FM Sitharaman, Mohandas Pai, PM Modi, C.J. Roys Death: ದಯವಿಟ್ಟು ತೆರಿಗೆ ಭಯೋತ್ಪಾದನೆಯಿಂದ ರಕ್ಷಿಸಿ, ಸಿದ್ದಾರ್ಥ, ಸಿಜೆ ರಾಯ್ ಕಳಕೊಂಡಿದ್ದೇವೆ, ತೆರಿಗೆದಾರರಿಗೆ ರಕ್ಷಣೆ ಇಲ್ಲವೇ? ತಪ್ಪು ದಾಳಿಗೆ ಅಧಿಕಾರಿಗಳನ್ನು ಶಿಕ್ಷಿಸಿದ್ದೀರಾ? 

31-01-26 11:05 pm       Bangalore Correspondent   ಕರ್ನಾಟಕ

ಕಾನ್ಫಿಡೆಂಟ್‌ ಗ್ರೂಪ್‌ ಚೇರ್ಮನ್ ಸಿ.ಜೆ ರಾಯ್ ಅಕಾಲಿಕ ನಿಧನ ಉದ್ಯಮ ಲೋಕಕ್ಕೆ ಆಘಾತ ನೀಡಿದೆ. ಇದರ ಬೆನ್ನಲ್ಲೇ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸಾವಿಗೂ ತೆರಿಗೆ ದಾಳಿಗಳೇ ಕಾರಣ ಎಂದು ಉದ್ಯಮಿ ಮೋಹನದಾಸ್‌ ಪೈ ಹೇಳಿದ್ದಾರೆ.

ಬೆಂಗಳೂರು, ಜ.31: ಕಾನ್ಫಿಡೆಂಟ್‌ ಗ್ರೂಪ್‌ ಚೇರ್ಮನ್ ಸಿ.ಜೆ ರಾಯ್ ಅಕಾಲಿಕ ನಿಧನ ಉದ್ಯಮ ಲೋಕಕ್ಕೆ ಆಘಾತ ನೀಡಿದೆ. ಇದರ ಬೆನ್ನಲ್ಲೇ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಸಾವಿಗೂ ತೆರಿಗೆ ದಾಳಿಗಳೇ ಕಾರಣ ಎಂದು ಉದ್ಯಮಿ ಮೋಹನದಾಸ್‌ ಪೈ ಹೇಳಿದ್ದಾರೆ. ತೆರಿಗೆ ಅಧಿಕಾರಿಗಳ ದಾಳಿಗಳಿಂದ ತೆರಿಗೆದಾರರನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದಾರೆ. 

ಈ ಬಗ್ಗೆ ಟ್ವೀಟ್‌ ಮಾಡಿರುವ ಉದ್ಯಮಿ ಮೋಹನದಾಸ್ ಪೈ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ದಯವಿಟ್ಟು ಉದ್ಯಮಿ ಸಾವಿನ ಬಗ್ಗೆ ಪಾರದರ್ಶಕ ತನಿಖೆ ನಡೆಸಿ. ತೆರಿಗೆ ಭಯೋತ್ಪಾದನೆ ವರದಿಯಿಂದಾಗಿ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ತೆರಿಗೆ ಅಧಿಕಾರಿಗಳಿಂದ ಹಲವಾರು ಜನರು ಭಯಭೀತರಾಗಿದ್ದಾರೆ. ಇದು ನಾಗರಿಕ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ಮೋದಿಯವರೇ ದಯವಿಟ್ಟು ತೆರಿಗೆ ಪಾವತಿದಾರರನ್ನು ಈ ರೀತಿಯ ದಾಳಿಯಿಂದ ರಕ್ಷಿಸಿ. ಇಡೀ ದಾಳಿ ಪ್ರಕ್ರಿಯೆ ತುಂಬಾ ಕ್ರೂರವಾಗಿದೆ. ನಮ್ಮ ಹಣಕಾಸು ಸಚಿವರು ಅಂತಹ ಅಧಿಕಾರಿಗಳಿಗೆ ಹೆಚ್ಚು ಹೆಚ್ಚು ಅಧಿಕಾರಗಳನ್ನು ನೀಡುತ್ತಿದ್ದಾರೆ. ಆದರೆ, ನಾಗರಿಕರ ರಕ್ಷಣೆ ಎಲ್ಲಿದೆ? ತಪ್ಪು ದಾಳಿಗೆ ಅಧಿಕಾರಿಗಳಿಗೆ ಶಿಕ್ಷೆಯಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ 3 ವರ್ಷಗಳಲ್ಲಿ ನೇರ ತೆರಿಗೆಗಳ ಮೂಲಕ 72 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆಯೇ? ಇಂತಹ ದಾಳಿಗಳ ಮೂಲಕ ಎಷ್ಟು ಸಂಗ್ರಹಿಸಲಾಗಿದೆ? ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿ ಎಷ್ಟು ಮೊತ್ತ ಸಿಲುಕಿಕೊಂಡಿದೆ? ಪೂರ್ಣ ಮಾಹಿತಿಗಳನ್ನು ನೀಡಬೇಕು. ದಯವಿಟ್ಟು ತೆರಿಗೆ ಪಾವತಿದಾರರನ್ನು ರಕ್ಷಿಸಿ ಎಂದು ಪ್ರಧಾನಿಗಳಿಗೆ ಪೈ ಮನವಿ ಮಾಡಿದ್ದಾರೆ.

The sudden demise of Confident Group Chairman C.J. Roy has sparked fresh debate over alleged excesses during tax investigations. Entrepreneur Mohandas Pai has called upon Prime Minister Narendra Modi and Finance Minister Nirmala Sitharaman to ensure protection for taxpayers and order a transparent probe into the incident.