ಬ್ರೇಕಿಂಗ್ ನ್ಯೂಸ್
13-03-23 12:35 pm HK News Desk ಸಿನಿಮಾ
ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾದ 'ನಾಟು ನಾಟು..' ಹಾಡಿಗೆ ಆಸ್ಕರ್ ಪ್ರಶಸ್ತಿ ದೊರೆತಿದೆ. ಈ ಹಾಡಿಗೆ ಈ ಹಿಂದೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಇದೀಗ 'ಆಸ್ಕರ್ ಪ್ರಶಸ್ತಿ' ಸಿಕ್ಕಿರುವುದ ಭಾರತೀಯರಿಗೆ ಹೆಮ್ಮೆ ಮೂಡಿಸಿದೆ. 'ನಾಟು ನಾಟು..' ಹಾಡಿಗೆ ಎಂಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದು, ಚಂದ್ರಬೋಸ್ ಅವರು ಸಾಹಿತ್ಯ ಬರೆದಿದ್ದರು. ಈ ಹಾಡಿಗೆ ಪ್ರೇಮ್ ರಕ್ಷಿತ್ ಅವರು ನೃತ್ಯ ಸಂಯೋಜಿಸಿದ್ದರು. ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ 'ನಾಟು ನಾಟು..' ಹಾಡು ಈಗ ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡು, ಭಾರತೀಯರಲ್ಲಿ ಹೆಮ್ಮೆಯ ಭಾವ ಮೂಡಿಸಿದೆ.
ಅಂದಹಾಗೆ, 'ನಾಟು ನಾಟು..' ಹಾಡಿಗೆ ಎಂಎಂ ಕೀರವಾಣಿ ಸಂಗೀತ ನೀಡಿದ್ದು, ಈ ಹಾಡನ್ನು ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. ಮ್ಯೂಸಿಕ್ ಅರೆಂಜ್ಮೆಂಟ್ ಅನ್ನು ಕಾಲಭೈರವ ಅವರೇ ಮಾಡಿದ್ದಾರೆ. 'ನಾಟು ನಾಟು..' ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದು, ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಉಕ್ರೇನ್ನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿರುವುದು ವಿಶೇಷ. ಈ ಹಾಡು ಅದ್ಭುತವಾಗಿ ಮೂಡಿಬರುವಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಅವರ ಕೊಡುಗೆಯೂ ಸಾಕಷ್ಟಿದೆ. ಅತ್ಯದ್ಭುತವಾಗಿ ನೃತ್ಯ ಮಾಡುವ ಮೂಲಕ ಈ ಹಾಡನ್ನು ಮತ್ತೊಂದು ಹಂತಕ್ಕೆ ಅವರಿಬ್ಬರು ಕೊಂಡೊಯ್ದಿದ್ದರು.
ಇನ್ನು, ಆಸ್ಕರ್ ವೇದಿಕೆ ಮೇಲೆ ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗುಂಜ್ ಅವರು 'ನಾಟು ನಾಟು..' ಹಾಡನ್ನು ಹಾಡಿದರು. ಇಡೀ ಸಭಾಂಗಣವು ಜೋರು ಚಪ್ಪಾಳೆಗಳ ಮೂಲಕ ಚಿತ್ರತಂಡವನ್ನು ಅಭಿನಂದಿಸಿತು. ಇನ್ನೂ ಪ್ರಶಸ್ತಿಯನ್ನು ಎಂಎಂ ಕೀರವಾಣಿ ಮತ್ತು ಗೀತ ಸಾಹಿತಿ ಚಂದ್ರಬೋಸ್ ಅವರು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೀರವಾಣಿ, ಇಡೀ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು. 'ಇದು ಎಲ್ಲ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿದೆ..' ಎಂದು ಹೇಳಿದರು.
‘ಅಸಾಧಾರಣ.... ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡು. ಈ ಪ್ರತಿಷ್ಠಿತ ಗೌರವ ಪಡೆದ ಕೀರವಾಣಿ, ಚಂದ್ರಬೋಸ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು. ಇಡೀ ಭಾರತ ಹೆಮ್ಮೆ ಪಟ್ಟುಕೊಳ್ಳುತ್ತದೆ‘ ಎಂದು ಹಾಡು ಬರೆದಿದರುವ ಚಂದ್ರಬೋಸ್ ಹಾಗೂ ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿಸಿದ್ದಾರೆ.
#NaatuNaatu wins the #Oscar for best Original Song 😭#SSRajamouli & team has done it🫡🇮🇳
— Abhi (@abhi_is_online) March 13, 2023
Indian Cinema on the Rise 🔥 !! #RRRMovie | #AcademyAwards | pic.twitter.com/VG7zXFhnJe
Exceptional!
— Narendra Modi (@narendramodi) March 13, 2023
The popularity of ‘Naatu Naatu’ is global. It will be a song that will be remembered for years to come. Congratulations to @mmkeeravaani, @boselyricist and the entire team for this prestigious honour.
India is elated and proud. #Oscars https://t.co/cANG5wHROt
After creating history at the Golden Globes, RRR's Naatu Naatu is bringing home India's first Oscars in the Best Original Song category. The Telugu language song has been celebrated worldwide for its high-energy beats and unparalleled soundtrack. The song, composed by MM Keeravaani and sung by Rahul Sipligunj and Kaala Bhairava, features Ram Charan and Jr NTR.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm