಲೂ ಹಾರಿ ಗಾಯಗೊಳಿಸಿತು. ಮಗನನ್ನು ಉಳಿಸಲು ಯತ್ನಿಸಿದಾಗ ಮತ್ತೆ ನನ್ನ ಮೇಲೆ ದಾಳಿ ಮಾಡಿತು. ಆಗ ಬೇರೆ ದಾರಿ ಇರಲಿಲ್ಲ. ಅಲ್ಲೇ ಇದ್ದ ಕತ್ತಿಯನ್ನು ತೆಗೆದುಕೊಂಡು ಚಿರತೆಗೆ ಹೊಡೆದೆ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಬಾಬು ಮತ್ತು ಅವರ ಮಗನ ಮುಂಗೈ ಹಾಗೂ ಹಣೆಯ ಭಾಗದಲ್ಲಿ ಗಾಯಗಳಾಗಿವೆ. ವರಾಂಡಾದಲ್ಲಿ ಇಡಲಾಗಿದ್ದ ಕತ್ತಿಯನ್ನೇ ಉಪಯೋಗಿಸಿ ಚಿರತೆಯನ್ನು ಕೊಂದು ಹಾಕಿದ್ದರು. ಘಟನೆಯ ಮಾಹಿತಿ ದೊರಕಿದ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
In Gujarat’s Gir Somnath district, a 60-year-old farmer hacked a leopard to death with a machete while trying to save his son from an attack. Though the farmer and his son suffered injuries in the incident, forest department officials have registered a case against him for killing the protected animal, triggering debate over self-defence versus wildlife protection laws.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
15-07-26 12:40 pm
HK News Staffer
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm