ಬ್ರೇಕಿಂಗ್ ನ್ಯೂಸ್
26-12-25 03:31 pm HK News Desk ಕ್ರೈಂ
ಢಾಕಾ, ಡಿ.26 : ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹಿಂಸೆ ಮುಂದುವರಿದಿದ್ದು ಉದ್ರಿಕ್ತರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ (26) ಎಂಬಾತನನ್ನು ಹಾಡಹಗಲೇ ಹೊಡೆದು ಸಾಯಿಸಿದೆ.
ರಾಜ್ ಬರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು 29 ವರ್ಷದ ಅಮೃತ್ ಮಂಡಲ್ ನನ್ನು ಮುಸ್ಲಿಮರ ಗುಂಪು ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಅಮೃತ್ ಮಂಡಲ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿದ್ದ. ಅಮೃತ್ ಮಂಡಲ್ ಹಫ್ತಾ ವಸೂಲಿಗೆ ತೆರಳಿದ್ದ ಸಂದರ್ಭದಲ್ಲಿ ಸ್ಥಳೀಯರು ಗುಂಪು ಸೇರಿ ಥಳಿಸಿದ್ದಾರೆ. ನಂತರ ಹಿಂಸೆ ನೀಡಿ ಜೀವ ತೆಗೆದಿದ್ದಾರೆ.
ಪೊಲೀಸರ ಪ್ರಕಾರ, ಅಮೃತ್ ಮಂಡಲ್ "ಸಾಮ್ರಾಟ್ ವಾಹಿನಿ" ಎಂಬ ಹೆಸರಿನಲ್ಲಿ ಸ್ಥಳೀಯವಾಗಿ ಗ್ಯಾಂಗ್ ಕಟ್ಟಿಕೊಂಡಿದ್ದ. ಇದರ ಭಾಗವಾಗಿ ಸ್ಥಳೀಯರ ಮನೆಗಳಿಗೆ ಹೋಗಿ ಕಲೆಕ್ಷನ್ ಮಾಡುತ್ತಿದ್ದ. ಶಹೀದುಲ್ ಇಸ್ಲಾಂ ಎಂಬವರ ಮನೆಗೆ ತನ್ನ ತಂಡದೊಂದಿಗೆ ಎಂದಿನ ವಸೂಲಿಗೆ ಬಂದಿದ್ದ. ಈ ವೇಳೆ, ಸ್ಥಳೀಯರು ಒಟ್ಟು ಸೇರಿ ಪ್ರತಿ ದಾಳಿ ನಡೆಸಿ ಹೊಡೆದು ಹಾಕಿದ್ದಾರೆ. ಆತನ ಸಹಚರರು ಸ್ಥಳದಿಂದ ಓಡಿ ಪರಾರಿಯಾಗಿದ್ದರೆ, ಸೆಲೀಂ ಎಂಬ ಒಬ್ಬನನ್ನು ವಿದೇಶಿ ಪಿಸ್ತೂಲ್ ಸಹಿತ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹೀಗಾಗಿ ಅಮೃತ್ ಮಂಡಲ್ ಕೊಲೆ ಕೋಮು ದ್ವೇಷದಿಂದ ಆಗಿರುವುದಲ್ಲ. ಆತನ ಮೇಲೆ ಕೊಲೆ, ಸುಲಿಗೆ ಸೇರಿ ಹಲವಾರು ಕೇಸುಗಳಿದ್ದವು. ಡಕಾಯಿತಿ ವೇಳೆ ಕೊಲೆಯಾಗಿದ್ದಾನೆ, ಈ ಕೃತ್ಯವನ್ನು ಕೋಮು ದ್ವೇಷದ ಕೊಲೆಯೆಂದು ಬಿಂಬಿಸಬೇಡಿ ಎಂದು ಹಂಗಾಮಿ ಸರ್ಕಾರದ ನಾಯಕ ಮಹಮ್ಮದ್ ಯೂನುಸ್ ಹೇಳಿದ್ದಾರೆ. ಆದಾಗ್ಯೂ ಈ ರೀತಿಯ ಕೊಲೆಯನ್ನು ಅವರು ಖಂಡಿಸಿದ್ದು ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಇದರ ನಡುವೆಯೇ ಚಿತ್ತಗಾಂಗ್ ಬಳಿಯ ರಯೋಜನ್ ಪ್ರದೇಶದಲ್ಲಿ ಹಿಂದೂ ಕುಟುಂಬದ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಐದು ದಿನಗಳಲ್ಲಿ ರಯೋಜನ್ ಪ್ರದೇಶದಲ್ಲಿ ಏಳು ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರು ಇಲ್ಲಿಯವರೆಗೆ ಐವರು ಶಂಕಿತರನ್ನು ಬಂಧಿಸಿದ್ದಾರೆ.
ಕಳೆದ ವಾರ ಮೈಮೆನ್ಸಿಂಗ್ ನಗರದಲ್ಲಿ 28 ವರ್ಷದ ಹಿಂದು ಯುವಕ ದೀಪು ಚಂದ್ರ ದಾಸ್ ನನ್ನು ನಡು ರಸ್ತೆಯಲ್ಲೇ ಹೊಡೆದು ಸಾಯಿಸಲಾಗಿತ್ತು. ಇದರ ಬೆನ್ನಲ್ಲೇ ಬಾಂಗ್ಲಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಭಾರೀ ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಘಟನೆ ಸಂಬಂಧಿಸಿ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ.
Tension continues to rise in Bangladesh as another Hindu youth, Amrit Mandal alias Samrat (26), was brutally beaten to death in Rajbari district. Though the incident sparked allegations of a communal attack, the interim government led by Muhammad Yunus has clarified that the killing was not communal, but linked to criminal activities and extortion.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 11:33 am
HK News Staffer
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 03:08 pm
HK News Staffer
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm