ಬ್ರೇಕಿಂಗ್ ನ್ಯೂಸ್
04-01-23 02:31 pm Source: Vijayakarnataka ಸಿನಿಮಾ
ಉಪೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿರುವ ಬಹು ನಿರೀಕ್ಷಿತ ‘ಯುಐ’ ಸಿನಿಮಾ ತನ್ನ ಮೇಕಿಂಗ್ ವಿಚಾರಕ್ಕೆ ಸದ್ದು ಮಾಡುತ್ತಿದೆ. ಅಲ್ಲದೆ ಬಹಳ ದಿನಗಳ ನಂತರ ಉಪೇಂದ್ರ ನಿರ್ದೇಶನ ಮಾಡುತ್ತಿರುವ ಕಾರಣಕ್ಕೂ ಈ ಚಿತ್ರದ ಮೇಲೆ ಭಾರತೀಯ ಚಿತ್ರರಂಗ ಕಣ್ಣಿಟ್ಟಿದೆ. ತಿಂಗಳುಗಟ್ಟಲೆ ಚಿತ್ರೀಕರಣ ಮಾಡಿದರೂ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ನಟಿ ರೀಷ್ಮಾ ನಾಣಯ್ಯ ನಾಯಕಿಯಾಗಿ ಸೆಲೆಕ್ಟ್ ಆಗಿದ್ದು, ಅವರು ತಮ್ಮ ಪಾತ್ರದ ಬಗ್ಗೆ ಲವಲವಿಕೆ ಜತೆ ಮಾತನಾಡಿದ್ದಾರೆ.
‘ಏಕ್ ಲವ್ ಯಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ, ಈಗಾಗಲೇ ಗಣೇಶ್ ಅವರ ‘ಬಾನದಾರಿಯಲ್ಲಿ’ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಯುಐ’ ಅವರ ವೃತ್ತಿ ಬದುಕಿನ ಬಹು ದೊಡ್ಡ ಸಿನಿಮಾ ಎಂದು ಅವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಬಗ್ಗೆ ಹೆಚ್ಚಿನ ವಿವರ ನೀಡದ ಅವರು ‘ಇಂತಹ ಪ್ರಾಜೆಕ್ಟ್ನಲ್ಲಿ ನಟಿಸುತ್ತಿರುವುದಕ್ಕೆ ಸಿಕ್ಕಾಪಟ್ಟೆ ಖುಷಿ’ ಎಂದಿದ್ದಾರೆ.
‘ನಾನು ಉಪೇಂದ್ರ ಅವರ ಜತೆ ನಾಯಕಿಯಾಗಿ ನಟಿಸುತ್ತಿದ್ದೇನೆ ಎಂಬ ವಿಷಯವೇ ನನಗೆ ಅಚ್ಚರಿ. ಒಂಥರಾ ಶಾಕ್ನಲ್ಲೇ ಇದ್ದೇನೆ. 10 ದಿನಗಳ ಕಾಲ ಅವರ ಜತೆ ಚಿತ್ರೀಕರಣ ಮಾಡಿದ ಮೇಲೆ ನನಗೆ ಈ ಶಾಕ್ನಿಂದ ಹೊರ ಬರುತ್ತೇನೆ ಎನಿಸುತ್ತದೆ. ಇಂತಹ ಒಂದು ಅವಕಾಶ ಪಡೆದುಕೊಂಡ ನಾನು ನಿಜಕ್ಕೂ ಅದೃಷ್ಟವಂತೆ. ಉಪೇಂದ್ರ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳದವಳು ನಾನು. ಅವರ ದೊಡ್ಡ ಫ್ಯಾನ್. ಈಗ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ ಎಂಬುದು ಖುಷಿಯ ಸಂಗತಿ’ ಎನ್ನುತ್ತಾರೆ ರೀಷ್ಮಾ.
‘ಇದೊಂದು ಪ್ಯಾನ್ ಇಂಡಿಯಾ ಚಿತ್ರ. ಲಹರಿ ಫಿಲ್ಮ್ಸ್, ಶ್ರೀಕಾಂತ್ ಅವರಂಥ ನಿರ್ಮಾಪಕರನ್ನು ಒಳಗೊಂಡ ಈ ಚಿತ್ರದ ಮೂಲಕ ನನ್ನ ವೃತ್ತಿ ಬದುಕಿನಲ್ಲಿ ದೊಡ್ಡ ಅವಕಾಶ ನನಗೆ ಒದಗಿದೆ’ ಎಂದು ಹೇಳಿದ್ದಾರೆ ರೀಷ್ಮಾ ನಾಣಯ್ಯ.
‘ಪಾತ್ರದ ಬಗ್ಗೆ ನಾನು ಈಗಲೇ ಏನೂ ಹೇಳಲಾರೆ. ಏಕೆಂದರೆ ಇದು ಉಪ್ಪಿಯವರ ಸಿನಿಮಾ. ಅಂದರೆ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇರುತ್ತದೆ. ನನ್ನ ಪರ್ಫಾರ್ಮೆನ್ಸ್ಗೆ ಸಾಕಷ್ಟು ಜಾಗ ಇರುವಂತಹ ಸಿನಿಮಾ ಎಂದಷ್ಟೇ ಹೇಳುತ್ತೇನೆ. ಅವರಿಂದ ಬಹಳಷ್ಟನ್ನು ಕಲಿಯುವುದಕ್ಕೆ ಅವಕಾಶವಿದೆ. ನಾನು ಈ ಸಿನಿಮಾ ಮುಗಿಯುವ ಹೊತ್ತಿಗೆ ಸಾಕಷ್ಟು ಕಲಿತಿರುತ್ತೇನೆ. ಬರೀ ಎರಡು ದಿನಗಳ ಚಿತ್ರೀಕರಣ ಮಾತ್ರ ಮುಗಿಸಿದ್ದೇನೆ. ಸದ್ಯದಲ್ಲೆ ಮುಂದಿನ ಶೆಡ್ಯೂಲ್ ಆರಂಭವಾಗಲಿದ್ದು, ಅದರಲ್ಲಿ ಪಾಲ್ಗೊಳ್ಳುತ್ತೇನೆ’ ಎನ್ನುವುದು ರೀಷ್ಮಾ ಅವರ ಮಾತು.
‘ಪಾತ್ರದ ಬಗ್ಗೆ ನಾನು ಈಗಲೇ ಏನೂ ಹೇಳಲಾರೆ. ಏಕೆಂದರೆ ಇದು ಉಪ್ಪಿಯವರ ಸಿನಿಮಾ. ಅಂದರೆ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ಇರುತ್ತದೆ. ನನ್ನ ಪರ್ಫಾರ್ಮೆನ್ಸ್ಗೆ ಸಾಕಷ್ಟು ಜಾಗ ಇರುವಂತಹ ಸಿನಿಮಾ ಎಂದಷ್ಟೇ ಹೇಳುತ್ತೇನೆ. ಅವರಿಂದ ಬಹಳಷ್ಟನ್ನು ಕಲಿಯುವುದಕ್ಕೆ ಅವಕಾಶವಿದೆ. ನಾನು ಈ ಸಿನಿಮಾ ಮುಗಿಯುವ ಹೊತ್ತಿಗೆ ಸಾಕಷ್ಟು ಕಲಿತಿರುತ್ತೇನೆ. ಬರೀ ಎರಡು ದಿನಗಳ ಚಿತ್ರೀಕರಣ ಮಾತ್ರ ಮುಗಿಸಿದ್ದೇನೆ. ಸದ್ಯದಲ್ಲೆ ಮುಂದಿನ ಶೆಡ್ಯೂಲ್ ಆರಂಭವಾಗಲಿದ್ದು, ಅದರಲ್ಲಿ ಪಾಲ್ಗೊಳ್ಳುತ್ತೇನೆ’ ಎನ್ನುವುದು ರೀಷ್ಮಾ ಅವರ ಮಾತು.
Real Star Upendra Ui Heroine Reeshma Nanaiah.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm