ಬ್ರೇಕಿಂಗ್ ನ್ಯೂಸ್
04-04-26 11:32 am HK News Staffer ಕ್ರೈಂ
ಮಂಗಳೂರು, ಎಪ್ರಿಲ್ 4: ಮಂಗಳೂರಿನಲ್ಲಿ ಸೀ ಬ್ರೀಜ್ ಮ್ಯಾರಥಾನ್ ಇದೆಯೆಂಬ ಹೆಸರಿನಲ್ಲಿ ನಕಲಿ ಪೋಸ್ಟ್ ಒಂದನ್ನು ಜಾಲತಾಣದಲ್ಲಿ ಹರಿಯ ಬಿಡಲಾಗಿದ್ದು ಸೈಬರ್ ವಂಚಕರದ್ದೇ ಜಾಲ ಎನ್ನುವ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಬೆಳಗ್ಗೆ ಸೀ ಬ್ರೀಜ್ ಹೆಸರಲ್ಲಿ ಮ್ಯಾರಥಾನ್ ಇದೆಯೆಂದು ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. 5 ಕಿಮೀ ಓಟಕ್ಕೆ 5 ಲಕ್ಷ ಬಹುಮಾನ, 10 ಕಿಮೀಗೆ 3.5 ಲಕ್ಷದ ಆಫರ್ ನೀಡಿದ್ದು 21 ಕಿಮೀ ಓಟಕ್ಕೆ 5 ಲಕ್ಷದ ಬಹುಮಾನ ಆಫರ್ ನೀಡಿರುವ ಬಗ್ಗೆ ತಿಳಿಸಲಾಗಿದೆ. ಮ್ಯಾರಥಾನಲ್ಲಿ ಪಾಲ್ಗೊಳ್ಳಲು ಮೊದಲೇ ರಿಜಿಸ್ಟರ್ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಮಂಗಳೂರಿನಲ್ಲಿ ಅಂತಹ ಯಾವುದೇ ಮ್ಯಾರಥಾನ್ ಆಯೋಜಿಸಿರುವುದು ನಡೆದಿಲ್ಲ.
ಹೀಗಾಗಿ ಜಾಲತಾಣದಲ್ಲಿ ಫೇಕ್ ಪೋಸ್ಟರ್ ಕೊಟ್ಟು ಸೈಬರ್ ವಂಚನೆಗೆ ಗಾಳ ಹಾಕಿರುವ ಶಂಕೆಯಿದ್ದು ರಿಜಿಸ್ಟರ್ ಮಾಡಿದರೆ ಮೊಬೈಲ್ ಹ್ಯಾಕ್ ಆಗಿ ಹಣ ಕಳಕೊಳ್ತೀರಾ..! ಜಾಗ್ರತೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಾರ್ನಿಂಗ್ ನೀಡಿದ್ದಾರೆ. ಫೇಕ್ ಪೋಸ್ಟರ್ ಹಾಕಿ ಮೊಬೈಲ್ ಹ್ಯಾಕ್ ಮಾಡಿ ಹಣ ಕೀಳುವ ಪೋಸ್ಟರ್ ಇದೆಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಸದ್ಯ, ಮಂಗಳೂರಿನಲ್ಲಿ ಬಿಗ್ ಮ್ಯಾರಥಾನ್ ಇದೆಯೆಂಬ ಹೆಸರಲ್ಲಿ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಅದೇ ಮಾದರಿಯ ವಿಡಿಯೋ ಒಂದನ್ನು ಹರಿಯಬಿಡಲಾಗಿದ್ದು ಅದಕ್ಕೆ ಕಾಂತಾರ ಸಿನಿಮಾದ ಸಾಂಗನ್ನು ಹಿನ್ನೆಲೆಯಲ್ಲಿ ತೋರಿಸಿ ಕರಾವಳಿ ಜನರನ್ನು ಸತ್ಯವೆಂದು ನಂಬಿಸಿ ಯಾಮಾರಿಸುವ ರೀತಿ ಬಿಂಬಿಸಲಾಗಿದೆ. ಸೈಬರ್ ವಂಚಕರು ಈ ರೀತಿಯೂ ಜಾಲ ಬೀಸುತ್ತಿದ್ದಾರೆಯೇ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ಅದರಲ್ಲಿ ಕೊಟ್ಟಿರುವ ನಂಬರಿಗೆ ಫೋನಾಯಿಸಿದರೆ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿ ಕರೆ ಸ್ವೀಕರಿಸುತ್ತಿದ್ದು ರಿಜಿಸ್ಟರ್ ಮಾಡಿಕೊಳ್ಳಲು ಹೇಳುತ್ತಾನೆ. ಆದರೆ ರಿಜಿಸ್ಟರ್ ಮಾಡಿದರೆ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 09:33 pm
Mangaluru Staffer
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
16-08-26 09:03 pm
HK News Staffer
Kfc Raid, City Centre, Mangalore: ಸಿಟಿ ಸೆಂಟರ್...
15-08-26 09:06 pm
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm