ಬ್ರೇಕಿಂಗ್ ನ್ಯೂಸ್
05-10-22 01:02 pm Source: Vijayakarnataka ಸಿನಿಮಾ
ಕೆಲ ದಿನಗಳ ಹಿಂದೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ( Ramya ), ರಾಜ್ ಬಿ ಶೆಟ್ಟಿ ಅವರು ( Raj B Shetty ) ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗಲೇ ಅವರಿಬ್ಬರು ಒಂದಾಗಿ ಸಿನಿಮಾ ಮಾಡುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ತಿಳಿದುಕೊಳ್ಳಲು 'ವಿಜಯ ಕರ್ನಾಟಕ ವೆಬ್' ರಾಜ್ ಬಿ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ "ಇದು ಗಾಸಿಪ್ ಅಷ್ಟೇ. ನಿಜ ಅಲ್ಲ" ಎಂದು ಹೇಳಿದ್ದರು. ಆದರೆ ವಿಜಯ ದಶಮಿ ದಿನ ರಮ್ಯಾ ಅವರು ಅಧಿಕೃತವಾಗಿ ಹೌದು ಎಂದು ಹೇಳಿದ್ದಾರೆ.
Apple Box Studios ಎಂದು ರಮ್ಯಾ ಅವರು ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಒಳ್ಳೆಯ ಸಿನಿಮಾ ನೀಡುವುದಾಗಿ ಅವರು ನಾಡಿನ ಜನತೆಗೆ ಆಶ್ವಾಸನೆ ನೀಡಿದ್ದರು. ಈಗ ವಿಜಯದಶಮಿ ಪ್ರಯುಕ್ತ ರಮ್ಯಾ ಅವರು ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಸ್ವಾತಿ ಮುತ್ತಿನ ಮಳೆಹನಿಯೇ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದ್ದು, ಇದರಲ್ಲಿ ರಮ್ಯಾ, ರಾಜ್ ಬಿ ಶೆಟ್ಟಿ ಅವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ಚಿತ್ರ ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸದ ಹಂತದಲ್ಲಿದೆ. ರಾಜ್ ಬಿ ಶೆಟ್ಟಿ ಅವರ 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿರುವ ತಂಡವೇ ಈ ಚಿತ್ರದಲ್ಲಿ ತಾಂತ್ರಿಕ ಕೆಲಸ ಮಾಡಲಿದೆಯಂತೆ. ಮಿಥುನ್ ಮುಕುಂದನ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ, ಪ್ರವೀಣ್ ಶ್ರೀಯನ್ ಅವರು ಕ್ಯಾಮರಾ ಕೆಲಸ ಮಾಡಲಿದ್ದಾರೆ.
ರಾಜ್ ಬಿ ಶೆಟ್ಟಿ ಅವರು 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾ ಕಥೆಯನ್ನು ಹೇಳಿದಾಗ ರಮ್ಯಾ ಅವರು ಸಖತ್ ಖುಷಿಯಿಂದ ಇದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ತಂಡ ಇನ್ನಷ್ಟು ಮಾಹಿತಿ ನೀಡಲಿದೆಯಂತೆ. ಲೈಟರ್ ಬುದ್ಧ ಫಿಲ್ಮ್ಸ್ ಜೊತೆಯಲ್ಲಿ ರಮ್ಯಾ ಅವರು ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ.
2016ರ ಬಳಿಕ ಸಿನಿಮಾದಿಂದ ದೂರವಾಗಿ ರಾಜಕೀಯದ ಕಡೆ ಗಮನಕೊಟ್ಟ ರಮ್ಯಾ ಅವರು ಆನಂತರ ರಾಜಕೀಯದಿಂದಲೂ ಹಿಂದೆ ಸರಿದರು. ವರ್ಷಗಳ ಕಾಲ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಗೊತ್ತೂ ಆಗಲಿಲ್ಲ. ಸೋಶಿಯಲ್ ಮೀಡಿಯಾಕ್ಕೆ ಮತ್ತೆ ಮರಳಿದ ರಮ್ಯಾ ಅವರಿಗೆ ಸಿನಿಮಾದಲ್ಲಿ ಯಾವಾಗ ನಟಿಸುತ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು, ಆಗೆಲ್ಲ ನೋಡೋಣ ಎನ್ನುತ್ತಿದ್ದ ರಮ್ಯಾ ಅವರು ಚಿತ್ರರಂಗದ ಕಡೆ ಮತ್ತೆ ಮುಖ ಮಾಡುವುದರ ಜೊತೆಗೆ ಹೊಸ ಕಲಾವಿದರು, ಸಿನಿಮಾಗಳಿಗೆ ಬೆಂಬಲ ನೀಡುತ್ತ ಬಂದರು.
ತಿಂಗಳುಗಳ ಹಿಂದೆ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದೇನೆ ಎಂದಿದ್ದರು. "ಈಗಾಗಲೇ ನಮ್ಮ ಪ್ರೊಡಕ್ಷನ್ ಸಂಸ್ಥೆ ಮೂಲಕ ಎರಡು ಚಿತ್ರಗಳು ನಿರ್ಮಾಣವಾಗಲು ತಯಾರಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ ಆರ್ ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲಿ ಓಟಿಟಿ ಪ್ಲಾಟ್ ಫಾರಂಗಳಿಗಾಗಿ ಸಿನಿಮಾ, ವೆಬ್ ಸಿರೀಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟುಡಿಯೋಸ್ ಸಿದ್ಧವಾಗುತ್ತಿದೆ" ಎಂದು ರಮ್ಯಾ ಅವರು ಅಧಿಕೃತ ಮಾಹಿತಿ ನೀಡಿದ್ದರು.
ರಿಷಬ್ ಶೆಟ್ಟಿ, ಸಪ್ತಮಿ ಗೌಡ ನಟನೆಯ 'ಕಾಂತಾರ' ಸಿನಿಮಾ ವೀಕ್ಷಿಸಿದ ರಮ್ಯಾ ಅವರು ವಿಜಯದಶಮಿ ದಿನ ಸರ್ಪ್ರೈಸ್ ನೀಡುವೆ ಎಂದಿದ್ದರು. ಅದೀಗ ನಿಜವಾಗಿದೆ.
Actress Ramya Raj B Shetty New Movie Title Is Swathi Mutthina Male Haniye.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm