ಬ್ರೇಕಿಂಗ್ ನ್ಯೂಸ್
01-12-21 10:57 am Source: Boldsky Kannada ಡಾಕ್ಟರ್ಸ್ ನೋಟ್
ಕ್ಲೆನ್ಸಿಂಗ್ ನಿಮ್ಮ ತ್ವಚೆಯ ದಿನಚರಿಯ ಅತ್ಯಂತ ನಿರ್ಣಾಯಕ ಹಂತಗಳಲ್ಲಿ ಒಂದಾಗಿದೆ. ಮುಖದಲ್ಲಿನ ಕೊಳೆ, ಮೇಕಪ್ ತೆಗೆದು, ತ್ವಚೆಗೆ ಕಾಂತಿಯನ್ನು ಕೊಡುವ ಕೆಲಸ ಈ ಕ್ಲೆನ್ಸರ್ ಮಾಡುವುದು. ಆದರೆ, ನೀವು ಬಳಸುವ ಕ್ಲೆನ್ಸರ್ ನಿಮ್ಮ ತ್ವಚೆಯ ಪ್ರಕಾರಕ್ಕೆ ಸರಿಹೊಂದಿದ್ದರೆ ಮಾತ್ರ ಈ ಫಲಿತಾಂಶ ಸಿಗುವುದು. ಒಂದುವೇಳೆ ನೀವೇನಾದರೂ ತಪ್ಪು ಕ್ಲೆನ್ಸರ್ ಅಥವಾ ಫೇಸ್ ವಾಶ್ ಬಳಸುತ್ತಿದ್ದರೆ, ನಿಮ್ಮ ತ್ವಚೆಯನ್ನು ಹಾಳುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಕ್ಲೆನ್ಸರ್ ನಿಮ್ಮ ಮುಖಕ್ಕೆ ಹೊಂದಿಕೊಳ್ಳುತ್ತದೆಯೇ ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ನಿಮ್ಮ ಕ್ಲೆನ್ಸರ್ ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಹೊಂದುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ನಿಮಗೆ ತಿಳಿದಿಲ್ಲದಿದ್ದರೆ, ಈ ಕೆಳಗಿನ ಚಿಹ್ನೆಗಳನ್ನು ಗಮನಿಸಿ. ನಿಮಗೂ ಇಂತಹ ಅನುಭವ ಆಗಿದ್ದರೆ, ನಿಮ್ಮ ಕ್ಲೆನ್ಸರ್ ನಿಮ್ಮ ತ್ವಚೆಗೆ ಸರಿಯಾದುದಲ್ಲ, ಅದನ್ನು ತಕ್ಷಣ ಬದಲಾಯಿಸಬೇಕು ಎಂದರ್ಥ.
ನಿಮ್ಮ ತ್ವಚೆಗೆ ಬಳಸುತ್ತಿರುವ ಕ್ಲೆನ್ಸರ್ ಸರಿಯಲ್ಲ ಎಂದು ಸೂಚಿಸುವ ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ :
ಫೇಸ್ ವಾಶ್ ನಂತರ ಚರ್ಮ ಹಿಗ್ಗಿದರೆ :
ನಿಮ್ಮ ಮುಖವನ್ನು ತೊಳೆದ ನಂತರ ನಿಮ್ಮ ಚರ್ಮವು ಶುಷ್ಕ, ಹಿಗ್ಗಿದರೆ ಅಥವಾ ಬಿಗಿಯಾದಂತೆ ನಿಮಗೆ ಅನಿಸಿದರೆ ನೀವು ಕಠಿಣವಾದ ಕ್ಲೆನ್ಸರ್ ಅನ್ನು ಬಳಸುತ್ತಿರಬಹುದು. ಆದ್ದರಿಂದ ತ್ವಚೆ ಹಿಗ್ಗಿದಂತೆ ಅಥವಾ ಎಳೆದಿಟ್ಟುಕೊಂಡಂತೆ ಆಗುವುದು. ಆಗ ನೀವು ನಿಮ್ಮ ಕ್ಲೆನ್ಸರ್ ನ್ನು ಬದಲಾಯಿಸಿ, ಸಮತೋಲಿತವಾದ ಕ್ಲೆನ್ಸರ್ ಬಳಸಬೇಕು. ಇದು ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಸಂಪೂರ್ಣವಾಗಿ ಸಮತೋಲಿತವಾಗಿ ಇಡುತ್ತದೆ.
ಫೇಸ್ ವಾಶ್ ಮಾಡಿದ ನಂತರವೂ ಕಾಟನ್ ಪ್ಯಾಡ್ನಲ್ಲಿ ಕೊಳಕು ಇದ್ದರೆ :
ನೀವು ಫೇಸ್ ವಾಶ್ ಮಾಡಿದ ನಂತರ ಟೋನರ್ ಹಚ್ಚಿಕೊಳ್ಳಲು ಹಚ್ಚಿ ಉಂಡೆ ಬಳಸಿದಾಗ ಅದರಲ್ಲಿ ಕೊಳಕು ಕಂಡುಬಂದರೆ ನಿಮ್ಮ ಕ್ಲೆನ್ಸರ್ ಪರಿಣಾಮಕಾರಿಯಾಗಿ ಚರ್ಮವನ್ನು ಸ್ವಚ್ಛಗೊಳಿಸಿಲ್ಲ ಎಂದರ್ಥ. ಇದು ಸರಿಯಲ್ಲ,ಮುಖವನ್ನು ತೊಳೆದ ನಂತರವೂ ಕೊಳೆ ಉಳಿದಿದ್ದರೆ, ಅದು ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕಬಹುದು ಮತ್ತು ಮೊಡವೆಗಳನ್ನು ಉಂಟುಮಾಡಬಹುದು. ಇದನ್ನು ಕಡಿಮೆ ಮಾಡಲು ರಾತ್ರಿಎರಡು ಬಾರಿ ಕ್ಲೀನ್ಸಿಂಗ್ ಮಾಡುವಂತೆ ತಜ್ಞರು ಸೂಚಿಸುತ್ತಾರೆ.ಕೊಳಕು, ಸನ್ಸ್ಕ್ರೀನ್ ಮತ್ತು ಪಿಗ್ಮೆಂಟ್ ಅನ್ನ ತೆಗೆಯಲು ಮೊದಲ ಹಂತವಾಗಿ ತೈಲ ಆಧಾರಿತ ಕ್ಲೆನ್ಸರ್ ಅನ್ನು ಬಳಸಿ. ಇದು ಆಯಸ್ಕಾಂತದಂತೆ ಕೆಲಸ ಮಾಡಿ, ಕೊಳೆಯನ್ನು ಹೊರತೆಗೆಯುತ್ತದೆ. ಚರ್ಮದ ಸರಿಯಾದ ಶುದ್ಧೀಕರಣಕ್ಕಾಗಿ ಎರಡನೇ ಹಂತವಾಗಿ ಕ್ಲೆನ್ಸರ್ ಬಳಸಿ.
ವಿಸ್ತಾರವಾಗುತ್ತಿರುವ ತ್ವಚೆಯ ರಂಧ್ರಗಳು:
ನಿಮ್ಮ ತ್ವಚೆಯ ರಂಧ್ರಗಳು ದೊಡ್ಡದಾಗುತ್ತಿದ್ದರೆ, ಅವುಗಳೊಳಗೆ ಕೊಳಕು ಸಂಗ್ರಹವಾಗಿ, ಇದು ಮತ್ತಷ್ಟು ಮೊಡವೆ ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದಕ್ಕಾಗಿ ಗ್ಲೈಕೋಲಿಕ್ ಆಮ್ಲದಂತಹ ಪದಾರ್ಥಗಳಿರುವ ರಂಧ್ರ-ಶುದ್ಧೀಕರಣ ಕ್ಲೆನ್ಸರ್ ಅನ್ನು ಬಳಸಬೇಕು. ಇದು ಚರ್ಮವನ್ನು ಶುದ್ಧ ಮತ್ತು ಹೈಡ್ರೀಕರಿಸಿದಂತೆ ಇಡುವುದು.
ಇತರ ಅಂಶಗಳು :
ಹೆಚ್ಚುವರಿಯಾಗಿ, ಚರ್ಮದ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕದ ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸುತ್ತೀರಾ ಎಂದು ಪರೀಕ್ಷಿಸಿಕೊಳ್ಳಿ. ಅಲ್ಲದೆ ದಿನಕ್ಕೆರಡು ಬಾರಿ ಮುಖ ತೊಳೆದರೆ ತ್ವಚೆಗೆ ಒಳ್ಳೆಯದು ಆದರೆ ಅತಿಯಾಗಿ ತೊಳೆಯಬೇಡಿ ಅದು ಚರ್ಮವನ್ನು ಒಣಗಿಸಿ ಉರಿಯುವಂತೆ ಮಾಡುತ್ತದೆ.
Signs That Indicate Your Cleanser Is Actually Damaging Your Skin. Here we talking about Signs That Indicate Your Cleanser Is Actually Damaging Your Skin
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm