ಬ್ರೇಕಿಂಗ್ ನ್ಯೂಸ್
02-01-26 12:32 pm HK News Desk ಕ್ರೈಂ
ಕಾರವಾರ, ಜ.2 : ಮುಂಬೈ ಪೊಲೀಸ್ ಇನ್ಸ್ಪೆಕ್ಟರ್ ಸೋಗಿನಲ್ಲಿ ವಾಟ್ಸಪ್ ಕರೆ ಮಾಡಿದ ಸೈಬರ್ ವಂಚಕರು, ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರನ್ನು ಉಗ್ರಗಾಮಿಗಳ ಸಂಪರ್ಕ ಇರುವುದಾಗಿ ಬೆದರಿಸಿ ಬರೋಬ್ಬರಿ 1.61 ಕೋಟಿ ರೂ. ಪಂಗನಾಮ ಹಾಕಿದ್ದಾರೆ.
ಮುಂಡಗೋಡಿನ ಟಿಬೆಟಿಯನ್ ಕಾಲೋನಿ ನಿವಾಸಿ, 72 ವರ್ಷದ ಪಾಲ್ಡೆನ್ ವಂಚನೆಗೆ ಒಳಗಾದವರು. ವಾಟ್ಸಪ್ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಮಹಾರಾಷ್ಟ್ರದ ಕೋಲಾಬಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂದು ಪರಿಚಯ ಹೇಳಿದ್ದ. ಬಳಿಕ ಮುಂಬೈನಲ್ಲಿ ಅರೆಸ್ಟ್ ಆಗಿರುವ ಉಗ್ರಗಾಮಿ ಸಂಘಟನೆಯ ನಾಯಕನ ಬಳಿ ಪತ್ತೆಯಾದ ನೂರಾರು ಎಟಿಎಂ ಕಾರ್ಡ್ಗಳಲ್ಲಿ ನಿಮ್ಮ ಹೆಸರಿನ ಕಾರ್ಡ್ ಇದೆ ಎಂದು ಹೆದರಿಸಿದ್ದು, ನಿಮ್ಮ ಖಾತೆಯಿಂದ ಕೋಟಿಗಟ್ಟಲೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದ.
ಪೊಲೀಸ್ ಡ್ರೆಸ್ನಲ್ಲಿ ವಿಡಿಯೋ ಕರೆ
ವಂಚಕ ವ್ಯಕ್ತಿ ಪೊಲೀಸರ ಸಮವಸ್ತ್ರ ಧರಿಸಿ ವಿಡಿಯೋ ಕರೆ ಮಾಡಿದ್ದು ವೃದ್ಧ ಶಿಕ್ಷಕನನ್ನು ನಂಬಿಕೆ ಬರುವಂತೆ ಮಾಡಿದ್ದ. ಅಲ್ಲದೆ, ನಕಲಿ ಬ್ಯಾಂಕ್ ಸ್ಟೇಟ್ಮೆಂಟ್ ಕಳುಹಿಸಿ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣವನ್ನು 'ನ್ಯಾಷನಲ್ ಫಂಡ್'ಗೆ ಜಮಾ ಮಾಡಬೇಕು, ತನಿಖೆ ಮುಗಿದ ಮೇಲೆ ಹಣ ವಾಪಸ್ ನೀಡಲಾಗುವುದು ಎಂದು ನಂಬಿಸಿದ್ದ. ಈ ಬಗ್ಗೆ ಯಾರ ಬಳಿಯೂ ತಿಳಿಸದಂತೆ ಬೆದರಿಸಿದ್ದು, ನೀವು ಡಿಜಿಟಲ್ ಅರೆಸ್ಟ್ ನಲ್ಲಿದ್ದೀರಿ, ಪ್ರತಿ ಎರಡು ಗಂಟೆಗೊಮ್ಮೆ ವಾಟ್ಸಪ್ ಮೂಲಕ ವರದಿ ನೀಡುವಂತೆ ಸೂಚಿಸಿದ್ದ.
ಸಾಲ ಮಾಡಿ ಹಣ ಕೊಟ್ಟ ನಿವೃತ್ತ ಶಿಕ್ಷಕ
ವಂಚಕನ ಮಾತನ್ನು ನಂಬಿದ ಪಾಲ್ಡೆನ್ ತಮ್ಮ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಎಫ್ಡಿ ಹಣ ಹಾಗೂ ಸಂಬಂಧಿಕರಿಂದ ಸಾಲ ಪಡೆದು ಸುಮಾರು 1.61 ಕೋಟಿ ರೂಪಾಯಿಯನ್ನು ಹಂತ ಹಂತವಾಗಿ ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಕೊನೆಗೆ, ಹಾಕಿದ ಹಣ ಹಿಂತಿರುಗಿಸದೇ ಇದ್ದಾಗ ಮೋಸ ಹೋಗಿರುವುದು ತಿಳಿದುಬಂದಿದ್ದು ಕಾರವಾರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
In a shocking case of cybercrime, fraudsters posing as Mumbai Police officers extorted ₹1.61 crore from a 72-year-old retired teacher from the Tibetan Colony in Mundgod by falsely claiming he was linked to terrorists and under “digital arrest.”
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
01-11-26 10:49 pm
HK News Desk
ಮಂಗಳೂರಿನ ಮಂಜುಗಡ್ಡೆ ತಯಾರಿಕಾ ಘಟಕಕ್ಕೆ ಆಹಾರ ಸುರಕ್...
01-11-26 10:13 pm
ದೇಶದಲ್ಲಿ ಆಡಳಿತ ಬದಲಿಸುವುದಕ್ಕೇ ನಮ್ಮ ಹೋರಾಟ ; ರಂಗ...
31-10-26 09:40 pm
14 ವರ್ಷಗಳ ಬಳಿಕ ಸೌಜನ್ಯ ಕೇಸ್ ಮರುತನಿಖೆ ; ಮೃತದೇಹ...
31-10-26 05:19 pm
ಉದ್ಘಾಟನೆಗೂ ಮುನ್ನವೇ ಇಂದಿರಾ ಕ್ಯಾಂಟೀನ್ ಹೆದ್ದಾರಿಗ...
31-10-26 02:25 pm
01-11-26 04:08 pm
HK News Staffer
ಪ್ರೇಮ ಪ್ರಕರಣ ; ಪ್ರೀತಿಸುತ್ತಿದ್ದ ಯುವತಿ ಮನೆಗೆ ಕರ...
31-10-26 01:16 pm
ಕಾರವಾರದ ಮುದಗಾ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ:...
31-10-26 01:05 pm
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್ ; ಕಾಂಗ್ರೆ...
30-10-26 11:01 pm
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm