ಬ್ರೇಕಿಂಗ್ ನ್ಯೂಸ್
18-09-25 02:19 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.18 : ಕಾಂಗ್ರೆಸ್ ಸರಕಾರ ಜಾತಿ ಗಣತಿಯನ್ನು ತರಾತುರಿಯಲ್ಲಿ ಮಾಡುತ್ತಿರುವುದು ಏಕೆ. ಮೆಸ್ಕಾಂ ಸಿಬಂದಿ ಮೂಲಕ ಮನೆ ಮನೆಗೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದರ ಅರ್ಥ ಏನೆಂದು ಆ ಸಿಬಂದಿಗೂ ಗೊತ್ತಿಲ್ಲ. ಇದರಿಂದ ಮನೆಯವರಿಗೂ ಗಲಿಬಿಲಿ ಆಗಿದೆ. 60 ಪ್ರಶ್ನೆಗಳನ್ನು ಮುಂದಿಟ್ಟು ಹತ್ತು ದಿನದಲ್ಲಿ ಸಮೀಕ್ಷೆ ಮಾಡಬೇಕೆಂದರೆ ಹೇಗೆ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಜಾತಿ ಗಣತಿಯನ್ನು ಹೇಗೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಇದರ ಮೊದಲೇ ಜನರಿಗೆ ಮಾಹಿತಿ ನೀಡಬೇಕಿತ್ತು. ಅಧಿಕಾರಿಗಳು ಆಶಾ ಕಾರ್ಯಕರ್ತರು, ಶಿಕ್ಷಕರಿಗೂ ಮಾಹಿತಿ ನೀಡಬೇಕಿತ್ತು. ಈಗ ಅವರಿಗೂ ಮಾಹಿತಿ ಇಲ್ಲ. ತರಾತುರಿಯಲ್ಲಿ ಮಾಡಿಸಲು ಮುಂದಾಗಿದ್ದಾರೆ. ಈ ಹಿಂದೆ ಕಾಂತರಾಜು ಆಯೋಗದಿಂದ 135 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ ತಪ್ಪಾಗಿದೆ ಎಂದು ಮತ್ತೊಮ್ಮೆ ಸಮೀಕ್ಷೆ ನಡೆಸುತ್ತಿದ್ದಾರೆ. ಇದರಲ್ಲೂ ಅಂತಹದ್ದೇ ತಪ್ಪು ಆಗಿ ನೂರಾರು ಕೋಟಿ ಹಾಳಾಗುವಂತೆ ಆಗಬಾರದು ಎಂದರು.
ಜಾತಿ ಗಣತಿ ಮೂಲಕ ಸಿಎಂ ಸಿದ್ದರಾಮಯ್ಯ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಯೇ ಎಂಬ ಶಂಕೆ ಬಂದಿದೆ. ಯಾಕಂದ್ರೆ, 45 ಹಿಂದು ಉಪಜಾತಿಗಳಲ್ಲಿ ಬಿಲ್ಲವ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಅಂತ ಹಲವಾರು ಹೆಸರನ್ನು ಹೊಸತಾಗಿ ಸೇರಿಸಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂ ಆಗಿ ಮತಾಂತರ ಆದವರಿಗೆ ಮೀಸಲಾತಿ ಇದೆ. ಇದರ ನಡುವೆ ಹಿಂದುಳಿದ ಹಿಂದು ಜಾತಿಗಳ ನಡುವೆ ಇವರನ್ನು ಸೇರಿಸಿ ಅಲ್ಲೊಂದು ಹೊಸ ಪಂಗಡ ಸೃಷ್ಟಿಸುವ ಅಜೆಂಡಾ ಇರುವಂತೆ ಕಾಣುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದರು.
ಈಗಾಗಲೇ ಆಶಾ ಕಾರ್ಯಕರ್ತರು ತಮ್ಮ ಹತ್ತು ಸಾವಿರ ಗೌರವಧನ ಬಂದಿಲ್ಲ, ಬರದೇ ಇದ್ದರೆ ಸಮೀಕ್ಷೆ ಕಾರ್ಯ ಮಾಡಲ್ಲ ಅಂತಿದ್ದಾರೆ. ಅವರ ಹಣವನ್ನು ಮೊದಲು ಬಿಡುಗಡೆ ಮಾಡಿ, ಅವರಿಗೂ ಹಬ್ಬದ ಆಚರಣೆ ಇರುತ್ತದೆ. ಸರಕಾರಿ ಸಿಬಂದಿಯನ್ನು ನವರಾತ್ರಿ ಹಬ್ಬದ ನಡುವೆಯೇ ಜಾತಿ ಗಣತಿಗೆ ಬಳಸಿಕೊಳ್ಳುವುದು ಎಷ್ಟು ಸರಿಯೆಂದು ಪ್ರಶ್ನೆ ಮಾಡಬೇಕಾಗುತ್ತದೆ. ಮತಾಂತರ ಆದವರಿಗೆ ಹಿಂದುಗಳ ಉಪ ಜಾತಿಗಳ ಸೌಲಭ್ಯ ನೀಡುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆಯೇ ಎಂಬ ಸಂಶಯ ಇದೆ ಎಂದರು.
ಯುಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಸ್ತುವಾರಿ ಮಂತ್ರಿಯಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇವರು ಸರಕಾರದ ಪ್ರತಿನಿಧಿಯಲ್ಲ. ಆದರೆ ಸರಕಾರದ ಪ್ರತಿನಿಧಿಯಂತೆ ಉಸ್ತುವಾರಿ ಸಚಿವರು ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ. ಜಾತಿ ಗಣತಿಯಲ್ಲಿ ಮೊದಲೇ ಸ್ಟಿಕ್ಕರ್ ಅಂಟಿಸಿ ಗೊಂದಲ ಮಾಡಿದ್ದೇಕೆ ಎಂದು ಕೇಳಿದಾಗ, ಅದರ ಬಗ್ಗೆ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ ಎನ್ನುತ್ತಾರೆ. ಇವರು ಬೇಕಾದರೆ ಸ್ಪೀಕರ್ ಸ್ಥಾನವನ್ನು ಗುಂಡೂರಾಯರಿಗೆ ಬಿಟ್ಟು ಕೊಡಲಿ, ಇವರೇ ಉಸ್ತುವಾರಿ ಆಗಲಿ, ಎರಡೂ ಕೆಲಸವನ್ನು ಒಬ್ಬರೇ ಮಾಡುವುದು ಸರಿ ಕಾಣಲ್ಲ ಎಂದರು.
The ongoing caste census in Karnataka has sparked fresh controversy, with BJP leaders alleging that the Congress government is rushing the process without proper planning, causing confusion among both citizens and surveyors.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 04:31 pm
Mangalore Correspondent
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm