ಬ್ರೇಕಿಂಗ್ ನ್ಯೂಸ್
08-08-26 06:04 pm HK News Staffer ಕ್ರೈಂ
ಪಡುಬಿದ್ರಿ, ಆ. 8: “ನನ್ನ ಪತಿಯ ಸಾವು ನಮಗೆ ನಂಬಲಾರದ ಆಘಾತ ತಂದಿದೆ. ಊರಿನ ಅಭಿವೃದ್ಧಿಗೆ ಶ್ರಮಿಸಿದ ಅವರ ರಕ್ತ ಚೆಲ್ಲಿದ ದುಷ್ಕರ್ಮಿಗಳಿಗೆ ಹಾಗೂ ಇದರ ಹಿಂದಿರುವ ಸಂಚುಕೋರರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು” ಎಂದು ಶೂಟೌಟ್ಗೆ ಬಲಿಯಾದ ಉದ್ಯಮಿ ಹಾಗೂ ರಾಜಕಾರಣಿ ಪ್ರಿನ್ಸ್ ಡೇವಿಡ್ ಡಿಸೋಜಾ ಅವರ ಪತ್ನಿ ಪ್ರಿಯಾ ಡೇವಿಡ್ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾ, ಪತಿ ಪ್ರತಿದಿನದಂತೆ ಊಟ ಮುಗಿಸಿ ಕಚೇರಿಗೆ ತೆರಳಿದ್ದರು. “ಅವರು ನಮ್ಮ ಬಳಿ ಉದ್ಯಮದ ಯಾವುದೇ ವಿಚಾರಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಕುಟುಂಬಕ್ಕೆ ಯಾವುದೇ ಕೊರತೆಯಾಗದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಘಟನೆಯ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು. ಆದರೆ, ದುರದೃಷ್ಟವಶಾತ್ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಬಿಕ್ಕಿ ಬಿಕ್ಕಿ ಅತ್ತರು.
“ಊರಿನ ಏಳಿಗೆಗೆ ಅಪಾರವಾಗಿ ಶ್ರಮಿಸಿದ್ದರು”
ಡೇವಿಡ್ ಉದ್ಯಮಿಯಾಗಿ ಮಾತ್ರವಲ್ಲದೆ ರಾಜಕಾರಣಿಯಾಗಿಯೂ ಊರಿನ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. “ನನ್ನ ಪತಿಗೆ ಈ ರೀತಿ ಆಗುತ್ತದೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ. ಕ್ರೂರವಾಗಿ ಗುಂಡು ಹಾರಿಸಿ ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಅವರನ್ನು ಪತ್ತೆಹಚ್ಚಿ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು” ಎಂದು ಆಗ್ರಹಿಸಿದರು.
“ಆರೋಪಿಗಳಿಗೆ ಮಾತ್ರವಲ್ಲ, ಸಂಚುಕೋರರಿಗೂ ಶಿಕ್ಷೆಯಾಗಲಿ”
ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದು ಕುಟುಂಬಕ್ಕೆ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. “ಕೃತ್ಯ ಎಸಗಿದ ಆರೋಪಿಗಳಿಗೆ ಮಾತ್ರವಲ್ಲದೆ, ಇದರ ಹಿಂದೆ ನಿಂತು ಸಂಚು ರೂಪಿಸಿದ ರೂವಾರಿಗಳನ್ನೂ ಪತ್ತೆಹಚ್ಚಬೇಕು. ನನ್ನ ಪತಿಯ ಹತ್ಯೆಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು” ಎಂದು ಕಣ್ಣೀರಿನ ನಡುವೆಯೇ ಒತ್ತಾಯಿಸಿದರು.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
31-10-26 09:40 pm
Mangaluru Staffer
14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ...
31-10-26 05:19 pm
ಉದ್ಘಾಟನೆಗೂ ಮುನ್ನವೇ ಇಂದಿರಾ ಕ್ಯಾಂಟೀನ್ ಹೆದ್ದಾರಿಗ...
31-10-26 02:25 pm
ಸೌಜನ್ಯಾ ಮರು ತನಿಖೆ ; ಎಸ್ಐಟಿ ಮುಖ್ಯಸ್ಥರಾಗಿ ಚೇತನ್...
30-10-26 12:51 pm
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
31-10-26 01:16 pm
HK News Staffer
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm