ಬ್ರೇಕಿಂಗ್ ನ್ಯೂಸ್
04-06-23 10:36 pm HK News Desk ಕರ್ನಾಟಕ
ಬೆಂಗಳೂರು, ಜೂನ್ 4: ಒಡಿಶಾ ರೈಲು ದುರಂತಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಆಗಿರುವ ಲೋಪ ಕಾರಣ ಎಂದಿದ್ದರೆ, ರೈಲ್ವೇ ಮಂಡಳಿ ಒಟ್ಟು ಘಟನೆಯ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದರ ನಡುವಲ್ಲೇ ನೈರುತ್ಯ ರೈಲ್ವೇ ವಲಯದಲ್ಲಿ ಸಿಗ್ನಲಿಂಗ್ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಎದುರಾಗಿರುವ ಬಗ್ಗೆ ಉನ್ನತ ಅಧಿಕಾರಿಯೊಬ್ಬರು ಕಳೆದ ಫೆಬ್ರವರಿ ತಿಂಗಳಲ್ಲೇ ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು ಎನ್ನುವುದು ಈಗ ಸಂಚಲನ ಮೂಡಿಸಿದೆ.
ಸೌತ್ ವೆಸ್ಟರ್ನ್ ರೈಲ್ವೇ ವಲಯದ ಮುಖ್ಯ ಆಪರೇಟಿಂಗ್ ಮೆನೇಜರ್ ಆಗಿದ್ದ ಅಧಿಕಾರಿ ಫೆಬ್ರವರಿ 9ರಂದು ಪತ್ರ ಬರೆದಿದ್ದು, ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಗಂಭೀರ ತೊಂದರೆ ಎದುರಾಗಿರುವ ಬಗ್ಗೆ ಇಲಾಖೆಯ ಗಮನ ಸೆಳೆದಿದ್ದರು. ಮೈಸೂರು ವಲಯದ ಬೀರೂರು- ಚಿಕ್ಕಜಾಜೂರು ವಿಭಾಗದ ಹೊಸದುರ್ಗ ರೈಲು ಹಳಿಯಲ್ಲಿ 2023ರ ಫೆ.8ರಂದು ಸಂಜೆ 5.45ರ ಸುಮಾರಿಗೆ ಸಿಗ್ನಲ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಉಂಟಾಗಿದ್ದರಿಂದ ಭಾರೀ ಅವಘಡ ಸ್ವಲ್ಪದರಲ್ಲಿ ತಪ್ಪಿ ಹೋಗಿತ್ತು. ಬಿಪಿಎಸಿ ಸಿಗ್ನಲ್ ಕೌಂಟರ್ ಅನಿರೀಕ್ಷಿತವಾಗಿ ಬಂದ್ ಆಗಿದ್ದರಿಂದ ಸಮಸ್ಯೆ ಆಗಿತ್ತು. ಆ ಸಂದರ್ಭದಲ್ಲಿ ಅದೇ ಹಳಿಯಲ್ಲಿ ಬರುತ್ತಿದ್ದ ರೈಲು ಸಂಖ್ಯೆ – 12649 ಹೆಸರಿನ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಸಿಗ್ನಲ್ ತೊಂದರೆ ಆಗಿದ್ದನ್ನು ಮನಗಂಡು ರೈಲನ್ನು ನಿಲ್ಲಿಸಿದ್ದರು. ಇದರಿಂದ ದೊಡ್ಡ ಅವಘಡ ತಪ್ಪಿ ಹೋಗಿತ್ತು. ಆನಂತರ, ಪರಿಶೀಲನೆ ನಡೆಸಿದಾಗ ಆ ರೈಲಿಗೆ ಇನ್ನೊಂದು ಲೈನಲ್ಲಿ ಹೋಗಲು ತಪ್ಪಾಗಿ ಪಿಎಲ್ ಸಿಟಿ ಕ್ಲಿಯರೆನ್ಸ್ ನೀಡಿತ್ತೆಂಬುದು ಕಂಡುಬಂದಿತ್ತು.
ರೈಲು ಒಮ್ಮೆ ಹೊರಟ ಬಳಿಕ ಈ ರೀತಿ ಸಿಗ್ನಲ್ ವ್ಯವಸ್ಥೆಯನ್ನು ಬದಲಿಸುವುದು, ಹೋಗುವ ಹಳಿಯನ್ನು ಬದಲು ಮಾಡುವುದು ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ. ಇದರಿಂದ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುತ್ತದೆ. ಈ ರೀತಿಯಾದಲ್ಲಿ ಮುಂದಕ್ಕೆ ದೊಡ್ಡ ಅವಘಡ ಉಂಟಾಗಬಹುದು. ಇದು ವ್ಯವಸ್ಥೆಯೊಳಗಿನ ಗಂಭೀರ ವೈಫಲ್ಯ ಎಂದು ಚೀಫ್ ಆಪರೇಟಿಂಗ್ ಆಫೀಸರ್ ಪತ್ರ ಬರೆದು ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು. ಹೀಗಾಗಿ ಈ ರೀತಿ ವ್ಯತ್ಯಾಸ ಆಗಲು ಯಾರು ಕಾರಣ ಎಂಬುದನ್ನು ಪತ್ತೆ ಮಾಡಬೇಕು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ನೈರುತ್ಯ ರೈಲ್ವೇ ವಲಯದಲ್ಲಿ ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ಪತ್ರ ಬರೆದಿದ್ದರು.
ಒಡಿಶಾದ ಬಾಲಾಸೋರ್ ನಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಲೋಪ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉನ್ನತ ಅಧಿಕಾರಿಯ ಪತ್ರದ ಅಂಶಗಳನ್ನು ನೋಡಿದರೆ, ಈ ರೀತಿ ಆಗುವುದಕ್ಕೆ ನಿರ್ದಿಷ್ಟ ಶಕ್ತಿಗಳೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇದರ ನಡುವಲ್ಲೇ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಮೂರು ತಿಂಗಳ ಹಿಂದೆ ವ್ಯವಸ್ಥೆಯ ವೈಫಲ್ಯದ ಬಗ್ಗೆ ರೈಲ್ವೇ ಇಲಾಖೆಗೆ ಪತ್ರ ಬರೆದಿರುವುದು ಲೀಕ್ ಆಗಿದ್ದು, ಇಂಡಿಯಾ ಟುಡೇಯಲ್ಲಿ ಬಂದಿದೆ. ಹೀಗಾಗಿ ಓಡಿಶಾ ರೈಲು ದುರಂತಕ್ಕೆ ರೈಲ್ವೇ ಇಲಾಖೆಯೊಳಗಿನ ವೈಫಲ್ಯ ಕಾರಣವೇ ಎಂಬ ಅನುಮಾನ ಕೇಳಿಬಂದಿದೆ.
ಒಡಿಶಾ ರೈಲು ದುರಂತದಲ್ಲಿ ಭಾನುವಾರ ಸಂಜೆಯ ವರೆಗೆ 294 ಮಂದಿ ಸಾವು ಕಂಡಿದ್ದಾರೆ. ಹೆಚ್ಚಿನ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ಮುಖ, ಶರೀರ ಭೀಭತ್ಸ ಆಗಿರುವುದರಿಂದ ಮತ್ತು ರೈಲಿನಲ್ಲಿ ದೇಶದ ಹಲವೆಡೆಯ ಜನರು ಇದ್ದುದರಿಂದ ಗುರುತು ಪತ್ತೆ ಸವಾಲಾಗಿದೆ. ಶವಗಳ ಫೋಟೋಗಳನ್ನು ರೈಲ್ವೇ ಇಲಾಖೆಯ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು ಆಮೂಲಕ ಸಾರ್ವಜನಿಕರು ಗುರುತು ಪತ್ತೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
While Union Railway Minister Ashwini Vaishnaw has attributed 'change in electronic interlocking' as the reason behind the Odisha train tragedy that has claimed nearly 300 lives, the chief operating manager of the South Western Railway Zone had warned about 'serious flaws in the system' three months ago. He had raised concerns about failure of the interlocking system in February and highlighted the need for safety measures to be taken.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm