ಬ್ರೇಕಿಂಗ್ ನ್ಯೂಸ್
12-01-26 06:28 pm Mangaluru Staffer ಕ್ರೈಂ
ಮಂಗಳೂರು, ಜ.12: ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಬೇಟೆ ಮುಂದುವರಿಸಿದ್ದು, ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಉಗಾಂಡಾ ಮೂಲದ ಮಹಿಳೆಯನ್ನು ಬೆಂಗಳೂರಿನ ಜಿಗಣಿಯಲ್ಲಿ ಬಂಧಿಸಿದ್ದಾರೆ.
ಮುಲ್ಕಿ ಮತ್ತು ಸುರತ್ಕಲ್ ಠಾಣೆಯ ಪೊಲೀಸರು ಡಿ.6 ಮತ್ತು 31ರಂದು ಎಂಡಿಎಂಎ ಡ್ರಗ್ಸ್ ಜೊತೆಗೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದರು. ಮುಲ್ಕಿ ಪೊಲೀಸರು ಕುಂದಾಪುರ ಬೈಂದೂರಿನ ನಾವುಂದ ಗ್ರಾಮದ ಮೊಹಮ್ಮದ್ ಶಿಯಾಬ್(22), ಉಳ್ಳಾಲ ನರಿಂಗಾನದ ಮೊಹಮ್ಮದ್ ನೌಶಾದ್ (29), ಮಂಗಳೂರು ಬೆಂಗ್ರೆಯ ಇಮ್ರಾನ್ (27), ಬಂಟ್ವಾಳ ಬ್ರಹ್ಮರಕೂಟ್ಲು ರಾಮಲ್ ಕಟ್ಟೆಯ ನಿಸಾರ್ ಅಹ್ಮದ್ (36) ಎಂಬವರನ್ನು ಬಂಧಿಸಿದ್ದರು. ಇವರಿಂದ 524 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳು ಕೊಲೆ, ಕೊಲೆಯತ್ನ, ಡಕಾಯಿತಿ ಪ್ರಕರಣದ ಆರೋಪಿಗಳಾಗಿದ್ದರಿಂದ ಇವರ ಮೇಲೆ ಕೆ-ಕೋಕಾ ಕಾಯ್ದೆ ಹಾಕಲಾಗಿತ್ತು.


ಸುರತ್ಕಲ್ ಪೊಲೀಸರು ಕಾಪು ಮಜೂರಿನ ಮೊಹಮ್ಮದ್ ಇಕ್ಬಾಲ್ (30) ಮತ್ತು ಪಡುಬಿದ್ರೆ ಕಂಚಿನಡ್ಕ ನಿವಾಸಿ ಶೆಹರಾಜ್ ಶಾರೂಕ್ (25) ಎಂಬವರನ್ನು ಬಂಧಿಸಿ ಅವರಿಂದ 200 ಗ್ರಾಮ್ ಎಂಡಿಎಂಎ ವಶಪಡಿಸಿದ್ದರು. ಇವರಿಗೆ ಬೆಂಗಳೂರಿನಿಂದ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಬಗ್ಗೆ ಮಾಹಿತಿ ಪಡೆದು ಮಂಗಳೂರು ಸಿಸಿಬಿ ಪೊಲೀಸರು ಬೆನ್ನು ಹತ್ತಿದ್ದರು.
ಖಚಿತ ಮಾಹಿತಿ ಆಧರಿಸಿ ಬೆಂಗಳೂರು ಹೊರವಲಯದ ಜಿಗಣಿ ಇಂಡಸ್ಟ್ರಿ ಏರಿಯಾದ ಮಧುಮಿತ್ರ ಲೇಔಟ್ ನಲ್ಲಿ ವಾಸವಿದ್ದ ಉಗಾಂಡಾ ಮೂಲದ ಮಹಿಳೆ ಜಾಲಿಯಾ ಜಲ್ವಾಂಗೋ(34) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ, ಆಕೆಯ ಬಳಿಯಿದ್ದ 4 ಕೇಜಿ ಎಂಡಿಎಂಎ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ನಾಲ್ಕು ಕೋಟಿಯೆಂದು ಪೊಲೀಸರು ಅಂದಾಜಿಸಿದ್ದಾರೆ.
ಜಿಗಣಿ ಸುತ್ತಮುತ್ತ ಕಾಡು ಪ್ರದೇಶವಿದ್ದು, ಅಲ್ಲಿಂದ ಲೊಕೇಶನ್ ಹಾಕಿ ಮಹಿಳೆ ತನ್ನ ಇರವು ತಿಳಿಯದಂತೆ ಪೆಡ್ಲರ್ ಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದಳು. ಉಗಾಂಡ ಮಹಿಳೆ 2020ರಲ್ಲಿ ಬೆಂಗಳೂರಿಗೆ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದು, ಅಕ್ರಮವಾಗಿ ಉಳಿದುಕೊಂಡಿದ್ದಳು. ಆಕೆಯನ್ನು ಬಂಧಿಸಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದರೂ, ಅವರಿಗೆ ಯಾರು, ಎಲ್ಲಿಂದ ಪೂರೈಕೆ ಮಾಡುತ್ತಾರೆಂಬ ಮಾಹಿತಿ ಇರುತ್ತಿರಲಿಲ್ಲ. ಟೆಲಿಗ್ರಾಂನಲ್ಲಿ ಮಾತ್ರ ಇವರ ಸಂಪರ್ಕ ಇರುತ್ತಿದ್ದುದರಿಂದ ಪತ್ತೆ ಆಗುತ್ತಿರಲಿಲ್ಲ.
ಮಂಗಳೂರು ಸಿಸಿಬಿ ಪೊಲೀಸರು ಕಳೆದ ಎರಡು ವರ್ಷಗಳಲ್ಲಿ ಮೂರನೇ ಬಾರಿ ಬೆಂಗಳೂರಿನ ಡ್ರಗ್ಸ್ ಕುಳವನ್ನು ಪತ್ತೆ ಮಾಡಿದ್ದಾರೆ. 2024ರ ಅಕ್ಟೋಬರ್ ನಲ್ಲಿ ಹೊಸೂರಿನಲ್ಲಿ 6 ಕೇಜಿ ಎಂಡಿಎಂಎ ಮತ್ತು 2025ರ ಮಾರ್ಚ್ ನಲ್ಲಿ ವರ್ತೂರುನಿಂದ ನೈಜೀರಿಯನ್ ಮಹಿಳೆ ಸಹಿತ 37 ಕೇಜಿ ಡ್ರಗ್ಸ್ ಪತ್ತೆ ಮಾಡಲಾಗಿತ್ತು. ಸುಮಾರು 75 ಕೋಟಿ ಮೌಲ್ಯದ ಡ್ರಗ್ಸ್ ಬೇಟೆ ರಾಜ್ಯದ ಅತಿದೊಡ್ಡ ಡ್ರಗ್ಸ್ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು.
In a major breakthrough in its ongoing crackdown on narcotics, the Mangaluru City Crime Branch (CCB) Police arrested a Ugandan national in Bengaluru for allegedly supplying drugs to peddlers in Mangaluru. The accused was apprehended in the Jigani Industrial Area, and police seized 4 kg of MDMA, estimated to be worth Rs 4 crore.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm