ಬ್ರೇಕಿಂಗ್ ನ್ಯೂಸ್
03-01-23 11:59 am Source: Vijayakarnataka ಸಿನಿಮಾ
ಸಾಮಾನ್ಯವಾಗಿ ನಟಿಯರಿಗೆ ಅದರಲ್ಲೂ ನಾಯಕಿ ಪಾತ್ರದಲ್ಲಿ ಗುರುತಿಸಿಕೊಂಡವರಿಗೆ ಮದುವೆಯಾದ ಮೇಲೆ ಸಿನಿಮಾಗಳ ಆಫರ್ಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ನಟಿ ಮಿಲನಾ ನಾಗರಾಜ್ ಅವರಿಗೆ ಮದುವೆಯಾದ ಮೇಲೆ ಆಫರ್ಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಏಳು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈಗ ಅನೀಶ್ ತೇಜೇಶ್ವರ್ ಜತೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾದಲ್ಲಿಯೂ ನಾಯಕಿಯಾಗಿ ಅವರು ನಟಿಸುತ್ತಿದ್ದಾರೆ.
ನಟ, ನಿರ್ದೇಶಕ ಅಭಿಷೇಕ್ ಶೆಟ್ಟಿ ‘ಅರಾಮ್ ಅರವಿಂದ ಸ್ವಾಮಿ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ನಮ್ ಗಣಿ ಬಿಕಾಂ ಪಾಸ್’ ಮತ್ತು ‘ಗಜಾನನ ಗ್ಯಾಂಗ್’ ಸಿನಿಮಾದ ಮೂಲಕ ಅಭಿಷೇಕ್ ಗಮನ ಸೆಳೆದಿದ್ದರು. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ಅನೀಶ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ಈ ಸಿನಿಮಾದ ಪಾತ್ರದ ಬಗ್ಗೆ ಮಿಲನಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದು, ಹೊಸ ರೀತಿಯ ಪಾತ್ರ ಸಿಕ್ಕಿದೆ ಎಂದಿದ್ದಾರೆ.
‘ಅಭಿಷೇಕ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿನಾನು ಮಲಯಾಳಿ ಹುಡುಗಿಯಾಗಿ ನಟಿಸುತ್ತಿದ್ದೇನೆ. ಇದುವರೆಗೂ ಈ ರೀತಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿಲ್ಲ. ಬಹಳ ಸಿಂಪಲ್ ಆಗಿ, ಹೋಮ್ಲಿಹುಡುಗಿ ಎನಿಸುವ ಪಾತ್ರವದು. ನಾನು ಇಲ್ಲಿಯವರೆಗೂ ಈ ರೀತಿ ಪಾತ್ರದಲ್ಲಿನಟಿಸಿಲ್ಲದ ಕಾರಣ ಇದು ನನಗೆ ಬಹಳ ವಿಶೇಷ. ‘ಅರಾಮ್ ಅರವಿಂದ್ ಸ್ವಾಮಿ’ ಸಿನಿಮಾದಲ್ಲಿಯೂ ವಿಭಿನ್ನ ಪಾತ್ರದ ಜತೆ ಅನೀಶ್ ಜತೆಗೆ ಹೊಸ ಕಾಂಬಿನೇಶನ್’ ಎಂದು ಹೇಳಿದ್ದಾರೆ ಮಿಲನಾ ನಾಗರಾಜ್.
‘ಮದುವೆಯಾದ ಮೇಲೆ ನಾನು ಏಳು ಸಿನಿಮಾಗಳಲ್ಲಿನಟಿಸಿದ್ದೇನೆ. ಅದರಲ್ಲೂ ಬಹಳ ಇಂಟ್ರೆಸ್ಟಿಂಗ್ ಆಗಿರುವಂತಹ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ‘ಲವ್ ಬರ್ಡ್ಸ್’, ‘ಫಾರ್ ರಿಜಿಸ್ಪ್ರೇಶನ್’ ಹೀಗೆ ಪ್ರತಿಯೊಂದು ಸಿನಿಮಾಗಳಲ್ಲಿಹೊಸ ರೀತಿಯ ಕ್ಯಾರೆಕ್ಟರ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ಸಿನಿಮಾಗಳಿಗಾಗಿ ಹಲವು ಕಥೆಗಳನ್ನು ಕೇಳುತ್ತಿದ್ದೇನೆ. ಸಿನಿಮಾ ಜನರಿಗೆ ಇಂಟ್ರೆಸ್ಟಿಂಗ್ ಎನಿಸುತ್ತದೆ ಎಂದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ’ ಎನ್ನುವುದು ಮಿಲನಾ ಅವರ ಮಾತು.
ಎರಡು ಲುಕ್
ಮಿಲನಾ ಅವರು ‘ಅರಾಮ್ ಅರವಿಂದ್ ಸ್ವಾಮಿ’ ಸಿನಿಮಾದಲ್ಲಿಎರಡು ಲುಕ್ನಲ್ಲಿರಲಿದ್ದಾರಂತೆ. ‘ಮಿಲನಾ ಇದುವರೆಗೂ ನಿರ್ವಹಿಸದೇ ಇರುವಂತಹ ಪಾತ್ರವಿದು. ಪಾತ್ರ, ಅದರ ಹಿನ್ನಲೆ ಹೀಗೆ ಎಲ್ಲವೂ ಬೇರೆ ರೀತಿ ಇದೆ. ಅವರು ಎರಡು ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನನ್ನ ಪ್ರಕಾರ ಈ ಪಾತ್ರ ಅವರಿಗೆ ಕಂಪ್ಲೀಟ್ ಚೇಂಜ್ ಓವರ್ ನೀಡಲಿದೆ’ ಎಂದು ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದಾರೆ.
ಮಿಲನಾ ಈಗಾಗಲೇ ಸಿನಿಮಾದ ಶೂಟಿಂಗ್ನಲ್ಲಿಪಾಲ್ಗೊಂಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ನ ಈ ಚಿತ್ರದಲ್ಲಿಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಇನ್ನಿತರ ವಿವರಗಳನ್ನು ಚಿತ್ರತಂಡ ಇದೇ 12ರಂದು ಅಧಿಕೃತವಾಗಿ ಅನೌನ್ಸ್ ಮಾಡಲಿದೆ.
"ನನ್ನ ಪಾತ್ರಕ್ಕೊಂದು ವಿಶೇಷತೆ ಇದೆ. ಇದೇ ಕಾರಣಕ್ಕೆ ನಟಿಸಲು ಒಪ್ಪಿದೆ. ಎಲ್ಲರ ಮನೆ ಮಗಳಂತೆ ಪ್ರೇಕ್ಷಕರಿಗೆ ಇಷ್ಟವಾಗುವ ಕ್ಯಾರೆಕ್ಟರ್ ಅದು. ನನಗೆ ಪ್ರತಿ ಸಿನಿಮಾದಲ್ಲಿಯೂ ಹೊಸತನದ ಪಾತ್ರ ನಿರ್ವಹಿಸಲು ಇಷ್ಟ. ಈ ರೀತಿಯ ಅವಕಾಶ ಬಂದಾಗ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುತ್ತೇನೆ' ಎಂದಿದ್ದಾರೆ ನಟಿ ಮಿಲನಾ ನಾಗರಾಜ್
"ಈಗಾಗಲೇ ಚಿತ್ರೀಕರಣ ಆರಂಭಿಸಿದ್ದೇವೆ. ಸದ್ಯದಲ್ಲೇ ಫಸ್ಟ್ ಲುಕ್ ರಿಲೀಸ್ ಮಾಡುತ್ತೇವೆ. ಅನಿಶ್ ಮತ್ತು ಮಿಲನಾ ಜೋಡಿ ಜನರಿಗೆ ಖಂಡಿತಾ ಇಷ್ಟವಾಗಲಿದೆ" ಎಂದಿದ್ದಾರೆ ನಿರ್ದೇಶಕ ಅಭಿಷೇಕ್ ಶೆಟ್ಟಿ
Milana Nagaraj Anish Tejeshwar Starrer Aaram Aravind Swamy Movie.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm