psoriasis flares, but you have many ways to combat the drying effects of cold temps and indoor heating.
">ಬ್ರೇಕಿಂಗ್ ನ್ಯೂಸ್
03-12-21 11:52 am Source: Boldsky Kannada ಡಾಕ್ಟರ್ಸ್ ನೋಟ್
ಸೋರಿಯಾಸಿಸ್ ಎಂಬುವುದು ದೀರ್ಘ ಕಾಲದ ಚರ್ಮದ ಸಮಸ್ಯೆಯಾಗಿದೆ. ಸೋರಿಯಾಸಿಸ್ ಎಂಬುವುದು ಚರ್ಮ, ಉಗುರುಗಳು ಹಾಗೂ ಕೀಲುಗಳಲ್ಲಿ ಕಂಡು ಬರುವ ಪ್ಲೇಕ್ (ಹೊಟ್ಟಿನ) ಸಮಸ್ಯೆಯಾಗಿದೆ. ಚರ್ಮದ ಮೇಲೆ ಸಣ್ಣ-ಸಣ್ಣ ಗಾಯಗಳಾಗುವುದು, ಈ ಗಾಯಗಳು ಹೊಟ್ಟಿನ ರೀತಿಯ ಚರ್ಮದಿಂದ ಮುಚ್ಚಲ್ಪಟ್ಟಿರುತ್ತದೆ. ಈ ಒಣ ಚರ್ಮ ತುರಿಕೆಯಾಗಿ ಉಜ್ಜಿದಾಗ ಗಾಯಗಳಾಗುವುದು.
ಕೈ, ಕಾಲು, ಮೊಣಕೈ, ಮೊಣಕಾಲು, ನೆತ್ತಿಯ ಚರ್ಮ ಹೀಗೆ ದೇಹದ ಅನೇಕ ಕಡೆ ಈ ರೀತಿಯ ಕಜ್ಜಿ ಕಂಡು ಬರುವುದು. ಸೋರಿಯಾಸಿಸ್ ಬರಲು ನಿಖರ ಕಾರಣವೇನೆಂಬುವುದು ಗೊತ್ತಿಲ್ಲ, ದೇಹದ ರೋಗ ನಿರೋಧಕ ವ್ಯವಸ್ಥೆಯಲ್ಲಿ ತೊಂದರೆ ಉಂಟಾದಾಗ ಈ ರೀತಿ ಕಂಡು ಬರುವುದು. ಕೆಲವರಿಗೆ ಈ ಕಾಯಿಲೆ ಅನುವಂಶೀಯವಾಗಿ ಬಂದರೆ ಮತ್ತೆ ಕೆಲವರಿಗೆ ಪ್ರತಿರೋಧಕ ಕೋಶಗಳ ಅತಿಯಾದ ಚಟುವಟಿಕೆಯಿಂದಲೂ ಬರಬಹುದು.
ಈ ಸಮಸ್ಯೆ ಇರುವವರಿಗೆ ಚಳಿಗಾಲ ಬಂತೆಂದರೆ ರೋಗ ಮತ್ತಷ್ಟು ಉಲ್ಬಣವಾಗುವುದು. ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ಒಳ್ಳೆಯ ಜೀವನಶೈಲಿ ಹಾಗೂ ಆಹಾರಶೈಲಿಯಿಂದ ಇದನ್ನು ನಿಯಂತ್ರಣದಲ್ಲಿಡಬಹುದು. ಚಳಿಗಾಲದಲ್ಲಿ ಸೋರಿಯಾಸಿಸ್ ಇರುವವರು ಈ ರೀತಿ ಆಯ್ಕೆ ಮಾಡಿದರೆ ರೋಗ ಉಲ್ಬಣವಾಗುವುದನ್ನು ತಡೆಗಟ್ಟಬಹುದು.
1. ಮಾಯಿಶ್ಚರೈಸರ್ ಮಂದವಾಗಿಬಳಸಿ
ತ್ವಚೆ ಒಣಗಿದಾಗ ತುರಿಕೆ ಹೆಚ್ಚಾಗುವುದು, ಆಗ ಗಾಯವಾಗುವುದು. ಆದ್ದರಿಂದ ಪ್ಲೇಕ್ (ಹೊಟ್ಟು) ಇರುವ ಕಡೆ ದಪ್ಪ ಆಯಿಂಟ್ಮೆಂಟ್ ಹಚ್ಚಿ. ತೆಳುವಾದ ಲೋಷನ್ಗಿಂತ ಈ ಸಮಯದಲ್ಲಿ ದಪ್ಪವಾದ ಆಯಿಂಟ್ಮೆಂಟ್ ತುಂಬಾನೇ ಪರಿಣಾಮಕಾರಿ. ಸ್ನಾನ ಮುಗಿಸಿ ಬಂದ ತಕ್ಷಣ ಮಾಯಿಶ್ಚರೈಸರ್ ಹಚ್ಚಿ.
2. ಸಾಕಷ್ಟು ನೀರು ಕುಡಿಯಿರಿ
ಈ ಸಮಯದಲ್ಲಿ ತುಂಬಾನೇ ನೀರು ಕುಡಿಯಿರಿ. ಚಳಿಗಾಲದಲ್ಲಿ ಒಣ ತ್ವಚೆ ಸಮಸ್ಯೆ ತಡೆಗಟ್ಟಲು ಇದು ಸಹಾಯ ಮಾಡುತ್ತೆ. ದಿನದಲ್ಲಿ ಕಡಿಮೆಯೆಂದರೂ ಮೂರು ಲೀಟರ್ ನೀರು ಕುಡಿಯಿರಿ. ಬರೀ ನೀರು ಕುಡಿಯಲು ಸಾಧ್ಯವಾಗದಿದ್ದರೆ ಜ್ಯೂಸ್ ಕುಡಿಯಿರಿ. ದ್ರವಾಹಾರ ಸೇವಿಸಿ. ಒಟ್ಟಿನಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
3. ಹ್ಯೂಮಿಡಿಫೈಯರ್ ಬಳಸಿ
ನಿಮ್ಮ ಮನೆಯ ಒಳಗಡೆ ಒಣ ಹಬೆಯ ಅನುಭವವಾಗುತ್ತಿದ್ದರೆ ಹ್ಯೂಮಿಡಿಫೈಯರ್ ಬಳಸಿ ಪರಿಸರದಲ್ಲಿ ತೇವಾಂಶ ಹೆಚ್ಚಿಸಿ, ಇದರಿಂದ ನಿಮ್ಮ ತ್ವಚೆ ತೇವವಾಗಿರುವುದು.
4. ಮೃದುವಾದ ಬಟ್ಟೆ ಧರಿಸಿ
ನೀವು ಚಳಿಗಾಲದಲ್ಲಿ ಬೆಚ್ಚನೆಯ ಬಟ್ಟೆ ಧರಿಸಿ. ಆದರೆ ಮೃದುವಾದ ಬಟ್ಟೆ ಧರಿಸಿ, ಗಾಯ ತರಿಸುವಂಥ ಬಟ್ಟೆ ಧರಿಸಬೇಡಿ.
5. ಫ್ಲೂ ಶಾಟ್ ತೆಗೆದುಕೊಳ್ಳಿ
ಚಳಿಗಾಲದಲ್ಲಿ ಶೀತ-ಜ್ವರದ ಸಮಸ್ಯೆ ಹೆಚ್ಚು. ಸೋರಿಯಾಸಿಸ್ಗೆ ತೆಗೆದುಕೊಳ್ಳುವ ಔಷಧಿಯಿಂದ ಬೇಗನೆ ಕಾಯಿಲೆ ಬರಬಹುದು, ಆದ್ದರಿಂದ ಇದನ್ನು ತಡೆಗಟ್ಟಲು ಫ್ಲೂ ಶಾಟ್ ತೆಗೆದುಕೊಳ್ಳಿ. ಕೆಲವೊಮ್ಮೆ ರಿಯಾಕ್ಷನ್ ಆಗಬಹುದು, ಆದ್ದರಿಂದ ಫ್ಲೂ ಶಾಟ್ ತೆಗೆದುಕೊಳ್ಳುವ ಮುನ್ನ ವೈದ್ಯರ ಜೊತೆ ಮಾತನಾಡಿ.
6. ಮಾನಸಿಕ ಒತ್ತಡ ಹೊರಹಾಕಿ
ಮಾನಸಿಕ ಒತ್ತಡ ಹೆಚ್ಚಾದಷ್ಟು ಗಾಯ ಒಣಗುವುದು ನಿಧಾನವಾಗುವುದು, ಆದ್ದರಿಂದ ಮಾನಸಿಕ ಒತ್ತಡವನ್ನು ಹೊರಹಾಕಿ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ಪ್ರಾಣಯಾಮ ಮಾನಸಿಕ ಒತ್ತಡ ಹೊರಹಾಕಲು ಸಹಕಾರಿ.
7. ಸೋಪ್ ಹೆಚ್ಚಾಗಿ ಬಳಸಬೇಡಿ
ಸೋಪ್ ಬಳಸುವುದರಿಂದ ತ್ವಚೆ ಮತ್ತಷ್ಟು ಒಣಗುವುದು, ಅದರ ಬದಲಿಗೆ ಬಾಡಿವಾಶ್ ಬಳಸಿ. ಸುಗಂಧ ವಾಸನೆ ಕಡಿಮೆ ಇರುವ ಸೋಪ್ ಬಳಸಿ.
8. ಚಟುವಟಿಕೆಯಿಂದ ಇರಿ
ವ್ಯಾಯಾಮ ಮಾಡುವುದರಿಂದ ಸೋರೊಯಾಸಿಸ್ ದೂರವಿಡಬಹುದು. ನಡೆಯುವುದು, ಜಿಮ್ನಲ್ಲಿ ಮಾಡುವ ವ್ಯಾಯಾಮ ಈ ಚಟುವಟಿಕೆ ದೇಹವನ್ನು ಫಿಟ್ ಆಗಿಡಲು ಸಹಾಯ ಮಾಡುವುದು.
9. ಬಿಸಿ ನೀರಿನ ಶವರ್ ಬಳಸಬೇಡಿ
ಶವರ್ ಬಳಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗ ತ್ವಚೆ ಮತ್ತಷ್ಟು ಡ್ರೈಯಾಗುವುದು, ಅದರ ಬದಲಿಗೆ ಹದ ಬಿಸಿ ನೀರನ್ನು ಬಳಸಿ ಸ್ನಾನ ಮಾಡಿ.
How to Care for Psoriasis During Winter. Winter can trigger psoriasis flares, but you have many ways to combat the drying effects of cold temps and indoor heating.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm