ಬ್ರೇಕಿಂಗ್ ನ್ಯೂಸ್
11-11-25 10:20 pm HK News Desk ದೇಶ - ವಿದೇಶ
ಕಾಸರಗೋಡು, ನ.11: ಸ್ಥಳೀಯ ನಾಗರಿಕರ ಪ್ರತಿಭಟನೆ, ಹೋರಾಟಗಳ ನಡುವೆಯೇ ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾದಲ್ಲಿ ನ.12ರ (ಬುಧವಾರ) ಬೆಳಗ್ಗೆ 8 ಗಂಟೆಯಿಂದ ಶುಲ್ಕ ವಸೂಲಿ ಆರಂಭಗೊಳ್ಳಲಿದೆ.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಘೋಷಣೆ ಮಾಡಿದ್ದು, ಜಾಹೀರಾತು ನೀಡುವ ಮೂಲಕ ಜನರಿಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಟಿಸಿದ ಅಧಿಸೂಚನೆಯಂತೆ ನ.12ರಂದು ಬೆಳಗ್ಗೆ 8ರಿಂದ ವಾಹನಗಳಿಂದ ಟೋಲ್ ಶುಲ್ಕ ವಸೂಲಿ ಮಾಡಲಿದೆ.
ಇದರಂತೆ ಕಾರು, ಜೀಪು, ವ್ಯಾನ್ ಸಹಿತ ಲಘು ವಾಹನಗಳ ಏಕಮುಖಿ ಸಂಚಾರಕ್ಕೆ ನಾಳೆಯಿಂದ 85 ರೂ. ಶುಲ್ಕ ಪಾವತಿಸಬೇಕು. ಮಿನಿ ಬಸ್ ಸಹಿತ ಇತರ ವಾಹನಗಳಿಗೆ ಸಂಚಾರಕ್ಕೆ 140 ರೂ., ಬಸ್, ಟ್ರಕ್ ಸಹಿತ ಘನ ವಾಹನಕ್ಕೆ 290 ರೂ. ಮತ್ತು ವಾಣಿಜ್ಯ ವಾಹನಗಳಿಗೆ 320 ರೂ. ಶುಲ್ಕ ಸೇರಿದಂತೆ ವಿವಿಧ ಕೆಟಗರಿ ನೀಡಲಾಗಿದೆ. ಟೋಲ್ ಪ್ಲಾಜಾ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರ ವಾಣಿಜ್ಯೇತರ ವಾಹನಗಳಿಗೆ ಪ್ರತಿ ತಿಂಗಳು 340 ರೂ. ಶುಲ್ಕ ನಿಗದಿಗೊಳಿಸಿ ಶುಲ್ಕದಲ್ಲಿ ವಿನಾಯ್ತಿ ನೀಡಿದೆ.
ಟೋಲ್ ಪ್ಲಾಜಾ ವಿರೋಧಿಸಿ ನಾಗರಿಕ ಕ್ರಿಯಾ ಸಮಿತಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು ತಡೆಯಾಜ್ಞೆ ನೀಡಲು ಕೋರಿದೆ. ಇದರ ತೀರ್ಪು ಬುಧವಾರ ಹೊರಬೀಳುವ ಸಾಧ್ಯತೆ ಇದೆ. ಇದಕ್ಕೂ ಮೊದಲೇ ಹೆದ್ದಾರಿ ಇಲಾಖೆ ಶುಲ್ಕ ಸಂಗ್ರಹಕ್ಕೆ ಮುಂದಾಗಿದೆ.
Despite ongoing public protests and opposition, toll collection at the Kumble Arikkadi Toll Plaza on the Kasaragod–Mangaluru National Highway will begin from 8 a.m. on Wednesday, November 12.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
14-10-26 08:40 pm
HK News Desk
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
14-10-26 08:55 pm
Mangaluru Staffer
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm