ಬ್ರೇಕಿಂಗ್ ನ್ಯೂಸ್
01-10-22 08:26 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ಬೆಳಗ್ಗಿನಿಂದ ಸಂಜೆಯವರೆಗೆ ಏನು ಮಾಡದಿದ್ದರೂ ಅನೇಕರಿಗೆ ಕಾಫಿ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ. ಆಫೀಸ್ಗೆ ಹೋದ ತಕ್ಷಣ ಒಂದು ಕಪ್ ಕಾಫಿ ಹೀರಿ ಕೆಲಸ ಆರಂಭಿಸುವುದು, ಮೂಡ್ ಹಾಳಾದ್ರೆ, ತಲೆನೋವು ಬಂದ್ರೆ ಅಷ್ಟೆ ಯಾಕೆ ಯಾರಾದರೂ ಸ್ನೇಹಿತರು ಸಿಕ್ಕರೂ ಸಾಕು ಒಂದು ಕಪ್ ಕಾಫಿ ಕುಡಿಯುವ ಅಭ್ಯಾಸ ಅನೇಕರದ್ದು.
ಇಥಿಯೋಪಿಯಾದಲ್ಲಿ ಮೊದಲ ಬಾರಿಗೆ ಪರಿಚಯವಾದ ಕಾಫಿ ಈಗ ದೇಶದ ಮೂಲೆ ಮೂಲೆಗೆ ತಲುಪಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಕಾಫಿ ಸೇವನೆಯಿಂದ ದೇಹಕ್ಕೆ ಹಾನಿಯೇ ಆಗುವುದು. ಆದರೆ ಮಿತವಾದ ಕಾಫಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.ಹಾಗಾದರೆ ಒಂದು ಕಪ್ ಕಾಫಿಯಿಂದ ಏನು ಪ್ರಯೋಜನ ಎನ್ನುವ ಬಗ್ಗೆ ವೈದ್ಯರೇ ತಿಳಿಸಿದ್ದಾರೆ ಬನ್ನಿ ನೋಡೋಣ.
ಮೂಡ್ ರಿಪ್ರೆಶ್ಗೆ
ಒಂದು ಕಪ್ ಕಾಫಿ ಕುಡಿಯುವುದರಿಂದ ಮೂಡ್ ಫ್ರೆಶ್ ಆಗುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ. ಶರದ್. ಕೆಫೀನ್ ಅಂಶವು ನರಮಂಡಲದ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದ ಸಾಮಾನ್ಯವಾಗಿ ಹೆಚ್ಚು ಜಾಗರೂಕತೆ ಮತ್ತು ಶಕ್ತಿಯುತತೆಯನ್ನು ಅನುಭವಿಸಲು ಇದನ್ನು ಸೇವಿಸಬಹುದು. ಅಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಬೆಚ್ಚಗಿನ ಅನುಭವ
ಚಳಿಗಾಲ ಅಥವಾ ಮಳೆಗಾಲದಲ್ಲಿ ದೇಹವನ್ನು ಬೆಚ್ಚಗೆ ಮಾಡಲು ಕಾಫಿ ಸಹಾಯ ಮಾಡುತ್ತದೆ. ಅಲ್ಲದೆ ಬ್ಲ್ಯಾಕ್ ಕಾಫಿಯಂತಹ ಪಾನೀಯಗಳು ಶೀತ, ತಲೆನೋವನ್ನು ನಿವಾರಿಸಲು ಕೂಡ ನೆರವಾಗುತ್ತದೆ.
ಹೀಗಾಗಿ ದಿನನಿತ್ಯ ಒಂದು ಕಪ್ ಆದರೂ ಕಾಫಿ ಸೇವನೆ ಮಾಡುವುದು ಒಳ್ಳೆಯದು. ಆದರೆ ನೆನಪಿಡಿ ಹೆಚ್ಚು ಸಕ್ಕರೆ ಸೇರಿಸಿ ಕಾಫಿ ಕುಡಿದರೆ ಮಧುಮೇಹದಂತಹ ಸಮಸ್ಯೆ ಕಾಡಬಹುದು ಹೀಗಾಗಿ ಎಚ್ಚರ.
ಮೆದುಳಿಗೆ ಒಳ್ಳೆಯದು
ಅಧ್ಯಯದ ಹೇಳುವ ಪ್ರಕಾರ ಮೆದುಳನ್ನು ರಿಫ್ರೆಶ್ ಮಾಡಲು ಕಾಫಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಡಾ. ಶರದ್. ರಕ್ತ-ಮಿದುಳಿನ ತಡೆಗೋಡೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಕಾಫಿಯಲ್ಲಿರುವ ಪಾಲಿಫಿನಾಲ್ ಸೂಕ್ಷ್ಮ ಪೋಷಕಾಂಶಗಳು ಸ್ವತಂತ್ರ ರಾಡಿಕಲ್ಗಳಿಂದ ಅಂಗಾಂಶ ಹಾನಿಯನ್ನು ತಡೆಯಬಹುದು, ಜೊತೆಗೆ ಮೆದುಳಿನ ರಕ್ತನಾಳಗಳ ಅಡಚಣೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಚರ್ಮಕ್ಕೂ ಬೆಸ್ಟ್
ಕಾಫಿಯು ಕೊಂಚ ಕಹಿ ಅಂಶವನ್ನು ಹೊಂದಿರುವುದರಿಂದ ಚರ್ಮವನ್ನು ಆರೋಗ್ಯವಾಗಿರಿಕೊಳ್ಳಲು, ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಫಿ ಸೇವನೆ ಮಾತ್ರವಲ್ಲ ಕಾಫಿ ಪುಡಿಯಿಂದ ಫೇಸ್ ಪ್ಯಾಕ್ ಕೂಡ ತಯಾರಿಸಿ ಹಚ್ಚಿಕೊಳ್ಳಬಹುದು. ಇದರಿಂದ ಕಪ್ಪು ಕಲೆ, ಸನ್ ಟ್ಯಾನ್ ನ್ನು ನಿವಾರಿಸಿ ಚರ್ಮದ ಹೊಳಪು ಹೆಚ್ಚಾಗುತ್ತದೆ.
ದಿನಕ್ಕೆ ಎಷ್ಟು ಕಾಫಿ ಕುಡಿಯಬಹುದು
ಅತಿಯಾಗಿ ಕಾಫಿ ಸೇವನೆ ಮಾಡುವುದರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಪಿತ್ತದಂತಹ ಸಮಸ್ಯೆ ಕಾಡಬಹುದು. ಹೀಗಾಗಿ ಕಾಫಿ ಕುಡಿಯುವುದಕ್ಕೂ ಒಂದು ಮಿತಿ ಇದೆ ಎನ್ನುತ್ತಾರೆ ಡಾ. ಶರದ್.
ಆದ್ದರಿಂದ ಪ್ರತಿದಿನ 250 ಎಂಎಲ್ ಅಂದರೆ ಸಣ್ಣ ಕಪ್ನಲ್ಲಿ ಬೆಳಗ್ಗೆ ಮತ್ತು ಸಂಜೆ ಒಂದು ಕಪ್ ಕಾಫಿ ಕುಡಿದರೆ ಅದ್ಭುತ ಲಾಭ ಪಡೆಯಬಹುದಾಗಿದೆ.
International Coffee Day 2022 Doctor Explains Drinking Coffee Is How Beneficial.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm