ಬ್ರೇಕಿಂಗ್ ನ್ಯೂಸ್
11-12-21 11:31 am Source: Boldsky Kannada ಡಾಕ್ಟರ್ಸ್ ನೋಟ್
ಚಳಿಗಾಲದಲ್ಲಿ ಸೈನಸ್ ರೋಗಿಗಳ ಸಮಸ್ಯೆ ಹೆಚ್ಚುತ್ತದೆ, ಏಕೆಂದರೆ, ತಣ್ಣನೆಯ ಗಾಳಿ ಮೂಗಿಗೆ ಅಡ್ಡಿಯಾಗಿ, ಉಸಿರಾಡಲು ಕಷ್ಟವಾಗುತ್ತದೆ. ಈ ಕಾಯಿಲೆಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡಿ, ಆಹಾರದ ಬಗ್ಗೆ ಗಮನ ಹರಿಸಿದರೆ, ನಂತರ ರೋಗವು ದೀರ್ಘಕಾಲದ ಹಂತಕ್ಕೆ ಹೋಗುವುದನ್ನು ತಡೆಯಬಹುದು. ಕೆಲವು ಆಹಾರಗಳು ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಸೈನಸ್ ಸಮಸ್ಯೆ ಇರುವವರು ಚಳಿಗಾಲದಲ್ಲಿ ಕೆಲವು ವಿಷಯಗಳನ್ನು ತಪ್ಪಿಸಬೇಕು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.
ಸೈನಸ್ ಎಂದರೇನು?:
ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಕುಳಿಗಳು. ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಕೆಲವೊಮ್ಮೆ ಈ ಕುಳಿಗಳು ಮುಚ್ಚಿಹೋಗುತ್ತವೆ. ಇದರಿಂದಾಗಿ ಎದೆಯಲ್ಲಿ ಲೋಳೆಯು ಸಂಗ್ರಹಗೊಳ್ಳಲು ಪ್ರಾರಂಭಿಸಿ, ತಲೆನೋವು ಮತ್ತು ಉಸಿರಾಟದ ತೊಂದರೆಯೂ ಕಂಡುಬರುತ್ತದೆ. ಕೆಲವೊಮ್ಮೆ ಈ ಕಾರಣದಿಂದಾಗಿ, ದವಡೆ ಮತ್ತು ಕಣ್ಣುಗಳ ಸುತ್ತಲಿನ ಪ್ರದೇಶದಲ್ಲಿ ನೋವು ಸಹ ಕಂಡುಬರುತ್ತದೆ. ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಾಗ ಮೆದುಳಿನ ಜ್ವರ, ಮೆನಿಂಜೈಡಿಸ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸೈನಸ್ ಸಮಸ್ಯೆ ಹೆಚ್ಚಿಸುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಆಲೂಗಡ್ಡೆ ಮತ್ತು ಮೈದಾ ತಪ್ಪಿಸಿ:
ಸೈನಸ್ ಸಮಸ್ಯೆ ಇರುವವರು, ಆಹಾರದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳ ಸೇವನೆಯನ್ನು ಕಡಿಮೆ ಮಾಡಿ. ಆಲೂಗಡ್ಡೆ ಮತ್ತು ಮೈದಾ ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಇರುವ ಆಹಾರಗಳಾಗಿವೆ. ಇದು ಉರಿಯೂತವನ್ನು ಹೆಚ್ಚಿಸಲು ಕಾರಣವಾಗಿದೆ. ಆದ್ದರಿಂದ ಇದನ್ನು ಚಳಿಗಾಲದಲ್ಲಿ ಸೇವಿಸದೇ ಇರುವುದು ಉತ್ತಮ.
ಒಮೆಗಾ -6 ಕೊಬ್ಬಿನಾಮ್ಲಗಳನ್ನು ತಪ್ಪಿಸಿ:
ಒಮೆಗಾ -6 ಕೊಬ್ಬಿನಾಮ್ಲಗಳು ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬೇಡಿ. ಅಂದಹಾಗೇ, ಒಮೆಗಾ -6 ಕೊಬ್ಬಿನಾಮ್ಲಗಳು ಸೂರ್ಯಕಾಂತಿ, ಜೋಳ ಮತ್ತು ಬಾದಾಮಿ ಎಣ್ಣೆಯಲ್ಲಿ ಸಮೃದ್ಧವಾಗಿವೆ. ಆದ್ದರಿಂದ ಈ ಎಣ್ಣೆಗಳಿಗೆ ಪರ್ಯಾಯವಾಗಿ ಇತರ ಆರೋಗ್ಯಕರ ಎಣ್ಣೆಗಳನ್ನು ಆಹಾರಕ್ಕೆ ಬಳಸಿ.
ಸಂಸ್ಕರಿಸಿದ ಸಕ್ಕರೆ ಬೇಡ:
ನಿಮಗೆ ಸೈನಸ್ ಸಮಸ್ಯೆಯಿದ್ದರೆ, ನೀವು ಪೇಸ್ಟ್ರಿಗಳು, ಸೋಡಾ, ಹಣ್ಣಿನ ರಸಗಳು, ಸಿಹಿತಿಂಡಿಗಳು, ಚಾಕೊಲೇಟ್ಗಳಿಂದ ದೂರವಿರಬೇಕು. ಈ ಎಲ್ಲ ವಸ್ತುಗಳ ಸೇವನೆಯಿಂದ ಸೈನಸ್ ಸಮಸ್ಯೆ ಹೆಚ್ಚಾಗಬಹುದು. ಏಕೆಂದರೆ, ಇವುಗಳಲ್ಲಿ ಸಂಸ್ಕರಿಸಿದ ಸಕ್ಕರೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಇಂತಹ ಬೇಕರಿ ಪದಾರ್ಥಗಳಿಂದ ದೂರವಿರಿ.
ಫಾಸ್ಟ್ ಫುಡ್ ನಿಂದ ದೂರವಿರಿ:
ಫಾಸ್ಟ್ ಫುಡ್ ಮೊನೊ ಸೋಡಿಯಂ ಗ್ಲುಟಮೇಟ್ ಅನ್ನು ಹೊಂದಿರುತ್ತದೆ. ಇದು ಸೈನಸ್ ದಟ್ಟಣೆಯನ್ನು ಉಲ್ಬಣಗೊಳಿಸುತ್ತದೆ. ಆದ್ದರಿಂದ ನೀವೇನಾದರೂ, ಈ ಫಾಸ್ಟ್ ಫುಡ್ ನಂತಹ ಆಹಾರವನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಚಳಿಗಾಲದಲ್ಲಿ ಅವುಗಳಿಂದ ದೂರವಿರುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಸೈನಸ್ ತೊಂದರೆ ಹೆಚ್ಚಾಗಬಹುದು.
ಡೈರಿ ಉತ್ಪನ್ನಗಳನ್ನು ತಪ್ಪಿಸಿ:
ಡೈರಿ ಉತ್ಪನ್ನಗಳು ಅಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಪ್ಪಿಸಿ. ಡೈರಿ ಉತ್ಪನ್ನಗಳು ಮತ್ತು ಸೋಯಾಬೀನ್ಗಳು ಅಲರ್ಜಿಯನ್ನು ಹೆಚ್ಚಿಸಲು ಕಾರಣವಾಗಿವೆ, ಆದ್ದರಿಂದ ಅವುಗಳಿಂದ ದೂರವಿರುವುದು ಉತ್ತಮ.
ಸೈನಸ್ಗೆ ಕಾರಣವೇನು?:
ಸೈನುಟಿಸ್ ಸಾಮಾನ್ಯವಾಗಿ ವೈರಸ್ನಿಂದ ಉಂಟಾಗುತ್ತದೆ . ಕೆಲವು ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾ, ವಿರಳವಾಗಿ, ಶಿಲೀಂಧ್ರಗಳು ಸೈನಸ್ ಸೋಂಕಿಗೆ ಕಾರಣವಾಗಬಹುದು. ಅಲರ್ಜಿಗಳು, ಮೂಗಿನ ಪಾಲಿಪ್ಸ್ ಮತ್ತು ಹಲ್ಲಿನ ಸೋಂಕುಗಳಂತಹ ಇತರ ಪರಿಸ್ಥಿತಿಗಳು ಸಹ ಸೈನಸ್ ನೋವು ಮತ್ತು ರೋಗಲಕ್ಷಣಗಳಿಗೆ ಕಾರಣವಾಗಬಹುದು.
ಸೈನುಟಿಸ್ ನ ಪ್ರಮುಖ ಲಕ್ಷಣಗಳಾವುವು?
ಮೂಗು ಸೋರುವಿಕೆ
ಮೂಗಿನಿಂದ ದಪ್ಪ ಹಳದಿ ಅಥವಾ ಹಸಿರು ಸ್ರವಿಸುವಿಕೆ
ಮೂಗು ಕಟ್ಟುವಿಕೆ
ಮುಖದಲ್ಲಿ ಒತ್ತಡ (ವಿಶೇಷವಾಗಿ ಮೂಗು, ಕಣ್ಣುಗಳು ಮತ್ತು ಹಣೆಯ ಸುತ್ತ)
ತಲೆನೋವು ಮತ್ತು ಅಥವಾ ನಿಮ್ಮ ಹಲ್ಲು,
ಕಿವಿಗಳಲ್ಲಿ ನೋವು.
ದುರ್ಗಂಧಭರಿತ ಉಸಿರಾಟ
ಕೆಮ್ಮು
ಸುಸ್ತು
Sinusitis Diet Foods to avoid eating if your suffering from Sinusitis. Avoid junk food such as pizza, chips, burgers, etc. You need to start keeping away from fried food, white sugar, white flour, and fatty meats. Moreover, gluten, refined carbohydrates, and MSG as well as cut-out things such as wheat, instant mashed potatoes, processed soups, and pastries.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm