ಬ್ರೇಕಿಂಗ್ ನ್ಯೂಸ್
27-01-26 05:56 pm Bangalore Correspondent ಕ್ರೈಂ
ಬೆಂಗಳೂರು, ಜ 26 : ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ರಾಬರಿ ಪ್ರಕರಣ ಮಾಸುವ ಮುನ್ನ ಮತ್ತೊಂದು ಪೇಮೆಂಟ್ ಸರ್ವಿಸ್ ಕಂಪನಿ ಸಿಬ್ಬಂದಿಯಿಂದ ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದೆ. ಹಿಟಾಚಿ ಕಂಪನಿಯ ಸಿಬ್ಬಂದಿಗಳು ಎಟಿಎಂಗೆ ತುಂಬಲು ತೆಗೆದುಕೊಂಡಿದ್ದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ.
ನಾಲ್ಕು ಮಂದಿಯ ಒಂದು ಟೀಂ 50 ಲಕ್ಷ ರೂ. ಹಣ ತಗೆದುಕೊಂಡು ಹೋಗಿದ್ದರೆ ಮೂರು ಜನರ ಮತ್ತೊಂದು ತಂಡ 80 ಲಕ್ಷ ರೂ. ಹಣ ತಗೆದುಕೊಂಡು ಎಸ್ಕೇಪ್ ಆಗಿದ್ದಾರೆ. ಎರಡು ವಂಚಕರ ತಂಡದ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಎಸ್ಬಿಐ, ಆಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಪೇಮೆಂಟ್ ಸರ್ವಿಸ್ ನೀಡುತ್ತಿದ್ದ ಹಿಟಾಚಿ ಪೇಮೆಂಟ್ ಪ್ರೈವೆಟ್ ಲಿಮಿಟೆಡ್. ಈ ಸಂಸ್ಥೆಯಲ್ಲಿ ಎಟಿಎಂಗೆ ಹಣ ಡೆಪಾಸಿಟ್ ಮಾಡುವ ಕೆಲಸ ಮಾಡ್ತಿದ್ದ ಆರೋಪಿಗಳು. 57 ಲಕ್ಷ ವಂಚನೆಯಲ್ಲಿ ಪ್ರವೀಣ್, ಧನಶೇಖ, ರಾಮಕ್ಕ, ಹರೀಶ್ ಕುಮಾರ್ ಆರೋಪಿಗಳಾದರೆ 80 ಲಕ್ಷ ರೂ. ವಂಚನೆಯಲ್ಲಿ ಹರೀಶ್ ಕುಮಾರ್, ಪ್ರವೀಣ್ ಕುಮಾರ್, ವರುಣ್ ಎಂಬ ಸಿಬ್ಬಂದಿ ಆರೋಪಿಗಳಾಗಿದ್ದಾರೆ.
ಕೋರಮಂಗಲದ ಆಕ್ಸಿಸ್ ಬ್ಯಾಂಕ್ನಿಂದ ಹಣ ತೆಗೆದುಕೊಂಡು ಹೋದ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಒಟ್ಟು 1.40 ಕೋಟಿ ಹಣ ಆರೋಪಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆಂದು ದೂರು ನೀಡಲಾಗಿದೆ. 19ನೇ ಕೋರಮಂಗಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.ಘಟನೆ ಸಂಬಂದ ಕೇಸ್ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಯಾವ ಸಮಯದಿಂದ ಕೆಲಸ ಮಾಡುತ್ತಿದ್ದರು ಎಷ್ಟು ಸಮಯದಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಬ್ಯಾಂಕ್ನವರಿಂದ ದಾಖಲೆ ಪಡೆದು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ
In a fresh robbery case in Bengaluru, employees of Hitachi Payment Services allegedly escaped with ₹1.37 crore meant for ATM cash loading. Two separate teams misappropriated ₹50 lakh and ₹80 lakh respectively. FIRs have been registered at Koramangala police station, but even after eight days, the accused remain at large as police continue the investigation.
17-03-26 08:45 pm
HK News Staffer
ಸತತ 4 ದಿನ ಬ್ಯಾಂಕ್ ರಜೆ ಅಲರ್ಟ್ ; EMI, ಚೆಕ್ ಕೆಲ...
17-03-26 12:09 pm
ಮಂಜೇಶ್ವರ ಮತಕ್ಷೇತ್ರ ; ಎಕೆಎಂ ಅಶ್ರಫ್ ವಿರುದ್ಧ ಮತ್...
16-03-26 05:52 pm
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
17-03-26 10:54 pm
HK News Staffer
Besant Evening College: ಬೆಸೆಂಟ್ ಸಂಧ್ಯಾ ಕಾಲೇಜಿ...
17-03-26 10:12 pm
Controversial Missionary Mohan C. Lazarus’ Ud...
17-03-26 09:19 pm
Mohan Lazarus Udupi: ತಮಿಳುನಾಡಿನ ವಿವಾದಾತ್ಮಕ ಮಿ...
17-03-26 07:35 pm
Inspector Sandesh Suspended: ಮಹಿಳೆಯರ ಜೊತೆಗೆ ದ...
17-03-26 07:16 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am