ಬ್ರೇಕಿಂಗ್ ನ್ಯೂಸ್
07-03-26 11:58 am HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 7: ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಮಧ್ಯಪ್ರಾಚ್ಯದಲ್ಲಿ ಕಾಡ್ಗಿಚ್ಚಿನಂತೆ ವ್ಯಾಪಿಸಿರುವ ಸಂದರ್ಭದಲ್ಲೇ, ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಅಮೆರಿಕ ಸಜ್ಜಾಗಿರುವ ಸುಳಿವು ಸಿಕ್ಕಿದೆ. ಅಮೆರಿಕದ ಅತ್ಯಾಧುನಿಕ ಸ್ಟೆಲ್ತ್ ಬಾಂಬರ್ಗಳಾದ ಬಿ-1, ಬಿ-2 ಮತ್ತು ಬಿ-52 ವಿಮಾನಗಳನ್ನು ಬ್ರಿಟಿಷ್ ಸೇನಾ ನೆಲೆಗಳಾದ ಡಿಯೆಗೋ ಗಾರ್ಸಿಯಾ ಹಾಗೂ ಆರ್ಎಎಫ್ ಫೇರ್ಫೋರ್ಡ್ ಕಡೆಗೆ ನಿಯೋಜಿಸಲಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಬೆಳವಣಿಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಕಠಿಣ ಎಚ್ಚರಿಕೆಯ ಬಳಿಕ ನಡೆದಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. “ನಾವು ಇನ್ನೂ ಬಲವಾಗಿ ಹೊಡೆಯಲು ಆರಂಭಿಸಿಲ್ಲ. ದೊಡ್ಡ ದಾಳಿ ಸನ್ನಿಹಿತವಾಗಿದೆ” ಎಂದು ಟ್ರಂಪ್ ಹೇಳಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ದಾಳಿ, ಇರಾನ್ನ ಉನ್ನತ ನಾಯಕತ್ವವನ್ನು ಗುರಿಯಾಗಿಸಿಕೊಂಡು ನಡೆದಿದ್ದ ‘ಆಪರೇಶನ್ ಎಪಿಕ್ ಫ್ಯೂರಿ’ ಬಳಿಕ ಅಮೆರಿಕ ಕೈಗೊಳ್ಳಲಿರುವ ಮತ್ತೊಂದು ದೊಡ್ಡ ಸೈನಿಕ ಕ್ರಮವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕ ರಕ್ಷಣಾ ಇಲಾಖೆಯ ಎಚ್ಚರಿಕೆ:
ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬ್ರಿಟಿಷ್ ಸೇನಾ ನೆಲೆಗಳನ್ನು ಬಳಸಿಕೊಂಡು ಇರಾನ್ ಮೇಲಿನ ದಾಳಿಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. “ಇನ್ನಷ್ಟು ಫೈಟರ್ ಸ್ಕ್ವಾಡ್ರನ್ಗಳು, ಹೆಚ್ಚಿನ ರಕ್ಷಣಾತ್ಮಕ ಸಾಮರ್ಥ್ಯಗಳು ಮತ್ತು ಹೆಚ್ಚುವರಿ ಬಾಂಬರ್ ದಾಳಿಗಳೊಂದಿಗೆ ನಾವು ಬರುತ್ತಿದ್ದೇವೆ” ಎಂದು ಅವರು ಎಚ್ಚರಿಸಿದ್ದಾರೆ.
ರಷ್ಯಾದಿಂದ ಇರಾನ್ಗೆ ಗುಪ್ತಚರ ನೆರವು?
ಇದಕ್ಕೂ ಮಧ್ಯೆ, ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ವಿರುದ್ಧದ ದಾಳಿಗಳಿಗೆ ಇರಾನ್ಗೆ ರಷ್ಯಾ ಗುಪ್ತಚರ ಮಾಹಿತಿ ನೀಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ವರದಿಗಳು ಬಿತ್ತರವಾಗಿದ್ದು, ಮಧ್ಯಪ್ರಾಚ್ಯದಲ್ಲಿ ಇರುವ ಅಮೆರಿಕದ ಯುದ್ಧನೌಕೆಗಳು ಮತ್ತು ಯುದ್ಧವಿಮಾನಗಳ ಚಲನವಲನದ ಮಾಹಿತಿ ಸೇರಿದಂತೆ ಪ್ರಮುಖ ಸೈನಿಕ ಮಾಹಿತಿಯನ್ನು ರಷ್ಯಾ ಇರಾನ್ಗೆ ಒದಗಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಅದರ ಜೊತೆಗೆ, ಅಮೆರಿಕದ ಮತ್ತೊಂದು ಪ್ರಮುಖ ಎದುರಾಳಿ ರಾಷ್ಟ್ರವೂ ಪರೋಕ್ಷವಾಗಿ ಈ ಸಂಘರ್ಷದಲ್ಲಿ ಪಾತ್ರವಹಿಸುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಒಟ್ಟಾರೆ, ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸೂಚನೆಗಳು ದೊರಕುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧ ಪರಿಸ್ಥಿತಿ ನಿರ್ಮಾಣವಾಗುವ ಭೀತಿ ಹೆಚ್ಚಾಗಿದೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm