ಬ್ರೇಕಿಂಗ್ ನ್ಯೂಸ್
26-01-25 07:51 pm Mangalore Correspondent ಕರಾವಳಿ
ಮಂಗಳೂರು, ಜ.26: ಹಿರಿಯ ಪತ್ರಕರ್ತ, ಹೊಸ ದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ ಬಾಳೇಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಕೊಣಾಜೆ ಬಳಿಯ ಬಾಳೆಪುಣಿ ಗ್ರಾಮದ ಸ್ವಗೃಹದಲ್ಲಿ ಭಾನುವಾರ ನಿಧನರಾಗಿದ್ದಾರೆ.
ಬಾಳೇಪುಣಿ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ
ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೇಪುಣಿ ಅವರು 39 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ 27 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಅವರು 2021ರಲ್ಲಿ ನಿವೃತ್ತಿಯಾದ ಬಳಿಕ ವಿಶೇಷ ವರದಿಗಾರರಾಗಿ ಕೆಲಸ ಮುಂದುವರಿಸಿದ್ದರು.
1989ರಲ್ಲಿ ಪತ್ರಿಕೋದ್ಯಮ ಪ್ರವೇಶ
1963ರ ಜೂ.1ರಂದು ಜನಿಸಿದ ಬಾಳೇಪುಣಿ ಅವರು 1986ರ ಸೆಪ್ಟೆಂಬರ್ನಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶ ಮಾಡಿದ್ದರು. ಆರಂಭದಲ್ಲಿ ಅಮೃತ ವಾರಪತ್ರಿಕೆ, ಚೇತನಾ ವಾರಪತ್ರಿಕೆ, ದಿ ಗೋಲ್ಡ್ ಕನ್ನಡ ವಾರಪತ್ರಿಕೆ, ಸಪ್ತಸಾರ ವಾರಪತ್ರಿಕೆ ಮೊದಲಾದವುಗಳಲ್ಲಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಬಳಿಕ ಕೆನರಾ ಟೈಮ್ಸ್ ಬಳಗ (ಕರಾವಳಿ ಅಲೆ, ಕನ್ನಡ ಜನ ಅಂತರಂಗ, ಕೆನರಾ ಟೈಮ್ಸ್), ಮಂಗಳೂರು ಮಿತ್ರ ಕನ್ನಡ ಸಂಜೆ ದಿನ ಪತ್ರಿಕೆ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ವಿಶೇಷ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. 1998ರ ಜೂ.1ರಿಂದ ಹೊಸ ದಿಗಂತ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಆರಂಭಿಸಿದ್ದರು.
ಹಾಜಬ್ಬರನ್ನು ಸಮಾಜಕ್ಕೆ ಪರಿಚಯಿಸಿದವರು
ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು 2004ರಲ್ಲಿ 'ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು' ಎಂಬ ಹೆಸರಲ್ಲಿ ಮೊದಲ ಬಾರಿಗೆ ವರದಿ ಬರೆದು ಜಗತ್ತಿಗೆ ಪರಿಚಯಿಸಿದ್ದರು. ಈ ವರದಿಯನ್ನು ಪರಿಗಣಿಸಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆಮೂಲಕ ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದಲ್ಲಿ ಕಿತ್ತಳೆ ಮಾರುತ್ತ ಅಕ್ಷರ ಪರಿಚಯ ಇಲ್ಲದ ಹಾಜಬ್ಬರು ತನ್ನೂರಿನಲ್ಲಿ ಶಾಲೆ ಕಟ್ಟುವ ಕನಸು ಕಂಡಿದ್ದು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಇದಲ್ಲದೆ, ಬಾಳೆಪುಣಿಯವರು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ಆಸಕ್ತಿಯ ಕ್ಷೇತ್ರವಾಗಿಸಿ ಆ ಕುರಿತು ಬಹಳಷ್ಟು ವರದಿಗಳನ್ನು ಬರೆದಿದ್ದರು.
ಹಲವು ಪ್ರಶಸ್ತಿಗಳ ಸರದಾರ
ರಾಜ್ಯದಲ್ಲಿ ನಡೆದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂ ಸೇವಕ, ಮುಖ್ಯ ಸ್ವಯಂಸೇವಕರಾಗಿ ಬಾಳೇಪುಣಿ ದುಡಿದಿದ್ದಾರೆ. ನಿರಂತರ ಸೇವೆ, ಉತ್ತಮ ಕಾರ್ಯಗಳಿಗಾಗಿ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ, ಗೌರವಗಳಿಗೂ ಪಾತ್ರರಾಗಿದ್ದಾರೆ. ಇವರ ವರದಿಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಅತ್ಯುತ್ತಮ ಗ್ರಾಮೀಣ ವರದಿಗಾಗಿ 2004ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ಜಾಗತಿಕ ಸಮಾಜ ಕಾರ್ಯ ಸಂಸ್ಥೆ ‘ಹಂಗರ್ ಪ್ರಾಜೆಕ್ಟ್’ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುವ ‘ಮಹಿಳೆ ಮತ್ತು ಪಂಚಾಯತ್ ರಾಜ್’ ವಿಷಯಾಧಾರಿತ ವರದಿಗಾರಿಕೆ ಸ್ಪರ್ಧೆಯಲ್ಲಿ ಪ್ರಾದೇಶಿಕ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ‘ಸರೋಜಿನಿ ನಾಯ್ಡು ಪ್ರಶಸ್ತಿ’ ತಂದು ಕೊಟ್ಟ ಏಕೈಕ ಪತ್ರಕರ್ತ ಬಾಳೇಪುಣಿಯವರು. ಇವರಿಗೆ ಪತ್ರಿಕೋದ್ಯಮ ಸೇವೆಗಾಗಿ 2012ರಲ್ಲಿ ಕಾಂತಾವರ ಕನ್ನಡ ಸಂಘದಿಂದ ‘ಕಾಂತಾವರ ಪುರಸ್ಕಾರ’ ಲಭಿಸಿತ್ತು. 2013ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದಿಂದ 2021ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಬಾಳೇಪುಣಿಯವರಿಗೆ ಸಂದಿವೆ.
ಕೆಲವು ಪ್ರಮುಖ ವರದಿಗಳು
ಉಡುಪಿ ಭೂಹಗರಣ ತನಿಖಾ ವರದಿ, ಭಾಸ್ಕರನ್ ನಾಯರ್ ಜೈಲಿನಿಂದ ಪರಾರಿ(ಮುನ್ನೆಚ್ಚರಿಕಾ ವರದಿ), ಅಕ್ಷರ ಸಂತ ಹರೇಕಳ ಹಾಜಬ್ಬ, ಮೈಸೂರು ಪೊಲೀಸ್-ಪಬ್ಲಿಕ್ ಸ್ಕೂಲ್, ಸುಮತಿ ಇಳಂತಿಲ, ಮಿಯ್ಯಾರಿನ ಮುಂಗುಲಿ ಕೊರಗ, ಮಳಲಿ ಚೀಂಕ್ರ ಪೂಜಾರಿ, ಕೌಕ್ರಾಡಿಯ ಸ್ವರ್ಣಲತಾ ಮತ್ತು ಸುಜಿ, ಇಳಂತಿಲದ ಕೂಸಪ್ಪ, ಮುಚ್ಚೂರಿನ ಸುದರ್ಶನ, ಪುತ್ತೂರಿನ ಬಡಿಲ ಹುಸೈನ್, ಕೊರಗ ಹುಡುಗಿ ಸುರೇಖಾ ಮೊದಲಾದವರ ಯಶೋಗಾಥೆಗಳು, ದಕ್ಷಿಣ ಕನ್ನಡ ಜಿಲ್ಲಾ ಗಿರಿಜನ ಸಮನ್ವಯ ಯೋಜನೆಯ ಅವ್ಯವಹಾರಗಳ ಕುರಿತಾದ ಮೂರು ತನಿಖಾ ವರದಿಗಳು, ಗ್ರಾಮ ಪಂಚಾಯತುಗಳ ಕುರಿತಾದ ಧನಾತ್ಮಕ ವರದಿಗಳು, ಉದ್ಯೋಗ ಖಾತರಿ ಯೋಜನೆ ಬಗೆಗಿನ ಯಶೋಗಾಥೆಗಳ ಕುರಿತಂತೆ ಬಾಳೇಣಿಯವರು ತಮ್ಮ ಬರಹಗಳ ಮೂಲಕ ಬೆಳಕು ಚೆಲ್ಲಿದ್ದರು.
Senior journalist and special correspondent of Hosa Digantha newspaper, Guruvappa N T Balepuni, passed away at his residence in Balepuni on Sunday after a brief illness. He was 62. Balepuni is survived by his wife and son. Balepuni had served as the general secretary of the Dakshina Kannada Working Journalists' Association and the Mangaluru Press Club.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm