ಬ್ರೇಕಿಂಗ್ ನ್ಯೂಸ್
14-11-25 05:32 pm HK News Desk ಕ್ರೈಂ
ಬೆಳಗಾವಿ, ನ.14 : ಅಮೆರಿಕ ನಾಗರಿಕರ ಮೊಬೈಲ್ ಹಾಗೂ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ವಂಚಿಸುತ್ತಿದ್ದ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಬೆಳಗಾವಿ ಸೈಬರ್ ಅಪರಾಧ ವಿಭಾಗದ ಪೊಲೀಸರು 33 ಆರೋಪಿಗಳನ್ನು ಬಂಧಿಸಿದ್ದು, 37 ಲ್ಯಾಪ್ಟಾಪ್, ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಜಂ ನಗರದ ಸರ್ಕಲ್ ಬಳಿಯ ಕುಮಾರ್ ಹಾಲ್ನಲ್ಲಿ ಅನಧಿಕೃತ ಕಾಲ್ ಸೆಂಟರ್ ನಿರ್ವಹಿಸುತ್ತಿರುವ ಕುರಿತು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್ಡಿ) ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ದಾಳಿ ನಡೆಸಿ, ಆನ್ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಜನರಿಗೆ ವಂಚಿಸಿ ಹಣ ವರ್ಗಾಯಿಸಿಕೊಳ್ಳುತ್ತಿದ್ದ ಜಾಲ ಭೇದಿಸಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ರಾವ್ ಭೋರಸೆ ತಿಳಿಸಿದ್ದಾರೆ.



ಆರೇಳು ತಿಂಗಳಿಂದ ಈ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು, 33 ಜನ ಕೆಲಸ ಮಾಡುತ್ತಿದ್ದರು. ಇವರು ಅಮೆರಿಕದ ಪ್ರಜೆಗಳಿಗೆ ಕರೆ ಮಾಡಿ ಶೇರ್ ಟ್ರೇಡಿಂಗ್, ಹೊಸ ಮೊಬೈಲ್ ಆಫರ್ ಸೇರಿ ನಾನಾ ಆಮಿಷ ಒಡ್ಡಿ ಹಣ ದೋಚುತ್ತಿದ್ದರು. ದಾಳಿ ವೇಳೆ ಪತ್ತೆಯಾದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಪರಿಶೀಲಿಸಿದಾಗ ವಿಶೇಷ ಸಾಫ್ಟ್ವೇರ್ ಬಳಸಿ ಅಮೆರಿಕದ ಅಸಂಖ್ಯಾತ ಮೊಬೈಲ್ಗಳಿಗೆ ಕರೆ ಮಾಡಿರುವುದು ಗೊತ್ತಾಗಿದೆ. ಇವರು ತಮ್ಮ ನೈಜ ಲೊಕೇಷನ್ ಮಾಹಿತಿ ಮರೆಮಾಚಿ ನಕಲಿ ಲೊಕೇಷನ್ ತೋರಿಸುವ ಸಾಫ್ಟ್ವೇರ್ ಬಳಕೆ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಹೊರ ರಾಜ್ಯದವರು
ಬಂಧಿತ ಆರೋಪಿಗಳು 25ರಿಂದ 35 ವರ್ಷದವರಾಗಿದ್ದು, ಅಸ್ಸಾಂ, ನಾಗಾಲ್ಯಾಂಡ್, ರಾಜಸ್ಥಾನ, ಉತ್ತರಾಖಂಡ, ಉತ್ತರ ಪ್ರದೇಶ ಸೇರಿ ಇತರ ರಾಜ್ಯದವರಿದ್ದಾರೆ. ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 37 ಲ್ಯಾಪ್ಟಾಪ್, 1.50 ಲಕ್ಷ ರೂ. ಮೌಲ್ಯದ 37 ಮೊಬೈಲ್, 10 ಸಾವಿರ ರೂ. ಮೌಲ್ಯದ 3 ವೈಫೈ ರೂಟರ್ ವಶಕ್ಕೆ ಪಡೆಯಲಾಗಿದೆ. ಸಿಐಡಿ ನೆರವು ಪಡೆದು ಅಮೆರಿಕದಲ್ಲಿ ದಾಖಲಾದ ಪ್ರಕರಣಗಳ ಪರಿಶೀಲನೆಗೆ ಕ್ರಮ ವಹಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
In a major crackdown, the Belagavi Cyber Crime Police raided an illegal call centre that was cheating US citizens through online trading and investment scams. A total of 33 accused have been arrested, and 37 laptops and multiple mobile phones have been seized.a
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
27-06-26 10:54 am
HK News Staffer
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm