ಬ್ರೇಕಿಂಗ್ ನ್ಯೂಸ್
19-08-25 08:54 pm Mangaluru Correspondent ಕರಾವಳಿ
ಮಂಗಳೂರು, ಆ.20 : ಪ್ರತಿಷ್ಠಿತ ನೀವಿಯಾ, ಯೇನೆಕ್ಸ್, ವೈವೈ ಬ್ರಾಂಡಿನ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಪೊಲೀಸರು ತೊಕ್ಕೊಟ್ಟಿನ ಸ್ಪೋರ್ಟ್ಸ್ ವಿನ್ನರ್ ಮಳಿಗೆಗೆ ದಾಳಿ ನಡೆಸಿದ ವಿಚಾರದಲ್ಲಿ ಮಳಿಗೆಯ ಮಾಲೀಕ ಮಹಮ್ಮದ್ ರಿಯಾಜ್ ಸ್ಪಷ್ಟನೆ ನೀಡಿದ್ದಾರೆ. ಆನ್ಲೈನಲ್ಲಿ ಫುಟ್ಬಾಲ್ ಗಳನ್ನು ತರಿಸಿದ್ದೆವು. ಅದು ನಕಲಿ ಎಂದು ಗೊತ್ತಿರಲಿಲ್ಲ. ಮೀರತ್ ಮೂಲದವರು ಸಪ್ಲೈ ಕೊಟ್ಟಿದ್ದರು. ನಾವು ಜಿಎಸ್ಟಿ ಬಿಲ್ ಪಾವತಿಸಿ ಬಾಲ್ ಗಳನ್ನು ಪಡೆದಿದ್ದೆವು. ಈಗ ನಕಲಿ ಎಂದು ಪೊಲೀಸರು ದಾಳಿ ನಡೆಸಿದ್ದರಿಂದ 18 ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ನಮ್ಮ ಕಂಪನಿ ಮರ್ಯಾದೆ ಹೋಗುವಂತಾಗಿದೆ ಎಂದು ಅಲವತ್ತುಕೊಂಡಿದ್ದಾರೆ.
ನಮಗೆ ಕಳೆದ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ಮೀರತ್ ಮೂಲದ ಶಿವ ಸ್ಪೋರ್ಟ್ಸ್ ಇಂಡಸ್ಟ್ರೀಸ್ ಹೆಸರಲ್ಲಿ ವಾಲಿಬಾಲ್, ರಾಕೆಟ್ ಸಪ್ಲೈ ಕೊಟ್ಟಿದ್ದರು. ಆನ್ಲೈನಲ್ಲಿ ಅವರಿಗೆ ಅಡ್ವಾನ್ಸ್ ಪೇಮೆಂಟ್ ಮಾಡಲಾಗಿತ್ತು. ವಾಲಿಬಾಲ್ ಹೆಚ್ಚೇನೂ ಮಾರಾಟ ಆಗೋದಿಲ್ಲ. ಸ್ವಲ್ಪ ಕಡಿಮೆ ದರಕ್ಕೆ ಕೊಟ್ಟಿದ್ದರಿಂದ ನಾವು ಪಡೆದಿದ್ದೆವು. ಈಗ ನೋಡಿದರೆ, ಬೇರೆಯವರು ಬಂದು ಕಂಪ್ಲೇಂಟ್ ಮಾಡಿದ್ದಾರೆ. ನಾವೇನೂ ತಪ್ಪು ಮಾಡಿಲ್ಲ. ಜಿಎಸ್ಟಿ ಬಿಲ್ ಇದೆ, ಪೊಲೀಸರಿಗೂ ತೋರಿಸಿದ್ದೇವೆ. ವಕೀಲರಿಗೆ ಕೊಟ್ಟಿದ್ದೇನೆ. ಕೌಂಟರ್ ಕಂಪ್ಲೇಂಟ್ ಮಾಡ್ತೀವಿ ಎಂದು ರಿಯಾಜ್ ಹೇಳಿದ್ದಾರೆ. ಇವರಿಂದ ಇದೇ ಮೊದಲ ಬಾರಿಗೆ ಖರೀದಿಸಿದ್ದೆವು. ಇದಕ್ಕೂ ಹಿಂದೆ ಬೇರೆ ಕಡೆಯಿಂದ ಸಪ್ಲೈ ಪಡೆಯುತ್ತಿದ್ದೆವು. ಈಗ ನೋಡಿದರೆ ಕೇಸು ಮಾಡಿಸಿದ್ದಾರೆ. ಇದರ ಹಿಂದೆ ಯಾರದ್ದೋ ಕೈವಾಡ ಇದೆ, ನಮ್ಮ ಹೆಸರು ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.




ಹರ್ಯಾಣ ಮೂಲದ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ಸಿಬಂದಿ ಸ್ಟೀಫನ್ ರಾಜ್ ಎಂಬವರು ಉಳ್ಳಾಲ ಠಾಣೆಯಲ್ಲಿ ಪ್ರತಿಷ್ಠಿತ ಕಂಪನಿಗಳ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆಂದು ದೂರು ನೀಡಿದ್ದರು. ಇದರಂತೆ, ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಸ್ಪೋರ್ಟ್ಸ್ ವಿನ್ನರ್ ಮಳಿಗೆ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದರು. ಪೊಲೀಸರ ಮಾಹಿತಿ ಪ್ರಕಾರ, ಹಲವೆಡೆಯಿಂದ 300ರಷ್ಟು ನಕಲಿ ವಾಲಿಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್ ರಾಕೆಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಪಂಜಾಬಿನ ಜಲಂಧರ್ ನಲ್ಲಿ ನಕಲಿ ಉತ್ಪನ್ನಗಳನ್ನು ತಯಾರಿಸಿ ಅಸಲಿ ರೀತಿಯಲ್ಲೇ ಕಡಿಮೆ ದರಕ್ಕೆ ಪೂರೈಸುತ್ತಿದ್ದರು ಎನ್ನುವುದನ್ನು ಪತ್ತೆ ಮಾಡಲಾಗಿದೆ. ಅಸಲಿ ಎಂದೇ ಉತ್ಪನ್ನಗಳನ್ನು ಪಡೆಯುತ್ತಿದ್ದ ಕ್ರೀಡಾ ಪರಿಕರ ಮಾರಾಟದ ಸಂಸ್ಥೆಗಳು ಮೋಸ ಹೋಗಿದ್ದು ವಂಚನೆ ಕೇಸು ಎದುರಿಸುವಂತಾಗಿದೆ.
Following a police raid on Sports Winner shop in Tokkottu for allegedly selling counterfeit sports goods of reputed brands like Nivea, Yonex, and YY, the shop’s owner Mohammed Riaz has issued a clarification, stating that he had no knowledge the products were fake. Riaz explained that he had purchased footballs and volleyballs online from Meerut-based Shiv Sports Industries, with proper GST bills.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm