ಬ್ರೇಕಿಂಗ್ ನ್ಯೂಸ್
15-07-26 05:32 pm Mangalore Correspondent ಕರಾವಳಿ
ಮಂಗಳೂರು, ಜುಲೈ 15: ಪೊಲೀಸರು ಕೇವಲ ನಾಮಕಾವಸ್ತೆಗೆ ಬಾಂಗ್ಲಾದೇಶಿಗರನ್ನ ಹಿಡಿಯೋದಲ್ಲ. ಮಂಗಳೂರಿನಲ್ಲಿ ಯಾವ ಮಾಲ್ ನಲ್ಲಿ ಎಷ್ಟೆಷ್ಟು ಬಾಂಗ್ಲಾದೇಶಿ ಇದ್ದಾರೆ ಅನ್ನೋ ಲೆಕ್ಕ ಕೊಡುತ್ತೇವೆ. ನೀವು ನಮಗೆ ಫ್ರೀ ಹ್ಯಾಂಡ್ ಕೊಡಿ, ನಾವೇ ಹಿಡಿದುಕೊಡುತ್ತೇವೆ. ನೀವು ಕಾರ್ಯಾಚರಣೆ ಮಾಡದಿದ್ದಲ್ಲಿ ಬೆಂಗಳೂರು ರೀತಿ ನಾವು ಕಾರ್ಯಾಚರಣೆ ಮಾಡುತ್ತೇವೆ ಎಂದು ಹಿಂದು ಪರ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.
ಪ್ರಕರಣ ಒಂದಕ್ಕೆ ಸಂಬಂಧಿಸಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಪುನೀತ್ ಕೆರೆಹಳ್ಳಿ, ಮಂಗಳೂರಿನಲ್ಲಿ 19 ಮಂದಿ ಬಾಂಗ್ಲಾದೇಶಿಗಳ ಪತ್ತೆ ಹಿನ್ನೆಲೆ ಮಾಧ್ಯಮಕ್ಕೆ ಹೇಳಿಕೆ ನೀಡಿದರು. ಅಕ್ರಮ ಬಾಂಗ್ಲಾದೇಶಿಗಳಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ. ಇಲ್ಲಿನ ರಾಜಕೀಯ ನಾಯಕರ ಕೃಪೆಯಿಂದಲೇ ಅಕ್ರಮ ವಲಸಿಗರು ಹೆಚ್ಚುತ್ತಿದ್ದಾರೆ. ಮಂಗಳೂರಿನಲ್ಲಿ ಒಂದೇ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಾಂಗ್ಲಾನ್ನರು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಪೊಲೀಸರು ಕೇವಲ ನಾಮಕಾವಸ್ತೆಗೆ ಬಾಂಗ್ಲಾದೇಶಿಗರನ್ನ ಹಿಡಿಯುವಂತೆ ಆಗಬಾರದು. ಪೊಲೀಸ್ ಕಮಿಷನರ್ ನಮ್ಮ ಜೊತೆ ಕೈಜೋಡಿಸಿದರೆ ನಾವೇ ಹಿಡಿದು ಕೊಡುತ್ತೇವೆ. ಯಾವ ಯಾವ ಮುಸ್ಲಿಂ ಮುಖಂಡರು ಅವರಿಗೆ ಸಾಥ್ ಕೊಡುತ್ತಾರೆ ಅನ್ನೋ ಮಾಹಿತಿ ನಾವು ನೀಡುತ್ತೇವೆ ಎಂದು ಹೇಳಿದರು.
ಇಷ್ಟೊಂದು ಸಂಖ್ಯೆಯಲ್ಲಿ ಬಾಂಗ್ಲಾದೇಶ ನಿವಾಸಿಗಳು ಬರ್ತಿರೋವಾಗ ನಿಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ರೈಲಿನಲ್ಲಿ ಬಂದಿಳಿಯುವವರನ್ನ ವಿಚಾರಣೆ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ ಅವರು, ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಹೊಡೆತ ಕೊಟ್ಟ ವಿಚಾರ ಇದು. ನಾವು ಇದರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬಾಂಗ್ಲಾದೇಶಿಯರಿಗೆ ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಸಿಗುತ್ತಿದೆ. ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದು ಕರ್ನಾಟಕದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಾನೆ. ಕರ್ನಾಟಕದ ಮಹಾನಗರಗಳಲ್ಲೇ ಲಕ್ಷ ಲಕ್ಷ ಬಾಂಗ್ಲಾದೇಶಿಯರಿದ್ದಾರೆ. ದಾಖಲೆಗಳ ಸಮೇತ ನಾವು ಕಾರ್ಯಾಚರಣೆ ಮಾಡಿದ್ದೇವೆ.
ಉತ್ತರ ಭಾರತದಲ್ಲಿ ತೊಂದರೆಯಾದ್ರೆ ಈ ಬಾಂಗ್ಕಾದೇಶಿಯರಿಗೆ ಕರ್ನಾಟಕ ಯಾಕೆ ಸುರಕ್ಷಿತವಾಗಿದೆ. ಇವರಿಗೆ ಕರ್ನಾಟಕ ಯಾಕೆ ರಕ್ಷಣೆ ಕೊಡುತ್ತಿದೆ? ಕೆಲವು ಮುಸಲ್ಮಾನ್ ಮುಖಂಡರು ಕೆಲಸಕ್ಕೆಂದು ಕರೆ ತಂದು ರಕ್ಷಣೆ ಕೊಡುತ್ತಿದ್ದಾರೆ. ಗೃಹ ಇಲಾಖೆ, ಆಂತರಿಕ ಭದ್ರತಾ ವಿಭಾಗ ಸಂಪೂರ್ಣ ವಿಫಲವಾಗಿದೆ. ಗೃಹ ಮಂತ್ರಿಯಾದವರು ತಮ್ಮ ಕೆಲಸ ಮಾಡೋದು ಬಿಟ್ಟು ಗುಪ್ತಚರ ಇಲಾಖೆಯನ್ನ RSS, ಹಿಂದು ಕಾರ್ಯಕರ್ತರ ಹಿಂದೆ ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm