ಬ್ರೇಕಿಂಗ್ ನ್ಯೂಸ್
30-09-22 07:34 pm Source: Vijayakarnataka ಡಿಜಿಟಲ್ ಟೆಕ್
ಜಾಗತಿಕ ಪ್ರೀಮಿಯಂ ಸ್ಮಾರ್ಟ್ಪೋನ್ ಬ್ರ್ಯಾಂಡ್ OnePlus ಭಾರತದಲ್ಲಿ ತನ್ನ ಮೊದಲ ನಾರ್ಡ್-ಬ್ರಾಂಡ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಲು ಸಜ್ಜಾಗಿದ್ದು, ಕಂಪೆನಿಯು ತನ್ನ ಹೊಸ ಸ್ಮಾರ್ಟ್ವಾಚ್ ಪರಿಚಯಿಸುವ ಮೊದಲೇ ಹಲವು ವೈಶಿಷ್ಟ್ಯಗಳ ಕುರಿತು ಮಾಹಿತಿ ಬಹಿರಂಗವಾಗಿವೆ. OnePlus ಕಂಪೆನಿಯು ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ತನ್ನ ವಿನೂತನ OnePlus Nord Watch ಸಾಧನವನ್ನು ಬಿಡುಗಡೆ ಮಾಡುತ್ತಿದ್ದು, ಈ ಸಾಧನವು 1.78-ಇಂಚಿನ AMOLED ಡಿಸ್ಪ್ಲೇ, 105 ಫಿಟ್ನೆಸ್ ವಿಧಾನಗಳು, 10 ದಿನಗಳ ಬ್ಯಾಟರಿ ಬಾಳಿಕೆ ಮತ್ತು ಬ್ಲೂಟೂತ್ 5.2 ಬೆಂಬಲದಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಮತ್ತು ಬೆಲೆ ಕೂಡ ಕೈಗೆಟುಕುವಂತಿರಲಿದೆ ಎಂದು ಪ್ರಮುಖ ಟೆಕ್ ಮಾಧ್ಯಮಗಳು ವರದಿ ಮಾಡಿವೆ.
ನಾವು ಈಗಾಗಲೇ ತಿಳಿದಿರುವಂತೆ, OnePlus Nord Watch ಕುರಿತಾಗಿ ಈಗಾಗಲೇ OnePlus ವೆಬ್ಸೈಟ್ನಲ್ಲಿ ಡೆಡಿಕೆಟೆಡ್ ಪೇಜ್ ತೆರಯಲಾಗಿದೆ. ಇಲ್ಲಿ ಈ ಸ್ಮಾರ್ಟ್ವಾಚ್ ವಿನ್ಯಾಸ ಹಾಗೂ ಪರದೆಯ ಗಾತ್ರ ಸೇರಿದಂತೆ ಕೆಲವು ವೈಶಿಷ್ಟ್ಯಗಳು ಮತ್ತು ತಾಂತ್ರಿಕ ವಿವರಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, 91ಮೊಬೈಲ್ಸ್ ವರದಿ ಮಾಡಿರುವಂತೆ, ನೂತನ OnePlus Nord Watch ಸಾಧನವು 1.78-ಇಂಚಿನ AMOLED ಡಿಸ್ಪ್ಲೇ ಹೊಂದಿರಲಿದೆ. ಈ ಡಿಸ್ಪ್ಲೇಯು 60Hz ರಿಫ್ರೆಶ್ ರೇಟ್ ಹಾಗೂ 500nits ಬ್ರೈಟ್ನೆಸ್ ಹಾಗೂ 368×448 ರೆಸಲ್ಯೂಶನ್ ಸಾಮರ್ಥವನ್ನು ಹೊಂದಿರಲಿದೆ ಎಂದು ತಿಳಿಸಿದೆ. ಇಷ್ಟೇ ಅಲ್ಲದೇ, ಈ ಹೊಸ ಸ್ಮಾರ್ಟ್ವಾಚ್ 100 ಕ್ಕೂ ಹೆಚ್ಚು ಕಸ್ಟಮೈಸ್ ವಾಚ್ಫೇಸ್ಗಳನ್ನು ಹೊಂದಿರಲಿದೆ ಎಂದು ತಿಳಿಸಿದೆ.
ಇದಿಗ ಸೋರಿಕೆಯಾಗಿರುವ ವಿವರಗಳಂತೆ, OnePlus Nord Watch ಸಾಧನವು ಎನ್ ಹೆಲ್ತ್ ಅಪ್ಲಿಕೇಶನ್ಗೆ ಬೆಂಬಲವನ್ನು ಹೊಂದಿರಲಿದೆಯಂತೆ. ಫಿಟ್ನೆಸ್ ವಿಧಾನಗಳು, ಹೆಲ್ತ್ ಟ್ರ್ಯಾಕಿಂಗ್ ಆಯ್ಕೆಗಳು, SPO2, ಹೃದಯ ಬಡಿತ ಮತ್ತು ಒತ್ತಡದ ಮಾನಿಟರಿಂಗ್ ನಿದ್ರೆಯ ಟ್ರ್ಯಾಕಿಂಗ್, ಹೃದಯ ಬಡಿತ ಮತ್ತು ಒತ್ತಡದ ಮೇಲ್ವಿಚಾರಣೆ ಸೇರಿದಂತೆ ಸಾಮಾನ್ಯ ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನು ಈ ವಾಚ್ ಒಳಗೊಂಡಿರುತ್ತದೆ. ಈ ವಾಚ್ಗಾಗಿ ತೆರೆದಿರುವ ಪುಟದಲ್ಲಿರುವ ಮಾಹಿತಿಯ ಪ್ರಕಾರ, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಕೂಡ ಹೊಸ ಸೇರ್ಪಡೆಯಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ 10 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿರುತ್ತದೆ ಮತ್ತು 30 ದಿನಗಳ ಸ್ಟ್ಯಾಂಡ್ಬೈ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.
ಬ್ಲೂಟೂತ್ 5.2 ನಲ್ಲಿ ಸಂಪರ್ಕವನ್ನು ಹೊಂದಲಿರುವ ಈ ಸ್ಮಾರ್ಟ್ವಾಚ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ವಾಚ್ ಬೆಲೆ ಎಷ್ಟು ಎಂಬ ಬಗ್ಗೆ ಈ ವರೆಗೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, OnePlus Nord Watch ಸಾಧನವನ್ನು 10,000 ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಅಮೆಜಾನ್ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ಜನಪ್ರಿಯ ಟಿಪ್ಸ್ಟಾರ್ ಮುಕುಲ್ ಶರ್ಮಾ ಅವರು ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದರು.
Oneplus Nord Watch Specifications Revealed Before India Launch.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm