Bangalore Suicide, Air force: ಸಹೋದರಿ ಜೊತೆ ಜಗಳ ; 24 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ 25 ವರ್ಷದ ವಾಯುಪಡೆ ಎಂಜಿನಿಯರ್‌ ಅಣ್ಣ

15-09-25 08:53 pm       Bangalore Correspondent   ಕರ್ನಾಟಕ

ಅಪಾರ್ಟ್‌ಮೆಂಟ್ ನ 24 ನೇ ಮಹಡಿಯಿಂದ ಹಾರಿ 25 ವರ್ಷದ ಭಾರತೀಯ ವಾಯುಪಡೆಯ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು, ಸೆ 15: ಅಪಾರ್ಟ್‌ಮೆಂಟ್ ನ 24 ನೇ ಮಹಡಿಯಿಂದ ಹಾರಿ 25 ವರ್ಷದ ಭಾರತೀಯ ವಾಯುಪಡೆಯ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತನನ್ನು 25 ವರ್ಷದ ಲೋಕೇಶ್ ಪವನ್ ಕೃಷ್ಣ ಎಂದು ಗುರುತಿಸಲಾಗಿದ್ದು, ಅವರು ಹಲಸೂರು ಮಿಲಿಟರಿ ಕ್ವಾರ್ಟರ್ಸ್‌ನಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿ ಅಪಾರ್ಟ್‌ಮೆಂಟ್‌ನ 24 ನೇ ಮಹಡಿಯಿಂದ ಲೋಕೇಶ್ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹೋದರಿ ಜೊತೆ ಜಗಳ, ಆತ್ಮಹತ್ಯೆ:

ಲೋಕೇಶ್‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊಲೀಸರಿಗೆ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಆನಂತರ ಲೋಕೇಶ್‌ ಅವರ ಮೃತದೇಹ ಪಡೆದು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಪವನ್ ಕೃಷ್ಣ ತಮ್ಮ ಸಹೋದರಿ ಲಕ್ಷ್ಮಿ ಮನೆಗೆ ತೆರಳಿದ್ದರು. ಅವರನ್ನು ಭೇಟಿ ಮಾಡಿ ಬಂದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. ಅಲ್ಲಿ ನಡೆದ ಜಗಳ ಅವರ ಮನಸ್ಥಿತಿಯನ್ನು ಕಲಕುವಂತೆ ಮಾಡಿದೆ. ಹೀಗಾಗಿ, ಕೋಪದ ಭರದಲ್ಲಿ, ಅಪಾರ್ಟ್‌ಮೆಂಟ್‌ನಿಂದ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

An Indian Air Force engineer, who has been living in Bengaluru, died by suicide after jumping from the 24th floor on Sunday evening. The engineer has been identified as Lokesh Pavan Krishna, 25, who was residing at the Halasuru Military quarters. According to the police, Lokesh took the step in a fit of rage following a visit to his sister's place.