ಬ್ರೇಕಿಂಗ್ ನ್ಯೂಸ್
25-04-23 05:44 pm HK News Desk ಕರ್ನಾಟಕ
ಚಾಮರಾಜನಗರ, ಎ.25: ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ. ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಹೆಳವರಹುಂಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರೆ ಅವರು, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಇದ್ದ ಶೇ.40 ಕಮಿಷನ್ ಸರ್ಕಾರ ನಿಮ್ಮನ್ನು ಲೂಟಿ ಮಾಡಿರುವುದು ಅತ್ಯಂತ ದುಃಖಕರ ಸಂಗತಿ. ಬಿಜೆಪಿಯವರು ಯಾವುದೇ ನಾಚಿಕೆ ಇಲ್ಲದೆ ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿವಿಧ ಹಗರಣಗಳ ಆರೋಪಗಳು, ಗುತ್ತಿಗೆದಾರರ ಆತ್ಮಹತ್ಯೆ ಮತ್ತು ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ ಮತ್ತಿತರ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿಯಲ್ಲಿ ಅನೇಕ ಮಂದಿ ಶಾಮೀಲಾಗಿರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಬಿಜೆಪಿ ಸರ್ಕಾರ ದುರಾಡಳಿತ, ಸ್ವಜನ ಪಕ್ಷಪಾತದ ಸರ್ಕಾರವಾಗಿದೆ. ಶಾಸಕರೊಬ್ಬರ ಪುತ್ರನಿಂದ 8 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಇದರ ತನಿಖೆಗೆ ಸಹಕರಿಸದ ಶಾಸಕರು ಪರೇಡ್ ನಡೆಸಿದರು. ರಾಜ್ಯದಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಈ ಹಣವನ್ನು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು, ಅದರಿಂದ ಜನರಿಗೆ ಅನುಕೂಲವಾಗುತ್ತಿತ್ತು ಎಂದರು.
ಅಮುಲ್ ವರ್ಸಸ್ ನಂದಿನಿ ವಿವಾದ ಕುರಿತು ಪ್ರತಿಕ್ರಿಯಿಸಿದ ವಾದ್ರಾ, ಕರ್ನಾಟಕದ 'ನಂದಿನಿ' ಬ್ರಾಂಡ್ ನ್ನು ಕಾಂಗ್ರೆಸ್ ಬಲಪಡಿಸುತ್ತದೆ ಮತ್ತು ಹೊರಗಿನಿಂದ ಯಾವುದೇ ಸಹಕಾರಿ ಬರುವುದಿಲ್ಲ ಎಂದು ತಿಳಿಸಿದರು. ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರು ನಿಮ್ಮ ವಿಶ್ವಾಸ ಉಳಿಸಿಕೊಂಡಿದ್ದಾರೆ
ನೆರೆದಿದ್ದ ಮಹಿಳೆಯರನ್ನ ನನ್ನ ಮೇಲೆ ನಿಮಗೆ ಯಾಕೆ ವಿಶ್ವಾಸವಿದೆ? ಎಂದು ಪ್ರಿಯಾಂಕ ಗಾಂಧಿ ಪ್ರಶ್ನೆ ಮಾಡಿದರು, ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಇಂಧಿರಾಗಾಂಧಿ ಎಂದು ಕೂಗಿದರು. ಮಾತು ಮುಂದುವರೆಸಿ, ನೀವು ಏಕೆ ಇಂದಿರಾ ಗಾಂಧಿ ಮೇಲೆ ವಿಶ್ವಾಸ ಇಟ್ಟಿದ್ದೀರಾ ಅಂದ್ರೆ, ಅವರು ನಿಮ್ಮ ಬದುಕನ್ನು ಕಟ್ಟಿಕೊಟ್ಟವರು, ನಿಮ್ಮ ವಿಶ್ವಾಸಕ್ಕೆ ಧಕ್ಕೆ ತರಲಿಲ್ಲ. ಇಂದಿರಾ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ನಿಮ್ಮ ಕೆಲಸ ಮಾಡಿಕೊಟ್ಟಿದ್ದಾರೆ. ಎಲ್ಲರೂ ನಿಮ್ಮ ವಿಶ್ವಾಸ ಉಳಿಸಿಕೊಂಡಿದ್ದಾರೆ, ಮುಂದೆಯೂ ಉಳಿಸಿಕೊಳ್ಳುತ್ತಾರೆ ಎಂದರು.
ನೀವು ನಿಮ್ಮ ಮಕ್ಕಳ ಬದುಕು, ಭವಿಷ್ಯ, ಆರೋಗ್ಯ ಎಲ್ಲದರ ಮೇಲೂ ಗಮನವಿಟ್ಟು ಮತ ಹಾಕಬೇಕು. ನಿಮ್ಮ ಕಷ್ಟಕ್ಕೆ ಗೌರವ ಸಿಗಬೇಕು. ಅವರು ಸ್ವಾರ್ಥಕ್ಕೋಸ್ಕರ ನಮ್ಮಲ್ಲಿ ಜಗಳ ಹತ್ತಿಸಿ ಹೊಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಚುನಾವಣೆಯಲ್ಲಿ ದೊಡ್ಡ ದೊಡ್ಡ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಯಾವುದನ್ನು ಈಡೇರಿಸಲ್ಲ. ಹಿಂದೆ ಬಿಜೆಪಿ ಕೊಟ್ಟಿದ್ದ 25 ಭರವಸೆಗಳಲ್ಲಿ 24 ಅನ್ನು ಈಡೇರಿಸಿಲ್ಲ. ಲಕ್ಷಾಂತರ ಕೆಲಸಗಳು ಖಾಲಿ ಇವೆ. ಆದರೆ ನಿಮಗೆ ಕೊಡಲು ಈ ಸರ್ಕಾರ ತಯಾರಿಲ್ಲ. ಹಾಗಾಗಿ ಜನರು ಮಾತಿಗೆ ಮರುಳಾಗಿ ಮತ ಹಾಕಬೇಡಿ ಆತ್ಮಸಾಕ್ಷಿಗೆ ಮೇಲೆ ಮತ ಹಾಕಿ ಎಂದು ಮನವಿ ಮಾಡಿದರು.
ಆದರೆ ಕಾಂಗ್ರೆಸ್ ಕೊಟ್ಟ ಮಾತಿಗೆ ತಪ್ಪಲ್ಲ ರಾಜಾಸ್ಥಾನ, ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಬಂತು. ಅಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ನಾವು ಏನೇನು ಭರವಸೆ ನೀಡಿದ್ದೆವೋ ಅದನ್ನು ಈಡೇರಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಫ್ರೀ ವಿದ್ಯುತ್, ಪ್ರತಿ ತಿಂಗಳು 2000 ಕೊಡ್ತೀವಿ. ನಂದಿನಿ ಸಂಸ್ಥೆಯನ್ನು ಮತ್ತಷ್ಟು ಗಟ್ಟಿಯಾಗಿ ಮಾಡುತ್ತೇವೆ ಎಂದು ಹೇಳಿದರು.
The time has come to bid farewell to 40% BJP Sarkara.. @priyankagandhi pic.twitter.com/VUt5qeZWZM
— Srinivas BV (@srinivasiyc) April 25, 2023
Accusing the BJP government in Karnataka of rampant corruption, Congress General Secretary Priyanka Gandhi Vadra alleged on Tuesday Rs 1.5 lakh crore has been "looted" from the state. She also expressed confidence about Congress coming to power after May 10 Assembly polls in Karnataka and taking the state on the path of development.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 12:56 pm
Mangalore Correspondent
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm