ಬ್ರೇಕಿಂಗ್ ನ್ಯೂಸ್
21-02-26 03:07 pm HK News Desk ದೇಶ - ವಿದೇಶ
ವಾಷಿಂಗ್ಟನ್, ಫೆ.21: ಡೊನಾಲ್ಡ್ ಟ್ರಂಪ್ ಆಡಳಿತವು ಜಾಗತಿಕವಾಗಿ ಸುಂಕಗಳನ್ನು ಹೇರಿರುವುದು ಕಾನೂನುಬಾಹಿರ ಎಂದು ಘೋಷಿಸಿದ ಅಮೆರಿಕದ ಸುಪ್ರೀಂಕೋರ್ಟ್ ವಿರುದ್ಧವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗಿ ಬಿದ್ದಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು "ಮೂರ್ಖರು" ಎಂದು ಜರೆದಿರುವ ಟ್ರಂಪ್, ತಮ್ಮ ಸುಂಕ ನೀತಿಗಳನ್ನು ಇರುವ ರೀತಿಯಲ್ಲೇ ಮುಂದುವರೆಸುವುದಾಗಿ ಘೋಷಿಸಿದ್ದಾರೆ.
"ನಮ್ಮ ದೇಶಕ್ಕೆ ಸರಿಯಾದದ್ದನ್ನು ಮಾಡಲು ಧೈರ್ಯವಿಲ್ಲದ ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ" ಎಂದು ಅವರು ಹೇಳಿದ್ದಾರೆ. ಸುಂಕ ಯುದ್ಧವನ್ನು ದೃಢವಾಗಿ ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್, ಯಾವುದೇ ಕಾರಣಕ್ಕೂ ಸುಂಕ ನೀತಿಯನ್ನು ಮರಳಿ ಪಡೆಯುವುದಿಲ್ಲ. ಅಲ್ಲದೆ, ಜಾಗತಿಕವಾಗಿ ಎಲ್ಲ ದೇಶಗಳ ಮೇಲೆಯೂ ಹತ್ತು ಶೇಕಡಾ ಹೆಚ್ಚುವರಿ ಸುಂಕ ಹೇರುವುದಾಗಿ ಹೇಳಿದ್ದಾರೆ.
ಸುಂಕ ನೀತಿ ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪ ಮಾಡಿರುವ ಅಮೆರಿಕ ಅಧ್ಯಕ್ಷ, "ದೇಶಭಕ್ತಿ ಇಲ್ಲದ ಮತ್ತು ಸಂವಿಧಾನಕ್ಕೆ ನಿಷ್ಠರಲ್ಲದವರು" ಎಂದು ವಾಗ್ದಾಳಿ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಗಳು ಅಮೆರಿಕದಲ್ಲಿ ಸಂಚಲನ ಎಬ್ಬಿಸಿದ್ದು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ತಿಕ್ಕಾಟ ಏರ್ಪಡಿಸಿದೆ.
ಸುಪ್ರೀಂಕೋರ್ಟಿನ ಸುಂಕ ವಿರೋಧಿ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಥಾಮಸ್, ಅಲಿಟೊ ಮತ್ತು ಕವನಾಗ್ ಅವರನ್ನು ಪ್ರಶಂಸಿಸಿರುವ ಡೊನಾಲ್ಡ್ ಟ್ರಂಪ್, "ಈ ನ್ಯಾಯಾಧೀಶರ ಶಕ್ತಿ ಮತ್ತು ಬುದ್ಧಿವಂತಿಕೆಗಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ನಾನು ಲಕ್ಷಾಂತರ ಮತಗಳಿಂದ ಗೆದ್ದಿದ್ದೇನೆ. ಆದರೆ ಈ ಜನರು ಅಮೆರಿಕದ ಹಿತಾಸಕ್ತಿಗಳನ್ನು ಬಲಿಕೊಡುತ್ತಿದ್ದಾರೆ. ಅಜ್ಞಾನಿಗಳ ಈ ಗುಂಪು ನಮ್ಮ ರಾಷ್ಟ್ರವನ್ನು ನಿರ್ನಾಮ ಮಾಡಲಿದೆ. ಆದರೆ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಡೊನಾಲ್ಡ್ ಟ್ರಂಪ್ ನ್ಯಾಯಾಧೀಶರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜಾಗತಿಕವಾಗಿ ತೀವ್ರ ಆರ್ಥಿಕ ಬಿಕ್ಕಟ್ಟು ಮೂಡಿಸಿರುವ ಟ್ರಂಪ್ ಪ್ರತಿ ಸುಂಕ ನೀತಿಯನ್ನು ವಿರೋಧಿಸಿದ್ದ ಅಮೆರಿಕದ ಸುಪ್ರೀಂ ಕೋರ್ಟ್, ಟ್ರಂಪ್ ವಿರುದ್ಧವಾಗಿ ತೀರ್ಪು ನೀಡಿದೆ. ಅಲ್ಲದೆ, ಪ್ರತಿ ಸುಂಕವನ್ನು ಕಾನೂನುಬಾಹಿರವೆಂದು ಹೇಳಿ ರದ್ದುಗೊಳಿಸಲು ತೀರ್ಪಿನಲ್ಲಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೇರಿದಂತೆ 9 ನ್ಯಾಯಾಧೀಶರ ಪೈಕಿ ಆರು ಮಂದಿ ಟ್ರಂಪ್ ಸುಂಕದ ವಿರುದ್ಧ ತೀರ್ಪು ನೀಡಿದ್ದರೆ, ಮೂವರು ನ್ಯಾಯಾಧೀಶರು ಮಾತ್ರ ಪರವಾಗಿ ತೀರ್ಪಿತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಬಹುಮತದ ತೀರ್ಪು ಜಾರಿಗೆ ಬರುತ್ತದೆ. ಆದರೆ ಟ್ರಂಪ್ ಆಡಳಿತವು ಸುಪ್ರೀಂ ಕೋರ್ಟ್ ವಿರುದ್ಧವೇ ಹರಿಹಾಯ್ದಿದೆ.
U.S. President Donald Trump has launched a sharp attack on the Supreme Court of the United States after it reportedly declared his administration’s global tariff policy unlawful.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm