ಬ್ರೇಕಿಂಗ್ ನ್ಯೂಸ್
26-08-21 09:20 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 26: ನಕಲಿ ಅಂಕಪಟ್ಟಿಯ ರೀತಿ ಕೇರಳ ಗಡಿಭಾಗದಲ್ಲಿ ನಕಲಿ ಕೋವಿಡ್ ಸರ್ಟಿಫಿಕೇಟ್ ಜಾಲವೂ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ತಲಪಾಡಿ ಗಡಿಭಾಗದಲ್ಲಿ ಎರಡು ದಿನಗಳ ಅಂತರದಲ್ಲಿ ನಾಲ್ವರು ಯುವತಿಯರು ಸೇರಿ ಒಟ್ಟು ಹನ್ನೊಂದು ಮಂದಿ ನಕಲಿ ಆರ್ ಟಿಪಿಸಿಆರ್ ಸರ್ಟಿಪಿಕೇಟ್ ಇಟ್ಕೊಂಡು ಕರ್ನಾಟಕಕ್ಕೆ ಬಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧಿಸಿ ಏಳು ಮಂದಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಶಿಕ್ಷಣಕ್ಕಾಗಿ ಆಗಮಿಸುತ್ತಿದ್ದ ಇಬ್ಬರು ಯುವತಿಯರು ಮತ್ತು ಒಬ್ಬ ಎಂಬಿಎ ವಿದ್ಯಾರ್ಥಿ ನಕಲಿ ಸರ್ಟಿಫಿಕೇಟ್ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾಲ್ಕು ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ. ನಕಲಿ ಸರ್ಟಿಫಿಕೇಟ್ ಮಾಡಿಕೊಟ್ಟ ಆರೋಪಿ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಎಂಬಿಎ ವಿದ್ಯಾರ್ಥಿಯಾಗಿರುವ ಕಾಸರಗೋಡು ಜಿಲ್ಲೆಯ ಆಲಂಪಾಡಿ ನಿವಾಸಿ ಅಬ್ದುಲ್ ತಮೀಮ್ (19), ಚೆರುವತ್ತೂರು ನಿವಾಸಿ ಹಸೀನ್(31), ಚೆರುವತ್ತೂರಿನ ಹಾದಿಲ್ (25), ಕಾಸರಗೋಡು ಕಡಪ್ಪರ ನಿವಾಸಿ ಇಸ್ಮಾಯಿಲ್ (48) ಮತ್ತು ಇವರಿಗೆ ನಕಲಿ ಪ್ರಮಾಣಪತ್ರ ಮಾಡಿಸಿಕೊಟ್ಟಿದ್ದ ಚೆರ್ವತ್ತೂರು ಪಯ್ಯಂಗೇಟ್ ನಿವಾಸಿ ಕಬೀರ್ ಎ.ಎಂ.(24) ಎಂಬವರನ್ನು ತಲಪಾಡಿ ಗಡಿಯಲ್ಲಿ ಬುಧವಾರ ಬಂಧಿಸಲಾಗಿತ್ತು. ಇಂದು ಮತ್ತೆ ತಲಪಾಡಿ ಗಡಿಯಲ್ಲಿ ಮಂಗಳೂರಿನ ಪಡೀಲ್ ನಿವಾಸಿ ಮಹಮ್ಮದ್ ಶರೀಫ್ (34) ಮತ್ತು ಮಂಜೇಶ್ವರ ನಿವಾಸಿ ಅಬುಬಕ್ಕರ್ (28) ನಕಲಿ ಸರ್ಟಿಫಿಕೇಟ್ ತೋರಿಸಿ ಸಿಕ್ಕಿಬಿದ್ದಿದ್ದಾರೆ.
ಪಡೀಲ್ ನಿವಾಸಿ ಮಂಜೇಶ್ವರದ ಸಂಬಂಧಿಕರ ಮನೆಗೆ ತೆರಳಿದ್ದು, ಹಿಂತಿರುಗಿ ಬರುವಾಗ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ತೋರಿಸಿದ್ದ. ಆದರೆ, ಅದು ನಕಲಿಯಾಗಿತ್ತು. ಸೌದಿಯಲ್ಲಿ ಉದ್ಯೋಗಿಯಾಗಿರುವ ಅಬುಬಕ್ಕರ್, ತನ್ನ ಗೆಳೆಯರನ್ನು ಕಾಣುವ ಸಲುವಾಗಿ ಮಂಗಳೂರಿಗೆ ಬಂದಿದ್ದು ಈ ವೇಳೆ ನಕಲಿ ಸರ್ಟಿಫಿಕೇಟ್ ತೋರಿಸಿದ್ದ. ಇವರಿಗೆ ನಕಲಿ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದು ಯಾರು ಮತ್ತು ಎಲ್ಲಿ ಎನ್ನುವುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
ಕಾಸರಗೋಡಿನ ಇತರ ಆರೋಪಿಗಳು ಚೆರುವತ್ತೂರಿನ ಕಬೀರ್ ಬಳಿಯಲ್ಲೇ ನಕಲಿ ಸರ್ಟಿಫಿಕೇಟ್ ಮಾಡಿದ್ದರು ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಉಳ್ಳಾಲ ಪೊಲೀಸರು ಕಾಸರಗೋಡಿಗೆ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡಿನಿಂದ ಮಂಗಳೂರಿಗೆ ಬರಲು ಬಳಸಿದ್ದ ಇನ್ನೋವಾ ಮತ್ತು ಇಟಿಯೋಸ್ ಕಾರು, ಎರಡು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಉಪ್ಪಳ ಮೂಲದ ಇಬ್ಬರು ವಿದ್ಯಾರ್ಥಿನಿಯರು ವಿಚಾರಣೆ ಸಂದರ್ಭ ತಮಗೆ ಬೇರೆ ಗೆಳೆಯರು ಸರ್ಟಿಫಿಕೇಟ್ ಮಾಡಿಕೊಟ್ಟಿದ್ದರು. ನಾವು ಪರೀಕ್ಷೆಗೆ ತೆರಳಿದ್ದೆವು ಎಂದು ಹೇಳಿದ್ದರು. ಆದರೆ, ಅದನ್ನು ನಕಲಿಯಾಗಿಯೇ ಮಾಡಲಾಗಿತ್ತು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
Seven people were arrested in four separate cases for forging RT-PCR reports at Talapady check post on August 25 and 26. The arrested are identified as Mohammed Sharif (34) from Padil, Abubakker (28) from Manjeshwar, Abdul Tamim (19) from Chengala, Ismail (48) from Kadappara, and Hadil (25), Kabir A M (24) and Hasin (31) from Cheruvathur.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 01:02 pm
HK News Desk
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm