ಬ್ರೇಕಿಂಗ್ ನ್ಯೂಸ್
19-07-26 07:42 pm HK News Desk ಕ್ರೈಂ
ಪುತ್ತೂರು, ಜುಲೈ 19: ಖೋಟಾ ನೋಟು ಮುದ್ರಿಸುತ್ತಿದ್ದ ಖದೀಮರ ಜಾಲದ ಬೆನ್ನತ್ತಿದ ವಿಶೇಷ ತನಿಖಾ ತಂಡದ ಪೊಲೀಸರು ಏಳು ಮಂದಿಯನ್ನು ಬಂಧಿಸಿದರೂ, ಇನ್ನಷ್ಟು ಆರೋಪಿಗಳು ಈ ಕೃತ್ಯದಲ್ಲಿ ತೊಡಗಿರುವ ಶಂಕೆಯಲ್ಲಿ ತನಿಖೆ ಮುಂದುವರಿಸಲಾಗಿದೆ. ಇದೇ ವೇಳೆ, ಪ್ರಕರಣದ ಪ್ರಮುಖ ಆರೋಪಿ ಪುತ್ತೂರಿನ ಇಬ್ರಾಹಿಂ 22 ವರ್ಷಗಳ ಹಿಂದೆ ಅಂದರೆ, 2004ರಲ್ಲಿ ಬಂಟ್ವಾಳದ ಬಾಳ್ತಿಲದ ದಾಸಕೋಡಿಯಲ್ಲಿ ಪತ್ತೆಯಾಗಿದ್ದ ಖೋಟಾ ನೋಟು ದಂಧೆಯಲ್ಲೂ ಆರೋಪಿಯಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಜುಲೈ 16ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದಲ್ಲಿಗೆ ದಾಳಿ ನಡೆಸಿದ್ದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು. ಇವರಲ್ಲಿ 60 ವರ್ಷದ ಇಬ್ರಾಹಿಂ ಕೂಡ ಒಬ್ಬನಾಗಿದ್ದ.


2004ರ ಅಕ್ಟೋಬರ್ 31ರಂದು ಬಂಟ್ವಾಳ ಪೊಲೀಸರು ದಾಸಕೋಡಿಯ ಮನೆಯೊಂದಕ್ಕೆ ದಾಳಿ ನಡೆಸಿ ಖೋಟಾ ನೋಟು ಹೊಂದಿದ್ದ ಇಬ್ರಾಹಿಂ ಮತ್ತು ದಾಸಕೋಡಿಯ ಶಾಂತಪ್ಪ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದರು. ದಾಸಕೋಡಿಯ ಶಾಂತಪ್ಪ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದು ಆತನ ಜತೆಗೆ ಇಬ್ರಾಹಿಂ ಸಹಿತ ಇತರ 9 ಮಂದಿ ಆರೋಪಿಗಳು ಭಾಗಿಯಾಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಂದಿನ ಪ್ರಕರಣದಲ್ಲಿ ಪೊಲೀಸರು ಇಬ್ರಾಹಿಂನನ್ನು ಪುತ್ತೂರಿನ ಬೊಳುವಾರಿನಲ್ಲಿ ಬಂಧಿಸಿ ಆತನಿಂದ 100ರ ಮುಖಬೆಲೆಯ ಸುಮಾರು 35 ನೋಟುಗಳನ್ನು ವಶಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಳಿಕ ಆರೋಪಿಗಳು ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಅಂದು 100, ಇಂದು 500ರ ನೋಟು !
ಅಡೆಂಜ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಇಬ್ರಾಹಿಂ 60 ವರ್ಷದವನಾಗಿದ್ದು, ಖೋಟಾ ನೋಟು ದಂಧೆಯಲ್ಲಿ ಹೆಚ್ಚು ಪಳಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದಿನ ಪ್ರಕರಣದಲ್ಲಿ ಆತನ ಬಳಿ 100ರ ನಕಲಿ ನೋಟುಗಳು ಪತ್ತೆಯಾಗಿದ್ದರೆ, ಈಗ 500ರ ನಕಲಿ ನೋಟುಗಳನ್ನು ಮುದ್ರಿಸುವ ದಂಧೆಯಲ್ಲಿ ತೊಡಗಿದ್ದ. ಪ್ರಕರಣದಲ್ಲಿ ಸೆರೆಸಿಕ್ಕಿರುವ ಇಬ್ರಾಹಿಂ ಹಾಗೂ ಫಾಲೋಲ ಶರೀಫ್ ಇಬ್ಬರು ಹಿರಿಯವರಾಗಿದ್ದು, ಉಳಿದ ಯುವಕರನ್ನು ಸೇರಿಸಿಕೊಂಡು ಕೃತ್ಯದಲ್ಲಿ ತೊಡಗಿರುವ ಶಂಕೆ ಇದೆ.
ಪೇಪರ್ ಪ್ರಿಂಟಿಂಗ್ ಫ್ಯಾಕ್ಟರಿ ಎಂದಿದ್ದ ಆರೋಪಿಗಳು
ಈಗ ಪತ್ತೆಯಾಗಿರುವ ಅಡಿಂಜೆ ಪ್ರಕರಣದಲ್ಲಿ ಆರೋಪಿಗಳು ಪೇಪರ್ ಪ್ರಿಂಟಿಂಗ್ ಫ್ಯಾಕ್ಟರಿ ಮಾಡುತ್ತಿದ್ದು ಅದಕ್ಕಾಗಿ ಮನೆ ಬಾಡಿಗೆ ಬೇಕಾಗಿದೆ ಎಂದು ತನ್ನ ಬಳಿ ಸುಳ್ಳು ಹೇಳಿದ್ದರು ಎಂದು ಕಟ್ಟಡದ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಸ್ಥಳೀಯ ಆರೋಪಿ ಉರುವಾಲಿನ ಸಿರಾಜುದ್ದೀನ್, ಆರೋಪಿಗಳನ್ನು ಕಟ್ಟಡದ ಮಾಲಕನಿಗೆ ಪರಿಚಯ ಮಾಡಿಸಿದ್ದ ಎನ್ನಲಾಗಿದೆ. ಆರೋಪಿಗಳು ಮನೆಯಲ್ಲಿದ್ದ ಸಂದರ್ಭ ಅವರಿಗೆ ಬೇಕಾದ ಊಟ-ತಿಂಡಿ ಇತರ ಸೊತ್ತುಗಳನ್ನು ಸಿರಾಜುದ್ದೀನ್ ಪೂರೈಕೆ ಮಾಡುತ್ತಿದ್ದ ಎಂಬ ಮಾಹಿತಿ ಇದೆ.
ಆರೋಪಿಗಳು 10-15 ದಿನಗಳಿಗೊಮ್ಮೆ ಈ ಮನೆಗೆ ಕೆಲವು ದಿನ ಇದ್ದು ಹೋಗುತ್ತಿದ್ದರು. ಈ ಸಂದರ್ಭ ಅವರು ಹೊರಗಡೆ ಓಡಾಡುತ್ತಿರಲಿಲ್ಲ. ಹೀಗಾಗಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸ್ಥಳೀಯ ಆರೋಪಿಯೇ ತಂದು ಕೊಡುತ್ತಿದ್ದ. ಆದರೆ ಖೋಟಾ ನೋಟು ದಂಧೆಗೆ ಬೇಕಾದ ಸೊತ್ತುಗಳನ್ನು ಅವರೇ ತರುತ್ತಿದ್ದರು ಎನ್ನಲಾಗಿದೆ.
ಪ್ರಸ್ತುತ ಕಣಿಯೂರಿನ ಅಡೆಂಜ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಪೊಲೀಸರು 6 ದಿನಗಳಿಗೆ ಕಸ್ಟಡಿಗೆ ಪಡೆದು ದಂಧೆಯ ಸಂಪೂರ್ಣ ಚಿತ್ರಣ ಬಯಲಿಗೆಳೆಯಲು ಮುಂದಾಗಿದ್ದಾರೆ. ಮೊದಲಿಗೆ ಕೊಡಗು ಪೊಲೀಸರಿಗೆ ಖೋಟಾ ನೋಟು ದಂಧೆಯ ವಾಸನೆ ಬಂದಿತ್ತು. ಉಪ್ಪಿನಂಗಡಿ ಪರಿಸರದಲ್ಲಿ ನಕಲಿ ನೋಟು ಪ್ರಿಂಟಿಂಗ್ ಆಗುತ್ತಿದೆ ಎಂಬ ಮಾಹಿತಿ ಆಧರಿಸಿ ದ. ಕ. ಜಿಲ್ಲಾ ವಿಶೇಷ ಘಟಕದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಮೂಲಗಳ ಪ್ರಕಾರ ಪ್ರಕರಣದಲ್ಲಿ ಇನ್ನೂ 2-3 ಆರೋಪಿಗಳಿದ್ದು ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm