ಬ್ರೇಕಿಂಗ್ ನ್ಯೂಸ್
02-08-21 12:34 pm Mangaluru Correspondent ಕ್ರೈಂ
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನ ಆಗಿರುವ ಸುದ್ದಿ ಭಾರಿ ಸದ್ದು ಮಾಡುತ್ತಿರುವ ಹೊತ್ತಿನಲ್ಲಿಯೇ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇದೇ ಮಾದರಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ನಟಿ ಹಾಗೂ ಆಕೆಯ ಪಾಲುದಾರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಅಶ್ಲೀಲ ವಿಡಿಯೋ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತ ಪೊಲೀಸರು ನಟಿ, ಮಾಡೆಲ್ ನಂದಿತಾ ದತ್ತಾ ಅನ್ನು ಬಂಧಿಸಿದ್ದಾರೆ ಆಕೆಯ ಜೊತೆ ಪಾಲುದಾರನಾಗಿದ್ದ ಮಾಣಿಕ್ ಘೋಷ್ ಎಂಬಾತನನ್ನೂ ಕೊಲ್ಕತ್ತ ಪೊಲೀಸರು ಬಂಧಿಸಿದ್ದಾರೆ.

ನಂದಿತಾ ಹಾಗೂ ಮಾಣಿಕ್ ಕೊಲ್ಕತ್ತದ ಹೋಟೆಲ್ ಒಂದರಲ್ಲಿ ನೀಲಿ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದು, ಈ ನೀಲಿ ವಿಡಿಯೋ ರಾಕೆಟ್ನಲ್ಲಿ ಇನ್ನಷ್ಟು ಜನರಿದ್ದು ತನಿಖೆ ನಡೆಯುತ್ತಿದ್ದು, ಇನ್ನಷ್ಟು ಜನರ ಹೆಸರುಗಳು ಹೊರಗೆ ಬೀಳಲಿವೆ ಎಂದಿದ್ದಾರೆ.
ಫೊಟೊಗ್ರಾಫರ್ ಆಗಿರುವ ಮಾಣಿಕ್ ಹಾಗೂ ನಟಿ, ಮಾಡೆಲ್ ಆಗಿರುವ ನಂದಿತಾ ಮಾಡೆಲ್ಗಳನ್ನು ಫೇಸ್ಬುಕ್ ಮೂಲಕ ಮಾಡೆಲ್ಗಳನ್ನು, ನಟಿಯರಾಗುವ ಆಸೆಯಲ್ಲಿರುವ ಯುವತಿಯರನ್ನು ಫೇಸ್ಬುಕ್ ಮೂಲಕ ಸಂಪರ್ಕ ಮಾಡಿ ಅವರನ್ನು ಒಪ್ಪಿಸಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು. ಹೀಗೆ ಚಿತ್ರೀಕರಿಸಿಕೊಂಡ ವಿಡಿಯೋಗಳನ್ನು ನಿಯೋಫ್ಲಿಕ್ಸ್, 'ರೆಡ್ವ್ಯಾಪ್ ಟು' ವೆಬ್ಸೈಟ್, ಅಪ್ಲಿಕೇಶನ್ಗಳಲ್ಲಿ ಪ್ರದರ್ಶನ ಮಾಡಿ ದೊಡ್ಡ ಮೊತ್ತದ ಹಣ ಸಂಪಾದನೆ ಮಾಡುತ್ತಿದ್ದರು. ವಿಡಿಯೋಗಳನ್ನು ವಿದೇಶದಿಂದ ಅಪ್ಲೋಡ್ ಮಾಡಿಸುತ್ತಿದ್ದರು ಈ ಗ್ಯಾಂಗ್. ಇವರು ಯಾವುದೇ ಸಾಫ್ಟ್ ಪಾರ್ನ್ ಚಿತ್ರೀಕರಣ ಮಾಡುತ್ತಿರಲಿಲ್ಲ ಬದಲಾಗಿ ನಗ್ನ ವಿಡಿಯೋಗಳನ್ನೇ ಚಿತ್ರೀಕರಿಸುತ್ತಿತ್ತು. ಈ ಗ್ಯಾಂಗ್ಗೂ ರಾಜ್ ಕುಂದ್ರಾಗೂ ಸಂಪರ್ಕ ಇದೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಕೊಲ್ಕತ್ತದಲ್ಲಿಯೇ ಜಯಶ್ರೀ ಮಿಶ್ರಾ ಮತ್ತು ಪ್ರತಾಪ್ ಘೋಷ್ ಎಂಬುವರನ್ನು ಇದೇ ಮಾದರಿಯ ಪ್ರಕರಣದಲ್ಲಿ ಬಂಧಿಸಿದ್ದರು. ಈ ಇಬ್ಬರೂ ಸೇರಿ ಕೆಲವು ಮಾಡೆಲ್ಗಳ ಅರೆ ಬೆತ್ತಲೆ ಚಿತ್ರಗಳನ್ನು ಕ್ಲಿಕ್ಕಿಸಿ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೊಲ್ಕತ್ತದಲ್ಲಿ ಹಲವು ಮಾಡೆಲ್ಗಳು ಹಣಕ್ಕಾಗಿ ಹೀಗೆ ಪಾರ್ಕ್ನಲ್ಲಿ, ಹೊರ ಪ್ರದೇಶದಲ್ಲಿ ಅರೆ ಬೆತ್ತಲೆಯಾಗಿ ಕುಳಿತು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿಸಲಾಗಿರುವ ಮಾಡೆಲ್ ನಂದಿತಾ ಹಾಗೂ ಫೊಟೊಗ್ರಾಫರ್ ಮಾಣಿಕ್ ಘೋಷ್ ಅನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಇಬ್ಬರನ್ನೂ ಪೊಲೀಸರ ವಶಕ್ಕೆ ನ್ಯಾಯಾಲಯವು ನೀಡಿದೆ. ತನಿಖೆ ಜಾರಿಯಲ್ಲಿದ್ದು ಪ್ರಕರಣದಲ್ಲಿರುವ ಇನ್ನೂ ಕೆಲವರ ಹೆಸರುಗಳು ಹೊರಗೆ ಬರಲಿದೆ.
ಅಶ್ಲೀಲ ಸಿನಿಮಾ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಿಕ್ಕಿಬಿದ್ದ ನಂತರ ಈ ಪ್ರಕರಣದ ತನಿಖೆ ಚುರುಕಾಗಿದೆ. ಎಲ್ಲ ಆಯಾಮದಿಂದಲೂ ವಿಚಾರಣೆ ಮಾಡಲಾಗುತ್ತಿದೆ.
A 30-year-old model-cum-actress from Kolkata named Nandita Dutta along with her associate, Mainak Ghosh have been arrested for allegedly forcing aspiring models into pornography. According to an ETimes report, the duo has been accused of shooting pornographic content by either threatening the aspiring actors or giving them false hope of a big break on mainstream OTT platforms.
20-03-26 12:02 pm
HK News Staffer
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
19-03-26 11:30 pm
HK News Desk
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
ಪಿಲಿಕುಳದಲ್ಲಿ ಏಳು ಮುದ್ದಾದ ಮಕ್ಕಳ ತಾಯಿಯಾದ 'ಗೀತಾ'...
18-03-26 10:42 pm
19-03-26 10:38 pm
Mangaluru Staffer
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm