ಬ್ರೇಕಿಂಗ್ ನ್ಯೂಸ್
29-10-26 12:14 pm HK News Staffer ಕ್ರೈಂ
ಪುತ್ತೂರು, ಅ.29: ವಿಟ್ಲ ಸಮೀಪದ ಕೆದಿಲ ವ್ಯವಸಾಯ ಸಹಕಾರಿ ಸಂಘದಲ್ಲಿ ಕೃಷಿಕ ಗ್ರಾಹಕರು ಇಟ್ಟಿದ್ದ ಕೋಟ್ಯಂತರ ರೂಪಾಯಿ ಡಿಪಾಸಿಟ್ ಹಣವನ್ನು ಸೊಸೈಟಿ ಸಿಇಓ ಕೇಶವ ಗೌಡ ತನ್ನ ಚಪಲ ತೀರಿಸಲು ಹೋಗಿ ಮುಸ್ಲಿಂ ಮಹಿಳೆಯ ದಾಳಕ್ಕೆ ಸಿಲುಕಿ ಆಕೆಗೆ ಧಾರೆ ಎರೆದ ಪ್ರಸಂಗ ನಡೆದಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಕೇಶವ ಗೌಡ ಮತ್ತು ಮಂಗಳೂರಿನ ಕದ್ರಿಯ ಪ್ರತಿಷ್ಠಿತ ಎಸ್.ಕೆ.ಎಸ್ ಫ್ಲಾಟ್ ನಿವಾಸಿ ಸಮೀರಾ ರಿಯಾಜ್ ಮೇಲೆ ಎಫ್ಐಆರ್ ದಾಖಲಾಗಿದೆ.
ನಾಲ್ಕು ತಿಂಗಳ ಹಿಂದೆಯೇ ವಿಷಯ ಬೆಳಕಿಗೆ ಬಂದಿದ್ದರೂ, ಪುತ್ತೂರು ಠಾಣೆಯಲ್ಲಿ ಸೊಸೈಟಿ ನೋಂದಣಾಧಿಕಾರಿಗಳ ಮೂಲಕವೇ ತನಿಖೆ ಮಾಡಿಸಿ ಎಂದು ದೂರು ಸ್ವೀಕರಿಸದೇ ಇದ್ದಾಗ ಸಂಘದ ಅಧ್ಯಕ್ಷ ಪದ್ಮನಾಭ ಭಟ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ ಈಗ ಎಫ್ಐಆರ್ ಮಾಡಿಸಿದ್ದಾರೆ. ದೂರಿನ ಪ್ರಕಾರ, ಸೊಸೈಟಿಯಲ್ಲಿ ಒಟ್ಟು 31.21 ಕೋಟಿ ಡಿಪಾಸಿಟ್ ಹಣ ಇದೆ. ಆದರೆ 2026-27ರ ಸಾಲಿನ ಅಡಿಟ್ ಸಂದರ್ಭದಲ್ಲಿ 6.86 ಕೋಟಿ ರೂಪಾಯಿ ಕಡಿಮೆ ಇರುವುದು ಮತ್ತು ಅಕ್ರಮವಾಗಿ ಮಹಿಳೆಯೊಬ್ಬರ ಖಾತೆಗೆ ವರ್ಗಾವಣೆಯಾಗಿದ್ದು ಪತ್ತೆಯಾಗಿದೆ.
ಬ್ಯಾಂಕಿನ ಸಿಇಓ ಕೇಶವ ಗೌಡ ಅವರಲ್ಲಿ ಕೇಳಿದಾಗ, ತನ್ನಿಂದಾಗಿರುವ ತಪ್ಪನ್ನು ಹೇಳಿಕೊಂಡಿದ್ದು ಮಹಿಳೆಯೊಬ್ಬರ ದಾಳಕ್ಕೆ ಸಿಲುಕಿ 7.26 ಕೋಟಿ ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಕೋ ಬ್ಯಾಂಕ್ ಸಾಫ್ಟ್ ವೇರ್ ನಲ್ಲಿ ಸದಸ್ಯರ ಹೆಸರಿನಲ್ಲಿ ನಕಲಿಯಾಗಿ ಸಾಲದ ಖಾತೆಗಳನ್ನು ಸೃಷ್ಟಿಸಿ ಹಣವನ್ನು ಸಮೀರಾ ರಿಯಾಜ್ ಎನ್ನುವ ಮಹಿಳೆಯ ಖಾತೆಗೆ ವರ್ಗಾಯಿಸಿದ್ದಾರೆ.
ಮಂಗಳೂರಿನ ಜಪ್ಪಿನಮೊಗರಿನಲ್ಲಿರುವ ಯೋಗೀಶ್ ಆಚಾರ್ಯ ಅಲಿಯಾಸ್ ಯೋಗೀಶ್ ಭಟ್ಟ ಎಂಬ ಜ್ಯೋತಿಷಿಯ ಸಂಪರ್ಕದಲ್ಲಿದ್ದ ಕೇಶವ ಗೌಡ ಮೊದಲಿಗೆ ಆತನಿಗೆ 1.67 ಕೋಟಿ ರೂ. ಸಾಲ ನೀಡಿದ್ದರು. ಸಮೀರಾಗೆ ಕೊಡಲಿಕ್ಕಿದೆಯಂದು ಕೇಶವ ಗೌಡನಿಂದಲೇ ಜ್ಯೋತಿಷಿ ಸಾಲ ಪಡೆದಿದ್ದರು. ಆನಂತರ, ಜ್ಯೋತಿಷಿ ಮೂಲಕ ಸಂಪರ್ಕವಾಗಿದ್ದ ಸಮೀರಾ ರಿಯಾಜ್ ಜೊತೆಗೆ ಕೇಶವ ಗೌಡ ಚಕ್ಕಂದ ಆಡಲು ಶುರು ಮಾಡಿದ್ದ ಎನ್ನಲಾಗಿದ್ದು ಇದನ್ನೇ ದಾಳವಾಗಿಸ್ಕೊಂಡ ಸಮೀರಾ, ನಿನ್ನ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿದ್ದಾಳೆ. ಇದರಿಂದ ಬೆದರಿದ ಕೇಶವ ಗೌಡ, ಕೆದಿಲ ಸೊಸೈಟಿಯಲ್ಲಿ ಕೃಷಿಕರು ಇಟ್ಟಿದ್ದ ಕೋಟ್ಯಂತರ ರೂಪಾಯಿ ಹಣವನ್ನು ಹಂತ ಹಂತವಾಗಿ ಆಕೆಗೆ ವರ್ಗಾಯಿಸಿದ್ದಾನೆ.
ಇದಲ್ಲದೆ, 7 ಕೋಟಿ ರೂಪಾಯಿ ಮೊತ್ತವನ್ನು ಅಪರಾತಪರಾ ಮಾಡಿರುವುದು ಸದಸ್ಯರಿಗೆ ಮತ್ತು ಬ್ಯಾಂಕಿನ ನಿರ್ದೇಶಕರಿಗೆ ತಿಳಿಯದಂತೆ ಮಾಡಲು ದಾಖಲೆಗಳಲ್ಲಿ ಸಾಕಷ್ಟು ಪೋರ್ಜರಿಗಳನ್ನೂ ಮಾಡಿದ್ದಾನೆ. ಸಂಘದ ವಾರ್ಷಿಕ ಸಭೆಯಲ್ಲಿ ಮತ್ತು ಸಾಲಗಾರರ ನಡಾವಳಿ ಪುಸ್ತಕದಲ್ಲಿ ತಿದ್ದುಪಡಿ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಸಾಲದ ಅರ್ಜಿಗಳಲ್ಲಿ ವಕೀಲರ ಲೀಗಲ್ ಒಪೀನಿಯನ್ ಗಳನ್ನೂ ನಕಲಿ ಮಾಡಿಸಿದ್ದು ಪೋರ್ಜರಿ ಸಹಿಗಳನ್ನು ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
2024ರ ಜನವರಿಯಿಂದ ತೊಡಗಿ 2026ರ ಮಾರ್ಚ್ ವರೆಗಿನ ಅವಧಿಯಲ್ಲಿ ಹಣ ದುರುಪಯೋಗ, ಪೋರ್ಜರಿ ದಾಖಲೆ ಸೃಷ್ಟಿಸಿ ಬ್ಯಾಂಕಿನ ಆಡಳಿತಕ್ಕೆ ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಕೇಶವ ಗೌಡ ಮತ್ತು ಸಮೀರಾ ರಿಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
An alleged financial fraud involving crores of rupees in deposits belonging to farmers has come to light at the Kedila Agricultural Cooperative Society near Vittal in Dakshina Kannada district. The society’s CEO, Keshava Gowda, allegedly diverted depositors’ money to the account of a woman from Mangaluru after reportedly falling victim to blackmail.
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
29-10-26 02:12 pm
HK News Staffer
ಶಾಲೆಗೆ ತೆರಳಿದ್ದ 9ನೇ ಕ್ಲಾಸಿನ ಅಪ್ರಾಪ್ತ ವಿದ್ಯಾರ್...
28-10-26 09:28 pm
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
29-10-26 01:14 pm
HK News Staffer
Kedila Society, Keshav Gowda, Blackmail: ಮುಸ್...
29-10-26 12:14 pm
ಯುನೈಟೆಡ್ ನೇಶನ್ಸ್ ಹೈಕಮಿಷನರ್ ಹೆಸರಲ್ಲಿ ಫೋನ್ ಕರೆ...
28-10-26 10:42 pm
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am