ಬ್ರೇಕಿಂಗ್ ನ್ಯೂಸ್
25-01-26 09:48 am HK News Desk ಕ್ರೈಂ
ಬೆಳಗಾವಿ, ಜ.25: ಇಡೀ ದೇಶವೇ ಬೆಚ್ಚಿಬೀಳುವಂತಹ ಅತಿ ದೊಡ್ಡ ದರೋಡೆ ಪ್ರಕರಣ ಮಹಾರಾಷ್ಟ್ರ ಗಡಿಭಾಗ ಬೆಳಗಾವಿಯಲ್ಲಿ ನಡೆದಿದೆ. ಗೋವಾದಿಂದ ಬೆಳಗಾವಿ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಕಡೆಗೆ ಕಂಟೇನರ್ನಲ್ಲಿ ನಾಲ್ಕು ನೂರು ಕೋಟಿಗೂ ಹೆಚ್ಚು ಹಣವನ್ನು ಸಾಗಾಟ ಮಾಡುತ್ತಿದ್ದಾಗ ದರೋಡೆಕೋರರು ಅಪಹರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ ನಲ್ಲಿ ಕಳೆದ ಅಕ್ಟೋಬರ್ 16ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 2025 ಅಕ್ಟೋಬರ್ 16 ರಂದು ರಾಬರಿ ನಡೆದಿದ್ದು ಕಂಟೇನರ್ ಹುಡುಕಾಟಕ್ಕಾಗಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ತನಿಖೆಗೆ ಎಸ್ಐಟಿ ರಚಿಸಿ ಆದೇಶ ಮಾಡಿದ್ದಾರೆ. ಮಹಾರಾಷ್ಟ್ರದ ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬವರಿಗೆ ಸೇರಿದ ಹಣ ಇದಾಗಿದೆ ಎಂದು ಮಾಹಿತಿ ಇದೆ.


ಬೆಳಕಿಗೆ ಬಂದಿರೋದೇ ರೋಚಕ !
ಕಂಟೇನರ್ ರಾಬರಿ ಸಂದರ್ಭದಲ್ಲಿ ಅದರಲ್ಲಿದ್ದ ಸಂದೀಪ್ ಪಾಟೀಲ ಎಂಬುವರನ್ನು ಎರಡು ತಿಂಗಳ ಕಾಲ ಗನ್ ಪಾಯಿಂಟ್ ಹಿಡಿದು ಕಿಶೋರ್ ಶೇಟ್ ಸಹಚರರು ಕಿರುಕುಳ ನೀಡಿದ್ದಾರೆ. ಈತ ನಾಸಿಕ್ ಮೂಲದವನಾಗಿದ್ದು ಒಂದೂವರೆ ತಿಂಗಳು ಒತ್ತೆಯಾಳಾಗಿಸಿ ಚಿತ್ರಹಿಂಸೆ ನೀಡಿದ್ದಾರೆ. ಕಂಟೇನರ್ ಹೈಜಾಕ್ಗೆ ನೀನೇ ಕಾರಣ ಎಂದು ಸಂದೀಪ್ಗೆ ಕಿಶನ್ ಸಹಚರರು ಕಿರುಕುಳ ನೀಡಿದ್ದಾರೆ. ನೀನೇ ಹಣ ಎಗಿರಿಸಿದ್ದೀಯಾ! 400 ಕೋಟಿ ಕೊಡದಿದ್ರೆ ಜೀವ ತೆಗೆಯುತ್ತೇವೆಂದು ಬೆದರಿಕೆ ಒಡ್ಡಿದ್ದಾರೆ. ಆದರೆ ಈ ವೇಳೆ ಕಿಶೋರ್ ಅಪಹರಣಕಾರರಿಂದ ತಪ್ಪಿಸಿಕೊಂಡು ನಾಸಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ನಾಲ್ಕನೂರು ಕೋಟಿ ಹಣವಿದ್ದ ವಾಹನ ಅಪಹರಿಸಿದ್ದಾಗಿ ಉಲ್ಲೇಖಿಸಿದ್ದಾನೆ.
ಸಂದೀಪ್ ಪಾಟೀಲ ನೀಡಿದ ದೂರಿನ ಅನ್ವಯ ಪೊಲೀಸರು ನಾಲ್ವರ ಬಂಧಿಸಿದ್ದು ತನಿಖೆ ನಡೆಸಿದ್ದಾರೆ. ಇದೇ ವೇಳೆ, ಎಸ್ಐಟಿ ರಚನೆಯಾಗಿದ್ದು ಮತ್ತೊಂದೆಡೆ ಪ್ರಕರಣ ತನಿಖೆಗೆ ಸಹಕಾರ ನೀಡುವಂತೆ ಬೆಳಗಾವಿ ಎಸ್ಪಿ ರಾಮರಾಜನ್ಗೂ ಮಹಾರಾಷ್ಟ್ರ ಪೊಲೀಸರು ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಗೋವಾ ಪೊಲೀಸರ ಸಹಕಾರವನ್ನೂ ಕೇಳಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗೆ ಈ ಹಣ ಬಳಕೆಗೆಂದು ಒಯ್ಯುತ್ತಿದ್ದ ಬಗ್ಗೆ ಮಾಹಿತಿಯಿದೆ.
In one of the biggest robbery cases ever reported in the country, a container carrying more than ₹400 crore in cash was hijacked near Belagavi, close to the Maharashtra border. The incident took place on the Goa–Belagavi highway in the Chorla Ghat area of Khanapur taluk, Belagavi district.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 11:33 am
HK News Staffer
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 03:08 pm
HK News Staffer
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm