ಬ್ರೇಕಿಂಗ್ ನ್ಯೂಸ್
21-05-25 10:45 pm Mangalore Correspondent ಕರಾವಳಿ
ಬೆಳ್ತಂಗಡಿ, ಮೇ 21 : ಪಂಜಾಬಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಧರ್ಮಸ್ಥಳ ಮೂಲದ ಆಕಾಂಕ್ಷಾ ನಾಯರ್ (22) ಅವರ ಮೃತದೇಹವನ್ನು ಬೋಳಿಯಾರು ಗ್ರಾಮದಲ್ಲಿ ಹಿಂದು ಸಂಪ್ರದಾಯ ಪ್ರಕಾರ ಅಂತ್ಯವಿಧಿ ನಡೆಸಿದರೂ, ಪಾರ್ಥಿವ ಶರೀರವನ್ನು ದಹಿಸದೆ ತನಿಖೆಗೆ ಅನುಕೂಲವಾಗುವಂತೆ ಬಾಕ್ಸ್ ನಲ್ಲಿ ಹಾಕಿಟ್ಟು ಮಣ್ಣಿನಲ್ಲಿ ಹೂಳುವ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.
ಆಕಾಂಕ್ಷಾ ಸಾವಿಗೆ ನ್ಯಾಯ ಸಿಗಬೇಕು, ಮುಂದಿನ ತನಿಖಾ ಪ್ರಕ್ರಿಯೆಗಳಿಗ ಯಾವುದೇ ಅಡಚಣೆ ಆಗಬಾರದು ಮತ್ತು ಅಗತ್ಯ ಬಿದ್ದರೆ ಹೆಚ್ಚಿನ ತನಿಖೆಗೆ ಅನುಕೂಲವಾಗಲಿ ಎಂಬ ಕಾರಣದಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆಕಾಂಕ್ಷಾ ಸಾವಿಗೆ ನ್ಯಾಯ ಸಿಗಲೇಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬ ದೃಢ ಸಂಕಲ್ಪದಿಂದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜೊತೆಗಿದ್ದು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಯುವತಿ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಹೀಗಾಗಿ ಸಮಗ್ರ ತನಿಖೆಯಾಗಬೇಕೆಂದು ಪಂಜಾಬ್ ಪೊಲೀಸರ ಜೊತೆಗೆ ಮಾತನಾಡಿದ್ದೇನೆ. ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಸಾವಿಗೆ ಕಾರಣ ಎನ್ನಲಾದ ಪ್ರಾಧ್ಯಾಪಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಸಾವಿಗೆ ನಿಜವಾದ ಕಾರಣ ಏನೆಂಬುದು ತಿಳಿಯಬೇಕಿದೆ. ಈ ಬಗ್ಗೆ ಆಳವಾದ ತನಿಖೆ ನಡೆಸಲು ರಾಜ್ಯದ ಗೃಹ ಸಚಿವ ಪರಮೇಶ್ವರ್ ಪಂಜಾಬ್ ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ.
ಮಗಳನ್ನು ಕಷ್ಟಪಟ್ಟು ಓದಿಸಿದ್ದೇನೆ-ತಂದೆ ಕಣ್ಣೀರು
ಇದೇ ವೇಳೆ ಮಾಧ್ಯಮದ ಜೊತೆಗೆ ಅಳಲು ತೋಡಿಕೊಂಡ ಆಕಾಂಕ್ಷಾ ತಂದೆ ಸುರೇಂದ್ರ ನಾಯರ್, ನಾವು ತುಂಬಾ ಕಷ್ಟಪಟ್ಟು ಮಗಳನ್ನು ಓದಿಸಿದ್ದೇನೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೇ ಅಲ್ಲ, ಕಾಲೇಜಿನಲ್ಲಿ ಹಾಗೂ ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಜರ್ಮನಿಗೆ ಹೋಗಿ ಉದ್ಯೋಗ ಮಾಡಬೇಕೆಂಬ ಕನಸು ಹೊಂದಿದ್ದಳು. ಪ್ರತಿದಿನ ಕರೆ ಮಾಡಿ ಸಂತೋಷದಿಂದ ಮಾತನಾಡುತ್ತಿದ್ದಳು ಎಂದು ಕಣ್ಣೀರು ಹಾಕಿದರು.
ಆಕಾಂಕ್ಷಾ ಸಾವಿನ ಪ್ರಕರಣದಲ್ಲಿ ಕಾಲೇಜು ಆಡಳಿತ ನಾಟಕವಾಡುತ್ತಿದೆ ಎಂದು ಆರೋಪಿಸಿದ ಸುರೇಂದ್ರ ಅವರು, ನನ್ನ ಮಗಳದ್ದು ಆತ್ಮಹತ್ಯೆ ಎಂದು ಮುಚ್ಚಿ ಹಾಕಲು ಕಾಲೇಜು ಆಡಳಿತದವರು ಯತ್ನಿಸುತ್ತಿದ್ದಾರೆ. ಮೊದಲು ನೀಡಿದ ದೂರಿನಲ್ಲಿ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ನಮಗೆ ಅರ್ಥವಾಗದ ಪಂಜಾಬಿ ಭಾಷೆಯಲ್ಲಿ ಬರೆದು ಸಹಿ ಹಾಕಿಸಿಕೊಂಡಿದ್ದರು. ನಂತರ ವಿಷಯ ತಿಳಿದು ಗಲಾಟೆ ಮಾಡಿದಾಗ ಒತ್ತಡಕ್ಕೆ ಮಣಿದು ಬೇರೆ ಎಫ್ಐಆರ್ ದಾಖಲಿಸಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗಲೇಬೇಕು. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.
ಎರಡು ದಿನ ಹಿಂದೆ ಮಂಗಳೂರು ಏರ್ಪೋರ್ಟ್ ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಆಕಾಂಕ್ಷಾ ತಾಯಿ ಸಿಂಧುದೇವಿ, ನಮ್ಮ ಊರಿನಲ್ಲಿಯೇ ನಡೆದ ಸೌಜನ್ಯಾ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ದೂರದ ಪಂಜಾಬಿನಲ್ಲಿ ಸಾವಿಗೀಡಾದ ಮಗಳಿಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ ಎಂದೂ ಹೇಳಿ ಪೊಲೀಸರು ತನಿಖೆ ನಡೆಸುವ ಬಗ್ಗೆ ವಿಶ್ವಾಸ ಇಲ್ಲವೆಂದೂ ಹೇಳಿದ್ದರು. ಆಕಾಂಕ್ಷಾ ತನ್ನ ಪ್ರೀತಿಯನ್ನು ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ನಿರಾಕರಿಸಿದ ಕಾರಣಕ್ಕೆ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯ ಮಾಹಿತಿ.
ಪ್ರೊಫೆಸರ್ ಬಂಧನ, ಕಾಲೇಜು ಆಡಳಿತ ನಿರ್ಲಕ್ಷ್ಯ
ಘಟನೆ ಸಂಬಂಧಿಸಿ ಕುಟುಂಬಸ್ಥರ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಂದು ಕೇರಳ ಮೂಲದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂನನ್ನು ಜಲಂಧರ್ ಪೊಲೀಸರು ಬಂಧಿಸಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತವೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಆಸುಪಾಸಿನಲ್ಲಿ ಆಕಾಂಕ್ಷಾ ನಡೆದು ಹೋಗುತ್ತಿದ್ದ ಸಿಸಿಟಿವಿ ನೀಡಿದ್ದರೂ, ಮೇಲಿನಿಂದ ಬಿದ್ದಿರುವುದಾಗಲೀ, ನಾಲ್ಕನೇ ಮಹಡಿಯಲ್ಲಿದ್ದುದಕ್ಕೆ ಸಾಕ್ಷಿಯನ್ನಾಗಲೀ ನೀಡಿಲ್ಲ. ಹೀಗಾಗಿ ಕಾಲೇಜು ಆಡಳಿತವೇ ಹೆಚ್ಚು ಸುದ್ದಿಯಾದರೆ ಹೆಸರಿಗೆ ಮಸಿಯಾಗುತ್ತದೆ ಎಂದು ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
In a heart-wrenching development, the mortal remains of 22-year-old Akanksha S Nair, who died by suicide in Punjab on May 17, were brought to her native village in Beltangady taluk on Wednesday, May 21. Akanksha, daughter of Surendra Nair and Sindhu Devi of Boliyar near Dharmasthala, was working as an aerospace engineer in Delhi. Reports indicate that she ended her life by jumping off a college building in Punjab.
21-05-25 09:16 pm
Bangalore Correspondent
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm