Sadananda Gowda, Cyber Fraud: ಮಾಜಿ ಸಿಎಂ ಡಿವಿಎಸ್ ಬ್ಯಾಂಕ್ ಖಾತೆಗೂ ಕನ್ನ ; ಮೂರು ಖಾತೆ ಹ್ಯಾಕ್, ಮೂರು ಲಕ್ಷ ಎಗರಿಸಿದ ಸೈಬರ್ ಕಳ್ಳರು, ಸ್ವತಃ ನೋವು ಹೇಳಿಕೊಂಡ ಡಿವಿಎಸ್ 

17-09-25 05:45 pm       Bangalore Correspondent   ಕರ್ನಾಟಕ

ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಮೂರು ಬ್ಯಾಂಕ್‌ ಖಾತೆಗಳನ್ನು ಹ್ಯಾಕ್ ಮಾಡಿ, 3 ಲಕ್ಷ ರೂ. ಹಣವನ್ನು ಸೈಬರ್ ಕಳ್ಳರು ದೋಚಿದ್ದಾರೆ. 

ಬೆಂಗಳೂರು, ಸೆ.17 : ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ಮೂರು ಬ್ಯಾಂಕ್‌ ಖಾತೆಗಳನ್ನು ಹ್ಯಾಕ್ ಮಾಡಿ, 3 ಲಕ್ಷ ರೂ. ಹಣವನ್ನು ಸೈಬರ್ ಕಳ್ಳರು ದೋಚಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಆರ್‌ಎಂವಿ ಎಕ್ಸ್‌ಟೆನ್ಷನ್‌ನ ಬಿಬಿಎಂಪಿ ಪಾರ್ಕ್‌ನಲ್ಲಿ ಆಯೋಜಿಸಿದ್ದ 75 ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ತನಗಾದ ವಂಚನೆಯನ್ನು ಹೇಳಿಕೊಂಡಿದ್ದಾರೆ.

'ನಿನ್ನೆ ನನ್ನ 3 ಅಕೌಂಟ್ ಗಳನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಅದರಲ್ಲಿದ್ದ ತಲಾ ಒಂದೊಂದು ಲಕ್ಷ ಹಣವನ್ನು ಎಗರಿಸಿದ್ದಾರೆ. ಸುಮಾರು 3 ಲಕ್ಷ ರೂ. ಹಣ ಹೋಗಿದೆ. ಎಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಆಕ್ಸಿಸ್ ಬ್ಯಾಂಕಿನ ಖಾತೆಯಲ್ಲಿದ್ದ ಹಣ ಕಳ್ಳತನವಾಗಿದೆ. ಯುಪಿಐ ಮೂಲಕ ಹ್ಯಾಕ್ ಮಾಡಿ ಹಣ ಕಳ್ಳತನ ಮಾಡಿದ್ದು ಸೈಬರ್ ಕ್ರೈಮ್‌ಗೆ ದೂರು ನೀಡುತ್ತೇನೆ ಎಂದು ಡಿವಿ ಸಭೆಯಲ್ಲಿ ಹೇಳಿದ್ದಾರೆ. 

ಎರಡು ದಿನಗಳ ಹಿಂದಷ್ಟೇ ನಟ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಹೆಸರಲ್ಲಿ ಸೈಬರ್ ವಂಚನೆ ನಡೆದಿತ್ತು. ಬ್ಯಾಂಕ್ ಖಾತೆ ಹ್ಯಾಕ್ ಮಾಡಿ, ಮಗನಿಗೆ ತಾಯಿಯೇ ಹಣ ಹಾಕುವಂತೆ ಮೆಸೇಜ್ ಮಾಡಿದ್ದರು.‌ ಉಪೇಂದ್ರ ಮಗ ತಾಯಿಯದ್ದೇ ಮೆಸೇಜ್ ಎಂದು ನಂಬಿ ಹಣ ಕಳಿಸಿ ಮೋಸ ಹೋಗಿದ್ದರು.

In a concerning case of cybercrime, former Karnataka Chief Minister D.V. Sadananda Gowda revealed that three of his bank accounts were hacked and a total of ₹3 lakh was fraudulently withdrawn by cybercriminals.