Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು

17-09-25 10:37 pm       Mangalore Correspondent   ಕರಾವಳಿ

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಆಗಸ್ಟ್ 26ರಂದು ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ಮನೆಯಲ್ಲಿ ಶೋಧ ನಡೆಸಿದ್ದ ವೇಳೆ ತಲವಾರು ಮತ್ತು ಬಂದೂಕು ಪತ್ತೆಯಾಗಿತ್ತು.

ಮಂಗಳೂರು, ಸೆ.17 : ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಆಗಸ್ಟ್ 26ರಂದು ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ಮನೆಯಲ್ಲಿ ಶೋಧ ನಡೆಸಿದ್ದ ವೇಳೆ ತಲವಾರು ಮತ್ತು ಬಂದೂಕು ಪತ್ತೆಯಾಗಿತ್ತು.

ಈ ಬಗ್ಗೆ ಎಸ್ಐಟಿ ಎಸ್ಪಿ ಸೈಮನ್ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಾಗಿದೆ. ಮನೆಯಲ್ಲಿ ಶೋಧ ಕಾರ್ಯ ನಡೆಸಿದ ವೇಳೆ ವಶಕ್ಕೆ ಪಡೆದ ಸೊತ್ತುಗಳನ್ನು ಬೆಳ್ತಂಗಡಿ ಕೋರ್ಟಿಗೆ ಒಪ್ಪಿಸಲಾಗಿತ್ತು. ಈ ವೇಳೆ ಎರಡು ತಲವಾರು ಮತ್ತು ಒಂದು ಬಂದೂಕು ಸಿಕ್ಕಿತ್ತು ಎನ್ನಲಾಗಿತ್ತು.

ಈ ಬಗ್ಗೆ ಎಸ್ಐಟಿ ಎಸ್ಪಿ ಸೈಮನ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅರುಣ್ ಅವರಿಗೆ ಮಾಹಿತಿ ನೀಡಿದ್ದರು. ಅದನ್ನೇ ದೂರು ಆಗಿ ಸ್ವೀಕರಿಸಿ ಬೆಳ್ತಂಗಡಿ ಠಾಣೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು ಎಫ್ಐರ್ ದಾಖಲಿಸಲಾಗಿದೆ. ಕಲಂ 25(1), 1-ಎ, ಮತ್ತು 25 (1) ಬಿ ಆರ್ಮ್ಸ್ ಏಕ್ಟ್ ಅಡಿ ಕೇಸು ದಾಖಲಾಗಿದೆ.

Activist Mahesh Shetty Timarodi, known for supporting the Saujanya case protests, is now facing a second FIR, this time under the Arms Act, registered at the Belthangady Police Station.