ಬ್ರೇಕಿಂಗ್ ನ್ಯೂಸ್
17-09-25 02:46 pm Udupi Correspondent ಕ್ರೈಂ
ಉಡುಪಿ, ಸೆ.17 : ವಿದೇಶದಲ್ಲಿ ಕೆಲಸಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿ 22 ಮಂದಿಗೆ ನಕಲಿ ಕಂಪನಿ ಹೆಸರಲ್ಲಿ ಮೋಸ ಮಾಡಿದ್ದಲ್ಲದೆ, ಅವರಿಂದ ಬರೋಬ್ಬರಿ 56,91,824 ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂಡೀಗಢದ ಕಂಪನಿ ಹೆಸರಲ್ಲಿ ವಿದೇಶಕ್ಕೆ ಉದ್ಯೋಗ ತೆಗೆಸಿಕೊಡುವ ನೆಪದಲ್ಲಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಹಿಂದೆ ವಿದೇಶದಲ್ಲಿದ್ದ ಕಾಪು ನಿವಾಸಿ ವಸಂತ್ ಡಿ.ಪೂಜಾರಿ(53) ಎಂಬವರಿಗೆ ಪ್ರಸ್ತುತ ಸುರತ್ಕಲ್ ನಿವಾಸಿ ಜೋಬಿ ಅರಂಗಸರೆ ದೇವಸ್ಯ ಎಂಬವರ ಪರಿಚಯವಾಗಿತ್ತು. ಹಿಂದೆ ವಿದೇಶದಲ್ಲಿದ್ದ ಜೋಬಿ ಈಗ ಚಂಡೀಗಢ ಮೂಲದ ಮೆ.ಎಸ್ ಹೌಸ್ ಎಕ್ಸ್‌ಪರ್ಟ್ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದೇನೆ, ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವ ವ್ಯಕ್ತಿಗಳಿಗೆ ವೀಸಾ ತೆಗೆಸಿ ಕೊಡುತ್ತದೆ ಎಂದು ತಿಳಿಸಿದ್ದರು.
ಅವರ ಮಾತು ನಂಬಿದ ವಸಂತ್ ಡಿ.ಪೂಜಾರಿ ಚಂಡೀಗಢದ ಕಂಪನಿಯ ವಿಳಾಸಕ್ಕೆ ತೆರಳಿದ್ದು ಅಲ್ಲಿ ಜೋಬಿ ಆರಂಗಸರೆ ದೇವಸ್ಯ ಕೂಡ ಇದ್ದರು. ಅಲ್ಲದೆ, ಎಚ್‌ಆರ್ ಶಗುನ್ ಹಾಗೂ ಎಂಡಿ ವಿಜಯ ಇಂದರ್ ಸಿಂಗ್, ರಮಣ, ನಿರ್ವಾರ್ ಸಿಂಗ್ ಎಂಬವರನ್ನೂ ಪರಿಚಯಿಸಿದ್ದರು. ಅವರೆಲ್ಲರೂ ಸೇರಿಕೊಂಡು ಕಂಪನಿಯ ಲೈಸೆನ್ಸ್ ಹಾಗೂ ಕಂಪನಿಯ ಬಗ್ಗೆ ಇತರ ದಾಖಲೆಗಳನ್ನು ತೋರಿಸಿ ನಂಬಿಸಿದ್ದರು.
ವಸಂತ್ ಡಿ.ಪೂಜಾರಿ ಊರಿಗೆ ಬಂದು ಸೂರಜ್ ಮತ್ತು ಮನೀಷ್ ಎಂಬವರನ್ನು ಅಜರ್ ಬೈಜಾನ್‌ಗೆ ಕಳುಹಿಸಿ ಕೊಡಲು ಕಂಪನಿಯವರಿಗೆ ಕೇಳಿದ್ದರು. ಅದರಂತೆ 2024ರ ಜುಲೈ ತಿಂಗಳಲ್ಲಿ ತಲಾ 3.5 ಲಕ್ಷ ರೂ.ನಂತೆ ಒಟ್ಟು 7 ಲಕ್ಷ ರೂ. ವನ್ನು ಕಂಪನಿಯ ಖಾತೆಗೆ ಜಮಾ ಮಾಡಿದ್ದರು. ತಿಂಗಳ ಬಳಿಕ ಕಂಪನಿ ಇಬ್ಬರ ಹೆಸರಿನಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಿ ನಂಬಿಕೆ ಬರುವಂತೆ ಮಾಡಿದ್ದರು. ಇದನ್ನು ನಂಬಿ ಮತ್ತೆ 20 ಮಂದಿಗೆ ಬೇರೆ ಬೇರೆ ಕಡೆ ಕೆಲಸ ಕೊಡಿಸಲು ವಿಸಾ ದೊರಕಿಸುವಂತೆ ಕೇಳಿದ್ದರು. ಅವರ ಸೂಚನೆಯಂತೆ ಕಂಪನಿ ಹೆಸರಲ್ಲಿ ಒಟ್ಟು 56,91,824 ರೂ. ಮೊತ್ತವನ್ನು ಕಂಪನಿಯವರು ತಿಳಿಸಿದ ಖಾತೆಗಳಿಗೆ ಹಾಗೂ ನಗದು ಮೂಲಕ ನೀಡಿದ್ದರು. ಅಷ್ಟರಲ್ಲಿ ಕಂಪನಿ ಮೊದಲು ಬುಕ್ ಮಾಡಿದ್ದ ಇಬ್ಬರ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿಸಿತ್ತು.
ಇದರಿಂದ ಅನುಮಾನ ಬಂದ ವಸಂತ್ ಡಿ.ಪೂಜಾರಿ ಚಂಡೀಗಢಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ನಾವು ಮೋಸ ಮಾಡುವುದಿಲ್ಲ. ಎಲ್ಲರನ್ನೂ ವಿದೇಶಕ್ಕೆ ಕಳುಹಿಸುತ್ತೇವೆ ಎಂಬುದಾಗಿ ತಿಳಿಸಿ ಇವರನ್ನು ಹಿಂದೆ ಕಳುಹಿಸಿದ್ದರು. ಆದರೆ ಈವರೆಗೆ ಯಾರನ್ನೂ ವಿದೇಶಕ್ಕೆ ಕಳುಹಿಸಿಕೊಡದೆ ವಿಸಾ ಕೂಡ ನೀಡದೆ ವಂಚಿಸಿದ್ದಾರೆ. ಮತ್ತೆ ಹಲವಾರು ಬಾರಿ ಚಂಡೀಗಢಕ್ಕೆ ಹೋಗಿ ವಿಚಾರಿಸಿದಾಗ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದರು.
ಇದರಿಂದ ರೋಸಿ ಹೋದ ವಸಂತ ಪೂಜಾರಿ ಮತ್ತು ಇತರರು ತಮ್ಮ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದಾಗ ಎರಡು ಕಂತಿನಲ್ಲಿ ತಲಾ 6 ಲಕ್ಷ ರೂ. ಚೆಕ್ ನೀಡಿದ್ದರು. ಆದೆ ಚೆಕ್ ಡ್ರಾ ಮಾಡಲು ಹೋದಾಗ ಅದು ಸ್ಥಗಿತಗೊಂಡಿರುವ ಖಾತೆಯ ಚೆಕ್ ಎಂಬುದು ಗಮನಕ್ಕೆ ಬಂದಿತ್ತು. ಬಳಿಕ ಬೇರೆ ಚೆಕ್ ನೀಡುವ ಭರವಸೆ ನೀಡಿದ್ದರೂ, ಈವರೆಗೂ ಹಣ ಹಿಂದಿರುಗಿಸದೆ ವಂಚಿಸಿದ್ದಾರೆ. ಈ ಕುರಿತು ವಸಂತ್ ಡಿ.ಪೂಜಾರಿ ಮತ್ತು ಇತರರು ಕಾಪು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
A major employment fraud has come to light, with at least 22 people from Kapu and Padubidri allegedly cheated of ₹56,91,824 on the promise of overseas jobs. The scam was orchestrated under the guise of a Chandigarh-based company, and a case has now been registered at the Kapu Police Station.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm