ಬ್ರೇಕಿಂಗ್ ನ್ಯೂಸ್
09-09-21 11:49 am Headline Karnataka News Network ಕ್ರೈಂ
ರಾಮನಗರ, ಸೆ. 9: ತಾನೊಬ್ಬ ಐಎಎಸ್ ಅಧಿಕಾರಿ ಎಂದು ನಂಬಿಸಿ ಜನರಿಗೆ ಮೋಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಲುಹುಣಸೆಯ ಅಪಾರ್ಟ್ಮೆಂರ್ಟ್ನಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ತಾನು ಐಎಎಸ್ ಅಧಿಕಾರಿಯಾಗಿದ್ದು ಕೇಂದ್ರ ಸರ್ಕಾರದ ಗೃಹ ಸಚಿವಾಲಯದಲ್ಲಿ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ. ಇದೀಗ ನಕಲಿ ಅಧಿಕಾರಿಯ ಬಂಡವಾಳ ಬಯಲಾಗಿದೆ.
ಮಹಾರಾಷ್ಟ್ರ ಮೂಲದ ಶಿಶಿರ್(24) ಬಂಧಿತ. ಆರೋಪಿ ಶಶಿರ್ ಇನ್ನೋವಾ ಕ್ರಿಸ್ಟ ಕಾರಿನಲ್ಲಿ ತಿರುಗಾಡುತ್ತಾ ಐಎಎಸ್ ಅಧಿಕಾರಿ ಎಂದು ನಂಬಿಸಿ ಸಿವಿಲ್ ವ್ಯಾಜ್ಯಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡುತ್ತಿದ್ದ. ನಕಲಿ ಅಧಿಕಾರಿಯ ಬಂಡವಾಳ ಬಯಲು ಮಾಡಿರುವ ಕಗ್ಗಲೀಪುರ ಪೋಲಿಸರು, ಆರೋಪಿ ಶಿಶಿರ್ ಬಳಸುತ್ತಿದ್ದ ಮೊಬೈಲ್, ಐಡಿ ಕಾರ್ಡ್ ಹಾಗೂ ಇನ್ನೋವಾ ಕಾರನ್ನು ವಶಪಡಿಸಿಕೊಂಡು ಜೈಲಿಗಟ್ಟಿದ್ದಾರೆ.
ಜಮೀನು ವಿವಾದಗಳೇ ಆರೋಪಿಯ ಟಾರ್ಗೆಟ್
ಕಗ್ಗಲೀಪುರ ರಾಮನಗರ ಜಿಲ್ಲೆಯ ಪೋಲಿಸ್ ವ್ಯಾಪ್ತಿಗೆ ಬಂದರೂ, ಬೆಂಗಳೂರು ಮಹಾನಗರದ ಭಾಗವೇ ಆಗಿದ್ದು ಇಲ್ಲಿನ ಭೂಮಿಗೆ ಬಂಗಾರದ ಬೆಲೆ. ತುಂಡು ಭೂಮಿಗೂ ವಿವಾದ ಅಂಟಿಕೊಂಡಿರುತ್ತವೆ. ಇದೇ ವಿವಾದಗಳನ್ನು ಬಂಡವಾಳ ಮಾಡಿಕೊಂಡಿದ್ದ ಆರೋಪಿ ಶಿಶಿರ್ ಒಂದು ಕಡೆ ಸೇರಿಕೊಂಡು ಹಣ ಮಾಡುತ್ತಿದ್ದ.
ಮಹಾರಾಷ್ಟ್ರ ಮೂಲದ ಶಶಿರ್ ಕಳೆದ ಮೂರು ವರ್ಷಗಳಿಂದ ಕಗ್ಗಲೀಪುರದಲ್ಲಿ ವಾಸವಿದ್ದ. ಕೇವಲ ಡಿಪ್ಲೋಮಾ ವ್ಯಾಸಂಗ ಮಾಡಿದ್ದರೂ ತನ್ನನ್ನು ಐಎಎಸ್ ಅಧಿಕಾರಿಯೆಂದು ಮಾರ್ಕೆಟ್ ಮಾಡಿಕೊಂಡಿದ್ದ. ಜನರನ್ನು ನಂಬಿಸಿ ಜಮೀನು ವಿವಾದಗಳನ್ನು ಬಗೆಹರಿಸಿಕೊಡುತ್ತೇನೆ ಎಂದು ಹೇಳಿ ಮೋಸದ ಬಲೆಯಲ್ಲಿ ಕೆಡವಿಕೊಳ್ಳುತ್ತಿದ್ದ.
ರವಿಶಂಕರ್ ಗುರೂಜಿಗೂ ನಂಬಿಸಿದ್ದ ಶಿಶಿರ್ !
ಬಂಧಿತ ಆರೋಪಿ ಕೇವಲ ಸಾಮಾನ್ಯ ಜನರನ್ನಷ್ಟೇ ಅಲ್ಲದೇ ಖ್ಯಾತ ಸ್ವಾಮೀಜಿ ರವಿಶಂಕರ್ ಗುರೂಜಿಯವರನ್ನು ಕೂಡ ತಾನು ಐಎಎಸ್ ಅಧಿಕಾರಿ ಎಂದು ನಂಬಿಸಿದ್ದ. ಅಲ್ಲದೇ ರವಿಶಂಕರ್ ಗುರೂಜಿ ಆಶ್ರಮಕ್ಕೂ ಭೇಟಿ ಕೊಟ್ಟು ಐಎಎಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದ. ಆಶ್ರಮದ ಜಮೀನು ವಿವಾದ ವಿಚಾರದಲ್ಲಿ ಗುರೂಜಿ ಪರ ಬ್ಯಾಟಿಂಗ್ ಮಾಡಿದ್ದ.
ಜಮೀನು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅಲ್ಲಿಯೂ ತಾನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿದ್ದ. ಆದರೆ ಶಿಶಿರ್ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯ ಅಸಲಿಯತ್ತು ಬಯಲಾಗಿದೆ.
Police arrested a fake IAS officer on Wednesday. The accused, Shishir Balasaheb, 24, a native of Jalagaon in Maharashtra, is staying in Bengaluru. Claiming that he was an IAS officer working in the secretariat of Union Home Ministry, Shishir allegedly cheated many persons by promising them government jobs. He told his victims that he was posted in Bengaluru as an officer on special duty for southern range. He carried fake ID and visiting cards.
04-04-25 10:54 pm
HK News Desk
Mla Pradeep Eshwar, H D Kumaraswamy: ಕುಮಾರಸ್ವ...
04-04-25 09:55 pm
Waqf Amendment, Deve Gowda, Rajya Sabha: ವಕ್ಫ...
04-04-25 12:00 pm
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
04-04-25 09:29 pm
HK News Desk
Waqf Controversy, BJP, Kharge: ವಕ್ಫ್ ಆಸ್ತಿ ಕ...
04-04-25 08:50 pm
Waqf Amendment Bill: ಸಂಸತ್ತಿನ ಎರಡೂ ಸದನಗಳಲ್ಲಿ...
04-04-25 12:44 pm
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
04-04-25 11:07 pm
Mangalore Correspondent
Mangalore Hotel Moti Mahal closed, Milagres:...
04-04-25 11:00 pm
Mangalore Bus Accident, Uppinangady: ನೀರಕಟ್ಟೆ...
04-04-25 01:39 pm
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm