ಬ್ರೇಕಿಂಗ್ ನ್ಯೂಸ್
10-10-22 08:00 pm Source: Vijayakarnataka ಡಾಕ್ಟರ್ಸ್ ನೋಟ್
ಮೆಕ್ಕೆಜೋಳವು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಕೆಲವರು ಇದನ್ನು ಹಾಗೆಯೇ ಸುಟ್ಟು, ಉಪ್ಪು, ಖಾರ ಹಾಕಿ ತಿಂದರೆ ಇನ್ನೂ ಕೆಲವರು ಮೆಕ್ಕೆಜೋಳವನ್ನು ಹುಡಿ ಮಾಡಿ ರೊಟ್ಟಿ ತಟ್ಟುತ್ತಾರೆ.ಮೆಕ್ಕೆಜೋಳವು ಮಳೆಯಲ್ಲಿ ನಿಮ್ಮನ್ನು ಬೆಚ್ಚಗಿಡುವುದಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಯೋಜನಗಳನ್ನು ತರುತ್ತದೆ ಎಂಬುದು ನಿಮಗೆ ತಿಳಿದಿದೆಯೇ.
ಮೆಕ್ಕೆ ಜೋಳವು ಪ್ರಪಂಚದ ಅತ್ಯಂತ ಜನಪ್ರಿಯ ಧಾನ್ಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ನಾವು ಹೆಚ್ಚಾಗಿ ನೋಡುವುದು ಹಳದಿ ಹಾಗೂ ಬಿಳಿ ಬಣ್ಣಗಳಲ್ಲಿನ ಮೆಕ್ಕೆಜೋಳ. ಮೆಕ್ಕೆಜೋಳವು ಅನೇಕ ಪೌಷ್ಟಿಕಾಂಶದ ಗುಣಗಳನ್ನು ಹೊಂದಿದೆ, ಇದರಿಂದಾಗಿ ಪೌಷ್ಟಿಕಾಂಶ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.
ಪೌಷ್ಟಿಕತಜ್ಞೆ ಏನಂತಾರೆ?
ಇತ್ತೀಚೆಗೆ, ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಮೆಕ್ಕೆಜೋಳವನ್ನು ಸೂಪರ್ಫುಡ್ ಎಂದು ಕರೆದಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಜೋಳದ ಸೇವನೆಯ ವಿಧಾನದೊಂದಿಗೆ ಆರೋಗ್ಯ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.
ಕಾರ್ನ್ ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮುಖ ಮತ್ತು ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ಕಾರ್ನ್ ಯಾಕೆ ಸೂಪರ್ಫುಡ್ ಆಗಿದೆ?
ಕಾರ್ನ್ ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಜೊತೆಗೆ ಅನೇಕ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದರ ಸಹಾಯದಿಂದ ದೇಹಕ್ಕೆ ವಿವಿಧ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ.
ಇದರೊಂದಿಗೆ, ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಲ್ಲಿ ಅಗತ್ಯ ಸಹಾಯವನ್ನು ಒದಗಿಸಲು ಸಹ ಇದು ಕಾರ್ಯನಿರ್ವಹಿಸುತ್ತದೆ. ಜೋಳವನ್ನು ಸೂಪರ್ಫುಡ್ ಎಂದು ಕರೆಯಲು ಇದೇ ಕಾರಣ.
ಯಾವ ರೋಗಗಳಿಗೆ ಜೋಳವು ಪ್ರಯೋಜನಕಾರಿಯಾಗಿದೆ?
ಸೆಲೆಬ್ರಿಟಿ ಪೌಷ್ಟಿಕತಜ್ಞೆ ಕಾರ್ನ್ ತಿನ್ನುವಂತೆ ಸಲಹೆ ನಿಡಿದ್ದಾರೆ
ಜೋಳದ ಕಾಳುಗಳು ವಿಟಮಿನ್ ಬಿ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ನಿಮ್ಮ ಕೂದಲನ್ನು ಸುಧಾರಿಸುತ್ತದೆ ಮತ್ತು ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.
ಇದರಲ್ಲಿರುವ ನಾರಿನ ಸಹಾಯದಿಂದ ನಿಮಗೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ. ಇದಲ್ಲದೆ, ಈ ಧಾನ್ಯವನ್ನು ಸೇವಿಸುವುದರಿಂದ ನಿಮ್ಮ ರುಚಿಯನ್ನು ಹಾಳು ಮಾಡದೆ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು.
ಮೆಕ್ಕೆಜೋಳವನ್ನು ಹೇಗೆ ಸೇವಿಸಬೇಕು?
ನಿಮ್ಮ ಅನುಕೂಲಕ್ಕೆ ಮತ್ತು ಆಯ್ಕೆಗೆ ಅನುಗುಣವಾಗಿ ಜೋಳವನ್ನು ಹುರಿದು, ಕುದಿಸಿ ತಿನ್ನಬಹುದು ಎನ್ನುತ್ತಾರೆ ಪೌಷ್ಟಿಕತಜ್ಞರು. ಇದಲ್ಲದೆ, ಅದರ ಹಿಟ್ಟಿನಿಂದ ಮಾಡಿದ ಬ್ರೆಡ್ ಅಥವಾ ರೊಟ್ಟಿಯನ್ನು ಸೇವಿಸಬಹುದು.
ಯಾವ ಜೋಳ ಆರೋಗ್ಯಕರ
ನೀವು ಅಮೇರಿಕನ್ ಕಾರ್ನ್, ಪಾಪ್ ಕಾರ್ನ್ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಹುಡುಕುತ್ತಿದ್ದರೆ, ಯಾವ ಕಾರ್ನ್ ಆರೋಗ್ಯಕರ ಎಂದು ತಿಳಿಯಿರಿ. ಅಮೇರಿಕನ್ ಕಾರ್ನ್, ಪಾಪ್ ಕಾರ್ನ್ ಮತ್ತು ಇತರ ಕಾರ್ನ್ ಬದಲಿಗಳಿಗಿಂತ ದೇಸಿ ಕಾರ್ನ್ ಅನ್ನು ತಿನ್ನುವುದು ಆರೋಗ್ಯಕರ ಎಂದು ಪೌಷ್ಟಿಕತಜ್ಞೆ ರುಜುಟಾ ಸಲಹೆ ನೀಡುತ್ತಾರೆ.
Health Benefits Of Eating Corn According To Nutritionist.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm