Cloudburst, Dehradun: ಡೆಹ್ರಾಡೂನ್‌ನಲ್ಲಿ ಭಾರೀ ಮೇಘಸ್ಫೋಟ ; ಇಬ್ಬರು ನಾಪತ್ತೆ, ಋಷಿಕೇಶ, ತಪಕೇಶ್ವರ ದೇವಾಲಯ ಜಲಾವೃತ, ಪ್ರವಾಸಿಗರು ಸಂಕಷ್ಟದಲ್ಲಿ

16-09-25 02:46 pm       HK News Desk   ದೇಶ - ವಿದೇಶ

ಭಾರೀ ಮಳೆಯಿಂದಾಗಿ ಸೋಮವಾರ ರಾತ್ರಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ಹಲವಾರು ಮನೆಗಳು ಮುಳುಗಿ ಸಹಸ್ತ್ರಧಾರ ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ಜಲಾವೃತಗೊಂಡಿದೆ. ಈ ಮಧ್ಯೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಡೆಹ್ರಾಡೂನ್ (ಉತ್ತರಾಖಂಡ), ಸೆ.16 :  ಭಾರೀ ಮಳೆಯಿಂದಾಗಿ ಸೋಮವಾರ ರಾತ್ರಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ಹಲವಾರು ಮನೆಗಳು ಮುಳುಗಿ ಸಹಸ್ತ್ರಧಾರ ಮತ್ತು ಐಟಿ ಪಾರ್ಕ್ ಪ್ರದೇಶದಲ್ಲಿ ಜಲಾವೃತಗೊಂಡಿದೆ. ಈ ಮಧ್ಯೆ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ. ಮೇಘಸ್ಫೋಟ ಮತ್ತು ಭಾರಿ ಪ್ರವಾಹ ಪರಿಸ್ಥಿತಿಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹಾನಿ ಉಂಟಾಗಿದ್ದು, ಆ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ನಿರಂತರ ಮಳೆಯಿಂದ ಹೊಳೆ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು ಸೋಮವಾರ ತಡರಾತ್ರಿ ಪ್ರಮುಖ ಸೇತುವೆ ಕುಸಿದು ಅದರ ದಡದಲ್ಲಿರುವ ಆಸ್ತಿ ಪಾಸ್ತಿಗೆ ವ್ಯಾಪಕ ಹಾನಿಯಾಗಿದೆ.  ನೀರಿನ ಮಟ್ಟ 10-12 ಅಡಿಗಳಿಗೆ ಏರಿಕೆಯಾಗಿದೆ. ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. 

Dehradun Cloudburst: Tapkeshwar Mahadev in Dehradun goes underwater as  Tamsa River swells after cloudburst | WATCH

Tapkeshwar Mahadev temple flooded after cloudburst in Dehradun - The  Economic Times

Dehradun cloudburst: Tapkeshwar Mahadev temple under water, Sahastradhara  market inundated | Watch

In Photos: Floods triggered by cloudburst ravage the streets of Dehradun,  causing widespread destruction to life and property - business-gallery News  | The Financial Express

ಮಂಗಳವಾರ ಬೆಳಗ್ಗೆ 4:45 ರ ಸುಮಾರಿಗೆ, ನೀರು ದೇವಾಲಯ ಪ್ರವೇಶಿಸಿತು.  ಕ್ರಮೇಣ ನೀರಿನ ಮಟ್ಟ ಹೆಚ್ಚಾಗಲು ಆರಂಭವಾಗಿ, 10-12 ಅಡಿಗಳಿಗೆ ನೀರಿನ ಮಟ್ಟ ತಲುಪಿತು. ಶಿವಲಿಂಗವನ್ನೂ ನೀರು ತಲುಪಿತು. ಬಳಿಕ ಹಗ್ಗದ ಸಹಾಯದಿಂದ ನಾವು ಮೇಲಕ್ಕೆ ಬಂದೆವು ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಭಾರೀ ಮಳೆಯು ಋಷಿಕೇಶದ ಮೇಲೂ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಭಾಗ ನದಿ ಬೆಳಿಗ್ಗೆಯಿಂದ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದು, ನೀರು ಹೆದ್ದಾರಿಯನ್ನು ತಲುಪಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮಾಹಿತಿಯ ಪ್ರಕಾರ, ನದಿಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯೆ ನೀಡಿದ್ದು, ಡೆಹ್ರಾಡೂನ್‌ನ ಸಹಸ್ತ್ರಧಾರದಲ್ಲಿ ಭಾರೀ ಮಳೆಯಿಂದಾಗಿ ಅಂಗಡಿಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ. ಗೃಹ ಸಚಿವ ಅಮಿತ್ ಷಾ ಮುಖ್ಯಮಂತ್ರಿಯವರ ಜೊತೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಗೃಹ ಸಚಿವಾಲಯದಿಂದ ಸಾಧ್ಯವಿರುವ ಎಲ್ಲ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

A severe cloudburst struck Dehradun late Monday night, triggering flash floods and widespread waterlogging in several parts of the city. The sudden deluge led to the Tamsa River overflowing, submerging houses and flooding key areas like Sahastradhara and IT Park. According to initial reports, two individuals are reported missing.