ಬ್ರೇಕಿಂಗ್ ನ್ಯೂಸ್
19-11-25 07:55 pm Mangalore Correspondent ಕ್ರೈಂ
ಮಂಗಳೂರು, ನ.19 : 19 ವರ್ಷಗಳ ಹಿಂದಿನ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಹಲವಾರು ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅಬ್ದುಲ್ ಸಲಾಂ ಅಡ್ಡೂರು (47) ಎಂಬಾತನನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
2006ರ ಡಿಸೆಂಬರ್ 1ರಂದು ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಹೊಸಬೆಟ್ಟು ಬಳಿ ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ @ ಅಡ್ಡೂರು ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು ನಿವಾಸಿ ಅಬ್ದುಲ್ ಸಲಾಂ ಅಡ್ಡೂರು ಎಂಬ ಸಹೋದರರು ಅಡ್ಡೂರ್ ಟಿಬೇಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ ಎರಡು ದಿನ ಮನೆಯಲ್ಲಿರಿಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿ ನಂತರ ಕಬೀರ್ ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದರು.
ಅಬ್ದುಲ್ ಸಲಾಂ ಅಡ್ಡೂರು ಕೃತ್ಯ ನಡೆದ ಮೂರು ತಿಂಗಳ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಸದ್ರಿ ಆರೋಪಿತ ಪ್ರಕರಣದಲ್ಲಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದರಿಂದ ಪೊಲೀಸರು ಆತನ ಮೇಲೆ ದೋಷಾರೋಪ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸುಮಾರು 19 ವರ್ಷಗಳಿಂದ ದಸ್ತಗಿರಿಗೆ ಸಿಗದೇ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಸದ್ರಿ ಆರೋಪಿ ಬಜಪೆ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ತಿಳಿದು ಸುರತ್ಕಲ್ ಪೊಲೀಸರು ನ.18ರಂದು ಸಂಜೆ 8 ಗಂಟೆಗೆ ಬಜಪೆ ಕಿನ್ನಿಪದವು ಬಳಿ ವಶಕ್ಕೆ ಪಡೆದಿದ್ದಾರೆ. 2007ನೇ ಇಸವಿಯಲ್ಲಿ ಪಾಸ್ ಪೋರ್ಟ್ ಮಾಡಿ ಕೆಲವು ವರ್ಷಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಇತ್ತೀಚೆಗೆ ವಾಪಸ್ ಬಂದಿದ್ದ. ಅಡ್ಡೂರಿನಲ್ಲಿರುವ ತನ್ನ ಮನೆಯನ್ನು ನೆಲಸಮಗೊಳಿಸಿ ಅಲ್ಲಿಂದ ಬಜಪೆಯ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ.
ಈತನ ಸಹೋದರ ಅಡ್ಡೂರು ಲತೀಫ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂಧಿಸಿದ್ದು ಉಳಿದ 11 ಜನ ಆರೋಪಿಗಳು ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಅಬ್ದುಲ್ ಸಲಾಂ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಬಜಪೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಈತನ ಮೇಲೆ ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್ ಹೊರಡಿಸಿದ್ದು ಸುರತ್ಕಲ್ ಠಾಣೆಯಲ್ಲಿ ಕಲಂ 209 ಬಿಎನ್.ಎಸ್ ರಂತೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ರಿ ಆರೋಪಿ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪಿಎಸ್.ಐ ರಘುನಾಯಕ್ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ ಪತ್ತೆಯ ಬಗ್ಗೆ ಭಾಗವಹಿಸಿರುತ್ತಾರೆ.
In a major breakthrough in the 19-year-old Sukhananda Shetty murder case, the Surathkal police have arrested Abdul Salam Addoor (47), who had been absconding abroad for several years after allegedly sheltering the prime accused.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
27-06-26 10:54 am
HK News Staffer
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm