ಬ್ರೇಕಿಂಗ್ ನ್ಯೂಸ್
20-02-26 10:08 pm Mangaluru Staffer ಕ್ರೈಂ
ಮಂಗಳೂರು, ಫೆ.20: ಮಂಗಳೂರಿಗೆ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಬಂದ ಬೆನ್ನಲ್ಲೇ ಮೊದಲಿಗೆ ಮಾಡಿದ್ದು ಹಳೆ ಅಪರಾಧಿಗಳು ಮತ್ತು ತಲೆಮರೆಸಿಕೊಂಡ ಆಸಾಮಿಗಳ ಪಟ್ಟಿ ತೆಗೆಸಿದ್ದು. ಈ ಪಟ್ಟಿಯಲ್ಲಿ 9 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ಮೂಲ್ಕಿ ಮೂಲದ ಸಫ್ವಾನ್ ಹುಸೇನ್ ಪತ್ತೆಗೆ ಆಗಿನಿಂದಲೇ ಆರ್ಡರ್ ಮಾಡಿದ್ದರು. ಪ್ರತಿ ಮೀಟಿಂಗ್ ನಲ್ಲೂ ಏನ್ಮಾಡಿದ್ರಿ, ಎಲ್ಲೇ ಹೋದ್ರೂ ಕುಟುಂಬ, ಮಕ್ಕಳು ಅಂತ ಆದ್ಮೇಲೆ ಬಂದೇ ಬರಬೇಕಲ್ವಾ. ನೀವು ಅವರ ಕುಟುಂಬದ ಬೆನ್ನುಬಿದ್ದರೆ ಸಿಕ್ಕೇ ಸಿಗುತ್ತಾನೆ ಎಂದು ಹೇಳುತ್ತಿದ್ದರು.

ಆದರೆ ಪೊಲೀಸರು ಯಾವ ಕೋನದಿಂದ ನೋಡಿದರೂ, ಆತನ ಸುಳಿವು ಸಿಕ್ಕಿರಲಿಲ್ಲ. ಫೇಕ್ ಸರ್ಟಿಫಿಕೇಟ್ ಮಾಡಿಸಿ ವಿದೇಶಕ್ಕೆ ಹಾರಿದ್ದಾನೆಂಬ ಮಾಹಿತಿ ಇದ್ದರೂ, ಎಲ್ಲಿದ್ದಾನೆ, ಯಾವ ಹೆಸರಿನಲ್ಲಿದ್ದಾನೆ ಎನ್ನುವುದು ಗೊತ್ತಾಗಿರಲಿಲ್ಲ. ಹೀಗಾಗಿ ಸಫ್ವಾನ್ ಹುಸೇನ್ ಪತ್ತೆಯ ಹೊಣೆಯನ್ನು ಮಂಗಳೂರು ಸಿಸಿಬಿ ತಂಡಕ್ಕೆ ವಹಿಸಲಾಗಿತ್ತು. ಇದಕ್ಕಾಗಿಯೇ ಎಸಿಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡವೊಂದನ್ನೂ ರಚಿಸಿದ್ದರು. ಇದೇ ವೇಳೆ, ವಿದೇಶದಲ್ಲಿರುವ ಮಂಗಳೂರು ಮೂಲದ ಉದ್ಯಮಿಗಳನ್ನು ಸಂಪರ್ಕಿಸಿ ಸಫ್ವಾನ್ ಇದ್ದಾನೆಯೇ ಎಂದು ಮಾಹಿತಿ ಸಂಗ್ರಹಿಸಿದ್ದರು.

ಕೆಲವರು ಸಫ್ವಾನ್ ವಿದೇಶದಲ್ಲಿದ್ದುದು, ಆಮೇಲೆ ತೆರಳಿದ್ದು ಮತ್ತು ಅಲ್ಲಿರುವಾಗ ಹಣಕ್ಕಾಗಿ ಪೀಡಿಸಿದ್ದ ಮಾಹಿತಿಯನ್ನೂ ನೀಡಿದ್ದರು. ಆದರೆ ದೂರು ಕೊಡುವ ಗೋಜಿಗೆ ಹೋಗಿರಲಿಲ್ಲ. ಯಾಕಂದ್ರೆ, ಸಫ್ವಾನ್ ಹುಸೇನ್ ಅಂಥ ನಟೋರಿಯಸ್ ಹಿನ್ನೆಲೆಯಿದ್ದ ಆಸಾಮಿಯಾಗಿದ್ದ. ಕೊಲೆ, ಸುಲಿಗೆ, ದರೋಡೆ, ಗ್ಯಾಂಗ್ ರೇಪ್ ಸೇರಿದಂತೆ ಬರೋಬ್ಬರಿ 31ಕ್ಕೂ ಹೆಚ್ಚು ಪ್ರಕರಣ, ಒಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರೂ ಯಾರೊಂದಿಗೂ ತನ್ನ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದೆ ಚಾಣಾಕ್ಷತನ ತೋರಿಸಿಕೊಂಡಿದ್ದ ಸಫ್ವಾನ್ ಬಗ್ಗೆ ಯಾರಿಗಾದ್ರೂ ಮಾಹಿತಿ ಇದ್ದರೂ ಅದನ್ನು ಹಂಚಿಕೊಳ್ಳುವುದಕ್ಕೂ ಹೆದರುತ್ತಿದ್ದರು.

ನಾಲ್ಕು ತಿಂಗಳ ಹಿಂದೆ ನಕಲಿ ಹೆಸರಿನಲ್ಲಿ ಆಂಧ್ರದಲ್ಲಿ ಅಡಗಿದ್ದಾನೆಂಬ ಸಣ್ಣ ಸುಳಿವು ಸಿಗುತ್ತಿದ್ದಂತೆ ಮಂಗಳೂರಿನ ಯುವ ಎಸಿಪಿ ದರ್ಜೆಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಪೊಲೀಸರ ತಂಡ ಶೋಧಕ್ಕೆ ಇಳಿದಿತ್ತು. ತಮಿಳುನಾಡು, ಆಂಧ್ರಪ್ರದೇಶ, ಕೇರಳಕ್ಕೆ ತೆರಳಿಯೂ ತಡಕಾಡಿತ್ತು. ಎರಡು ತಿಂಗಳ ಹಿಂದೆ ರಣವೀರ್ ಸಿಂಗ್ ನಟನೆಯ ದುರಂಧರ್ ಸಿನಿಮಾ ಬಾಲಿವುಡ್ಡಿನಲ್ಲಿ ಭಾರೀ ಸದ್ದು ಮಾಡಿತ್ತು. ಡಿಟೆಕ್ಟಿವ್ ಆಗಿದ್ದ ರಣವೀರ್ ಪಾಕಿಸ್ತಾನಕ್ಕೆ ಮಾರುವೇಷದಲ್ಲಿ ಹೋಗಿ ಅಲ್ಲಿನ ಪಂಟರ್ ಗಳನ್ನು ಸದ್ದಿಲ್ಲದೆ ಮುಗಿಸುವ ಕಥಾನಕ ಇತ್ತು. ದುರಂಧರ್ ರೀತಿಯಲ್ಲೇ ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಸಫ್ವಾನ್ ಪತ್ತೆಗಾಗಿ ವೇಷ ಮರೆಸಿಕೊಂಡೇ ಸುತ್ತಾಡುವ ನಿರ್ಧಾರಕ್ಕೆ ಬಂದಿದ್ದರು.

ಮುಸ್ಲಿಂ ಬಾಹುಳ್ಯವಿದ್ದ ಜಾಗದಲ್ಲಿ ಅಲ್ಲಿನವರ ರೀತಿಯಲ್ಲೇ ವೇಷವನ್ನೇ ಧರಿಸುವಂತಾಗಿತ್ತು. ಗಡ್ಡ ಬಿಟ್ಟುಕೊಂಡು, ಪಂಚೆ ಕಟ್ಟಿಕೊಂಡು ತೆಲುಗು ಭಾಷೆಯನ್ನಾಡುತ್ತ ಮಾಹಿತಿ ಸಂಗ್ರಹಿಸಿದ್ದರು. ಆದರೆ ಆರೋಪಿ ಮುಖ, ದೇಹದ ಚಹರೆ ಬದಲಾಗಿದ್ದು, ಅಲ್ಲಿನವರೊಂದಿಗೆ ಅದೇ ಊರಿನವರಂತೆ ದೇಹ, ಭಾಷೆ ಬದಲಿಸಿಕೊಂಡಿದ್ದು ಆತನ ಪತ್ತೆ ಸವಾಲಾಗಿತ್ತು. ತಿಂಗಳ ಕಾಲ ಆ ಊರಿನಲ್ಲಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಂತೆ ಅನುಮಾನ ಬಲಗೊಳ್ಳತೊಡಗಿತ್ತು. ಇಡೀ ತಂಡವನ್ನು ರಾಯಚೋಟಿಗೆ ಕರೆಸಿಕೊಂಡು ಸ್ಥಳೀಯ ಪೊಲೀಸರ ನೆರವಿನಲ್ಲಿ ಸಫ್ವಾನ್ ಹುಸೇನ್ ಅಲಿಯಾಸ್ ಯು.ಎಂ. ನಾಸಿರ್ ಆಗಿದ್ದ ವ್ಯಕ್ತಿಯನ್ನು ಬಲೆಗೆ ಕೆಡವಿದ್ದರು.
ಅಪ್ಪ, ಅಮ್ಮನನ್ನೇ ಬದಲಿಸಿದ್ದ ಆಸಾಮಿ!
ಪೊಲೀಸರಿಂದ ಬಂಧನ ತಪ್ಪಿಸಲು ಮತ್ತು ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕಾಗಿ ಸಫ್ವಾನ್ ಹುಸೇನ್ ತನ್ನ ಅಪ್ಪ, ಅಮ್ಮನ ಹೆಸರನ್ನೇ ಬದಲಿಸಿಕೊಂಡಿದ್ದ. ತಂದೆ ಹಮ್ಮಬ್ಬ ಬದಲು ಉಮ್ಮರ್ ಮೊಹಮ್ಮದ್ ಎಂದು ಮಾಡಿಕೊಂಡು ತನ್ನ ಹೆಸರನ್ನು ಯು.ಎಂ. ನಾಸಿರ್ ಎಂದು ಮಾಡಿಕೊಂಡಿದ್ದ. ತನ್ನ ಊರು ಮುಲ್ಕಿ ಬಳಿಯ ಹಳೆಯಂಗಡಿ ಬದಲು ಆಂಧ್ರಪ್ರದೇಶದ ರಾಯಚೋಟಿ ಎಂದು ನಮೂದಿಸಿದ್ದ.
ಈ ಹಿಂದೆ ಸಫ್ವಾನ್ ಹುಸೇನ್ ಬಳ್ಳಾರಿ ಜೈಲಿನಲ್ಲಿದ್ದಾಗ ಕೊಟ್ರೇಶಿ ಯಾನೆ ಸೂಫಿಯಾನ್ ಎನ್ನುವಾತನ ಪರಿಚಯ ಆಗಿತ್ತು. ಆತನ ಸೂಚನೆಯಂತೆ ಆಂಧ್ರಪ್ರದೇಶದ ರಾಯಚೋಟಿಗೆ ತೆರಳಿ ಏಕಾಂಗಿ ಜೀವನ ರೂಪಿಸಿಕೊಂಡಿದ್ದ. ವ್ಯಕ್ತಿಯೊಬ್ಬನ ಬಳಿ ಆಶ್ರಯ ಪಡೆದು ಜೈಲಿನಲ್ಲಿ ಗೆಳೆಯರಾಗಿದ್ದ ಶಂಸುದ್ದೀನ್ ಮತ್ತು ಸೂಫಿಯಾನ್ ಜೊತೆ ಸೇರಿ ಕ್ಯಾಂಟೀನ್ ಮಾಡಿ ಜೀವನ ನಡೆಸುತ್ತಿದ್ದ. ಮೊದಲಿಗೆ ಮೈಸೂರು ವಿಳಾಸದಲ್ಲಿ ನಕಲಿ ಸರ್ಟಿಫಿಕೇಟ್ ಮಾಡಿಸಿದ್ದರೂ, ಆನಂತರ ತನ್ನ ಆಧಾರ್ ಕಾರ್ಡನ್ನು ರಾಯಚೋಟಿ ವಿಳಾಸಕ್ಕೆ ಬದಲಿಸಿದ್ದ. ಅಲ್ಲಿದ್ದಾಗಲೇ ಪಾಸ್ ಪೋರ್ಟ್ ಮಾಡಿಸಿಕೊಂಡು ಅಲ್ಲಿಂದ ವಿದೇಶಕ್ಕೆ ಹಾರಿದ್ದ.


ಅಪರಾಧ ಬಿಟ್ಟು ಸಂಸಾರಿಯಾಗಿದ್ದ ಸಫ್ವಾನ್
ವಿದೇಶಕ್ಕೆ ಹೋದರೂ ಸಫ್ವಾನ್ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಅಲ್ಲಿ ತನ್ನ ಊರಿನಿಂದ ಬಂದು ಬಿಸಿನೆಸ್ ಮಾಡುತ್ತಿದ್ದವರನ್ನು ಸಂಪರ್ಕಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ಈ ನಡುವೆ, ಆಂಧ್ರಕ್ಕೆ ಬಂದು ಹೋಗುತ್ತಿದ್ದರೂ ಮಂಗಳೂರಿನ ನಂಟನ್ನು ಮಾತ್ರ ಕಡಿದುಕೊಂಡಿದ್ದ. ಇದೇ ವೇಳೆ, 2021ರಲ್ಲಿ ರಾಯಚೋಟಿಯ ಇಸ್ಮಾಯಿಲ್ ಎಂಬವರ ಪುತ್ರಿಯನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನೂ ಮಾಡಿದ್ದಾನೆ. ಕುಟುಂಬ ಜೀವನದ ಬಳಿಕ ಹಳೆಯ ಅಪರಾಧ ಲೋಕಕ್ಕೆ ಗುಡ್ ಬೈ ಹೇಳಿ ಸಂಸಾರದಲ್ಲೇ ಬಿಝಿಯಾಗಿದ್ದ. ಆದರೆ ಅಷ್ಟರಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು ರಾಯಚೋಟಿಯ ಮನೆಯಿಂದಲೇ ಆಸಾಮಿಯನ್ನು ಎತ್ತಾಕ್ಕೊಂಡು ಬಂದಿದ್ದಾರೆ.
ಮಂಗಳೂರಿನ ಅಪರಾಧ ಲೋಕದಲ್ಲಿ ಸಫ್ವಾನ್ ಹುಸೇನ್ ತುಂಬ ಚಾಣಾಕ್ಷ ಮತ್ತು ಅಷ್ಟೇ ನಟೋರಿಯಸ್ ಆಗಿದ್ದ ವ್ಯಕ್ತಿ. ಹಿಂದೆ ಉಳ್ಳಾಲದಲ್ಲಿ ನಟೋರಿಯಸ್ ಗ್ರೂಪ್ ಕಟ್ಟಿಕೊಂಡಿದ್ದ ಟಾರ್ಗೆಟ್ ಇಲ್ಯಾಸ್ ಮೇಲೆಯೂ ಹಲ್ಲೆಗೈದಿದ್ದ ಸಫ್ವಾನ್ ಹೆಚ್ಚು ಕಮ್ಮಿ ಒಂಟಿ ತೋಳದ ರೀತಿಯೇ ಇದ್ದವನು. ಮಂಗಳೂರಿನಿಂದ ತಪ್ಪಿಸಿಕೊಂಡ ಬಳಿಕ ಇಲ್ಲಿನ ಯಾರೊಬ್ಬ ಪಂಟರ್ ಗಳ ಜೊತೆಗೂ ಸಂಪರ್ಕವನ್ನೇ ಇಟ್ಟುಕೊಳ್ಳದೆ ಪೊಲೀಸರ ಕೈಗೂ ಸಿಗದೆ ತನ್ನದೇ ದಾರಿ ಕಂಡುಕೊಂಡಿದ್ದ. ಮಂಗಳೂರು ಪೊಲೀಸರು ಕೂಡ ಸಫ್ವಾನ್ ಪತ್ತೆಯಿಲ್ಲ ಎಂದೇ ಕೋರ್ಟಿಗೂ ಮಾಹಿತಿ ನೀಡಿ ತಲೆಕೆಡಿಸುವುದನ್ನು ಬಿಟ್ಟಿದ್ದರು. ಆದರೆ, ಬಹುಕಾಲದ ಬಳಿಕ ಹಳೆ ಪಂಟರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎನ್ನುವುದು ಅಪರಾಧ ಲೋಕದಲ್ಲಿ ಸಣ್ಣಗಿನ ಮಿಂಚು ಹರಿಸಿದೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 08:29 pm
HK News Staffer
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm