ಬ್ರೇಕಿಂಗ್ ನ್ಯೂಸ್
05-02-26 01:15 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.5 : ಹಿಂದಿ ಹೇರಿಕೆ, ಉತ್ತರ ಮತ್ತು ದಕ್ಷಿಣ ಭಾರತ ಎಂಬ ಭೇದ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಜಾಲತಾಣದಲ್ಲಿ ಈ ಕುರಿತ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಹಾಗೂ ಉತ್ತರ ಭಾರತ ನಡುವೆ ಭಾಷೆ ವಿಚಾರದಲ್ಲಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಉತ್ತರ ಭಾರತ ಮತ್ತು ದಕ್ಷಿಣ ಭಾರತ’ ನಡುವಿನ ಭಾಷಾ ಸಂಘರ್ಷವನ್ನು ಎತ್ತಿ ತೋರಿಸುತ್ತಿದೆ. ಉತ್ತರ ಭಾರತೀಯರು ತಮ್ಮನ್ನು ಮಾತ್ರ ನೈಜ ಭಾರತೀಯರು ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಹಿಂದಿ-ಇಂಗ್ಲಿಷ್ ಬಳಸುತ್ತಾರೆ. ದಕ್ಷಿಣ ಭಾರತೀಯರನ್ನು ಜೋಕರ್ಸ್ ಎಂದು ತೆಗಳುವ ರೀತಿ ಬಿಂಬಿಸಿದ್ದಾರೆ.
ಪೋಸ್ಟ್ನಲ್ಲಿ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಮಾತನಾಡುವವರನ್ನು ‘ಕ್ಲೌನ್’ (clown) ಎಂದು ಎಮೋಜಿಗಳ ಮೂಲಕ ತೋರಿಸಿದ್ದಾರೆ. ಈ ಮೂಲಕ ಭಾಷಾ ಪ್ರೇಮವನ್ನು ಹಾಸ್ಯದ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ದಕ್ಷಿಣ ಭಾರತೀಯರು ಜೋಕರ್ ಎಂಬ ರೀತಿಯಲ್ಲಿ ಇಲ್ಲಿ ಬಿಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಬಳಸುವುದರಿಂದ ಇಡೀ ದೇಶಕ್ಕೆ ಒಂದು ಸಾಮಾನ್ಯ ಭಾಷೆ ಸಿಗುತ್ತದೆ ಮತ್ತು ಅದು “ರಾಷ್ಟ್ರೀಯತೆಯ” ಸಂಕೇತ ಎಂದು ಹೇಳಲಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ಭಾಷೆಯೂ ಸಮಾನ ಮತ್ತು ಗೌರವಾರ್ಹ. ಯಾವುದೇ ತನ್ನ ಮಾತೃಭಾಷೆಯನ್ನು ಪ್ರೀತಿಸುವುದು ಎಂದರೆ ದೇಶವನ್ನು ದ್ವೇಷಿಸುವುದು ಎಂದಲ್ಲ.
ಇದರ ಜತೆಗೆ ಮತ್ತೊಂದು ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಭಾಷೆಯ ಬಗ್ಗೆ ಇರುವಷ್ಟೇ ಕಳಕಳಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಏಕಿಲ್ಲ ಎಂದು ಕೇಳಿದ್ದಾರೆ. ಇನ್ನು “ಏಕರೂಪತೆ” ಕೇವಲ ಭಾಷೆಗೆ ಸೀಮಿತವಾಗದೆ, ಎಲ್ಲ ಧರ್ಮದವರಿಗೂ ಸಮಾನ ಕಾನೂನು ಮತ್ತು ಸ್ವಾಯತ್ತತೆ ಸಿಗುವಲ್ಲಿಯೂ ಇರಬೇಕು. ಸಾಂಸ್ಕೃತಿಕ ಹೆಮ್ಮೆಯು ಅಂಧಾಭಿಮಾನವಾಗಬಾರದು. ಭಾಷೆಯ ಜೊತೆಗೆ ನೀವು ಹೇಳಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆಯೂ ಸುಸಂಬದ್ಧವಾದ ಚರ್ಚೆ ನಡೆಯುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಈ ಪೋಸ್ಟ್ನಲ್ಲಿ ಹೇಳಿದ್ದಾರೆ.
ಉತ್ತರ ಭಾರತದ ಪಂಜಾಬ್ ಹಾಗೂ ಈಶಾನ್ಯ ಭಾರತದ ಪಶ್ಚಿಮ ಬಂಗಾಳದ ರಾಜ್ಯದ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಬಂಗಾಳಿಗಳು ಹಿಂದಿ ಅಲ್ಲ, ಬಂಗಾಳಿ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಂಡು ನಮ್ಮ ದೇಶವನ್ನು ಮತ್ತೆ ಒಗ್ಗೂಡಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ. ಅದೇ ರೀತಿ ಪಂಜಾಬ್ನಲ್ಲಿ ನಾವು ಪಂಜಾಬಿ ಮಾತನಾಡುತ್ತೇವೆ ಎಂದಿದ್ದಾರೆ. ಇನ್ನು ಈ ಪೋಸ್ಟ್ಗೆ ಕಮೆಂಟ್ನಲ್ಲಿ ಮೊತ್ತೊಂದು ಪೋಸ್ಟ್ ಅನ್ನು ಕಮೆಂಟ್ ಮಾಡಿದ್ದಾರೆ. ನೀವು ಪಾಕಿಸ್ತಾನದ ಹಿಂದಿ ಹಾಗೂ ಉರ್ದು ಮಾತನಾಡಿ, ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ಭಾರತೀಯರು ನಿಜವಾದ ಭಾರತೀಯರು ಎಂದು ಹೇಳಿದ್ದಾರೆ.
Cultural pride is selective.
— Priya Meh ♑️ (@PRIYAME60820600) February 2, 2026
While ‘Hindi imposition’ trends daily, few want to discuss why only Hindu temples remain under state control, or why large scale conversions religious or demographic are treated as untouchable topics.
Federalism must be consistent.
Correct? https://t.co/1qCC5D1FQj
Amid ongoing debates over Hindi imposition and the North–South divide, a controversial social media post has reignited language tensions across the country. The post claimed that only North Indians are “real Indians” and mocked South Indians as “jokers,” triggering widespread outrage online.
05-02-26 01:15 pm
Bangalore Correspondent
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
54 ಸಾವಿರಕ್ಕೂ ಹೆಚ್ಚು RTI ಅರ್ಜಿಗಳು ಬಾಕಿ ; ಮಾಹಿತ...
03-02-26 08:17 pm
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm