ಬ್ರೇಕಿಂಗ್ ನ್ಯೂಸ್
19-10-22 12:40 pm Source: Vijayakarnataka ಸಿನಿಮಾ
ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ಪ್ರೇಮ್ ಸದ್ಯಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಇದರ ಟೈಟಲ್ ಲಾಂಚ್ ಇದೇ 20ರಂದು ನಡೆಯಲಿದೆ. ಇದಕ್ಕಾಗಿ ಪ್ರೇಮ್ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಈ ಸಂಬಂಧ ಚೆನ್ನೈ, ಹೈದರಾಬಾದ್, ಕೊಚ್ಚಿ, ಮುಂಬಯಿಗೆ ಓಡಾಡುತ್ತಿದ್ದಾರೆ. ಟೈಟಲ್ ಟೀಸರ್ಗಾಗಿ ಸ್ಟುಡಿಯೋದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸಗಳ ನಡುವೆ ಅವರು ಎರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಸಿನಿಮಾಗಳಲ್ಲಿ ಒಂದನ್ನು ಎಂ. ಶಶಿಧರ್ ಎಂಬ ಹೊಸ ಹುಡುಗ ನಿರ್ದೇಶನ ಮಾಡುತ್ತಿದ್ದು, ಅವರು ಈಗಾಗಲೇ ಅರುಣ್ ರಾಮ್ಪ್ರಸಾದ್ ನಾಯಕರಾಗಿರುವ 'ಘಾರ್ಗಾ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರೇಮ್ ಸಿನಿಮಾ ಇವರಿಗೆ ಎರಡನೇ ಸಿನಿಮಾವಾಗಿದೆ. 'ನಾನು ಪ್ರೇಮ್ರಿಗೆ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಮಾಡಿಕೊಂಡಿದ್ದೆ. ನಮ್ಮ ‘ಘಾರ್ಗಾ’ ಸಿನಿಮಾದ ಟೀಸರ್ ಅನ್ನು ಅವರಿಗೆ ತೋರಿಸಿದಾಗ ಖುಷಿಯಾಗಿದ್ದರು. ನಂತರ ನನಗೆ ಕಥೆ ಹೇಳಲು ಹೇಳಿದ್ದರು. ಈಗ ಮಾಡಲು ಹೊರಟಿರುವ ಕಥೆಯನ್ನು ಅವರಿಗೆ ಹೇಳಿದಾಗ ಬಹಳ ಖುಷಿಯಿಂದ ಸಿನಿಮಾ ಮಾಡಲು ಹೇಳಿದರು. ಈ ಸಿನಿಮಾ ಝೋಂಬಿ ಫಾರ್ಮ್ಯಾಟ್ನಲ್ಲಿರುತ್ತದೆ' ಎನ್ನುತ್ತಾರೆ ಶಶಿಧರ್.
'ಝೋಂಬಿ ಎಂದರೆ ಸತ್ತ ಮನುಷ್ಯರು ಎದ್ದು ಓಡಾಡುವುದು. ಆದರೆ ಅವರಿಗೆ ಮಾತನಾಡುವ ಮತ್ತು ಸರಿಯಾಗಿ ನಡೆಯುವ ಶಕ್ತಿ ಇರುವುದಿಲ್ಲ. ಇಂತಹ ಜಾನರ್ನಲ್ಲಿ ಬರುತ್ತಿರುವ ಕನ್ನಡದ ಮೊಟ್ಟ ಮೊದಲ ಸಿನಿಮಾವಿದು. ತುಂಬಾ ದೊಡ್ಡ ಮಟ್ಟದ ಬಜೆಟ್ನಲ್ಲಿ ಈ ಸಿನಿಮಾ ಪ್ಲ್ಯಾನ್ ಆಗುತ್ತಿದೆ. ಅಕ್ಟೋಬರ್ 22ರಂದು ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡುತ್ತೇವೆ' ಎಂದಿದ್ದಾರೆ ನಿರ್ದೇಶಕ ಎಂ. ಶಶಿಧರ್.
ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರೇಮ್, ‘ನಾನು ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡಿಕೊಂಡು ಹೋಗುತ್ತಿದ್ದೇನೆ. ಶಶಿಧರ್ ಮಾಡಿರುವ ಕಥೆ ಬಹಳ ಚೆನ್ನಾಗಿದ್ದ ಕಾರಣ ಒಪ್ಪಿದೆ. ಇದರ ಜತೆಗೆ ಇನ್ನೊಂದು ಸಿನಿಮಾ ಮಾಡುತ್ತಿದ್ದು, ಅದನ್ನು ಕೂಡ ನಮ್ಮ ಮತ್ತೊಬ್ಬ ಹುಡುಗನೇ ನಿರ್ದೇಶನ ಮಾಡುತ್ತಿದ್ದಾನೆ. ನಾನು ನಿರ್ದೇಶನ ಮಾಡಲು ಆರಂಭಿಸಿದರೆ ಸಮಯವೇ ಸಿಗುವುದಿಲ್ಲ. ಹಾಗಾಗಿ ಮಧ್ಯದಲ್ಲಿ ಶೆಡ್ಯೂಲ್ ಬ್ರೇಕ್ ಮಾಡಿದಾಗ ನನ್ನ ನಟನೆಯ ಸಿನಿಮಾಗಳನ್ನು ಪೂರ್ಣಗೊಳಿಸಲು ಹೇಳಿದ್ದೇನೆ. ಇದರ ಜತೆಗೆ ಶಶಿಧರ್ ಸಿನಿಮಾಗೆ ‘ಜೋಗಿ’ ಸಿನಿಮಾದ ನಿರ್ಮಾಪಕರು ಬಂಡವಾಳ ಹೂಡುತ್ತಿರುವುದು ಖುಷಿಯ ವಿಚಾರ. ಹೊಸ ರೀತಿಯ ಕಂಟೆಂಟ್ ಈ ಸಿನಿಮಾದಲ್ಲಿರುತ್ತದೆ’ ಎಂದಿದ್ದಾರೆ. ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್ ಲೋಕನಾಥ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದು, ಸಂದೀಪ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್ನಲ್ಲಿಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
ಶಶಿಧರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನನ್ನದು ರಿಯಲಿಸ್ಟಿಕ್ ಕ್ಯಾರೆಕ್ಟರ್. ಇದೇ ಕಾರಣಕ್ಕೆ ನಾನು ಅದರಲ್ಲಿ ನಟಿಸಲು ಒಪ್ಪಿದೆ. ಜನರಿಗೆ ಒಳ್ಳೆಯ ಕಂಟೆಂಟ್ ಕೊಟ್ಟರೆ ಖಂಡಿತಾ ನೋಡುತ್ತಾರೆ. ಈ ನಿಟ್ಟಿನಲ್ಲಿ ಹೊಸ ಹೊಸ ನಿರ್ದೇಶಕರು ಚಿತ್ರರಂಗಕ್ಕೆ ಬರಬೇಕು. ಹಾಗಾಗಿ ನಾನು ಹೊಸ ನಿರ್ದೇಶಕರ ಸಿನಿಮಾದಲ್ಲಿನಟಿಸುತ್ತಿದ್ದೇನೆ.
Jogi Prem Back To Acting With Zombie Style Movie.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm