ಬ್ರೇಕಿಂಗ್ ನ್ಯೂಸ್
19-10-25 01:26 pm Bangalore Correspondent ಕ್ರೈಂ
ಬೆಂಗಳೂರು, ಅ 19 : ಪ್ರತಿಷ್ಠಿತ ಖಾಸಗಿ ಎಂಜಿನಿಯರ್ ಕಾಲೇಜೊಂದರಲ್ಲಿ ಓದುತ್ತಿದ್ದ ಸೀನಿಯರ್ ವಿದ್ಯಾರ್ಥಿನಿ ಮೇಲೆ ಅದೇ ಕಾಲೇಜಿನ ಜೂನಿಯರ್ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದು, ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಲೇಜಿನ ಶೌಚಾಲಯಕ್ಕೆ ಬಲವಂತಾಗಿ ಎಳೆದೊಯ್ದು ಅತ್ಯಾಚಾರ ಎಸಗಿದ್ದ ಜೀವನ್ ಗೌಡನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಟೋಬರ್ 10 ರಂದು ಘಟನೆ ನಡೆದಿದ್ದು, ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿ ಐದು ದಿನಗಳ ನಂತರ, ಅಂದರೆ ಅಕ್ಟೋಬರ್ 15 ರಂದು ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?
ಸಂತ್ರಸ್ತೆ ಮತ್ತು ಆರೋಪಿ ಜೀವನ್ ಗೌಡ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಪರಸ್ಪರ ಪರಿಚಿತರು ಹೌದು. ಆದರೆ, ಜೀವನ್ ಗೌಡ ಕೆಲವು ವಿಷಯಗಳಲ್ಲಿ ಬ್ಯಾಕ್‌ಲಾಗ್ ಇದ್ದುದರಿಂದ ಅವನ ಓದು ಒಂದು ವರ್ಷ ತಡವಾಗಿತ್ತು. ಅಕ್ಟೋಬರ್ 10ರಂದು ಬೆಳಿಗ್ಗೆ 8.55ಕ್ಕೆ ತರಗತಿಗೆ ತರಗತಿಗೆ ಸಂತ್ರಸ್ತೆ ಹಾಜರಾಗಿದ್ದರು. ಜೀವ್‌ನನಿಂದ ಸಂತ್ರಸ್ತೆ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಊಟದ ವಿರಾಮದ ಸಮಯದಲ್ಲಿ ತೆಗೆದುಕೊಳ್ಳುತ್ತೇನೆ ಎಂದು ಆಕೆ ಹೇಳಿದ್ದಾಳೆ
ಜೀವನ್ ಗೌಡ ಊಟದ ಸಮಯದಲ್ಲಿ ಸಂತ್ರಸ್ತೆಗೆ ಹಲವು ಬಾರಿ ಕರೆ ಮಾಡಿ, ಆರ್ಕಿಟೆಕ್ಚರ್ ಬ್ಲಾಕ್ ಬಳಿ, ಏಳನೇ ಮಹಡಿಯಲ್ಲಿ ಭೇಟಿಯಾಗಲು ಹೇಳಿದ್ದಾನೆ. ಅದರಂತೆ 7ನೇ ಮಹಡಿ ಪಿಜಿ ಬ್ಲಾಕ್‌ಗೆ ಇಬ್ಬರು ಹೋಗುತ್ತಾರೆ. ಅಲ್ಲಿ ಸಂತ್ರಸ್ತೆಗೆ ಆರೋಪಿ ಮುತ್ತು ನೀಡಲು ಯತ್ನಿಸಿದ್ದಾನೆ. ಅದರಿಂದ ತಪ್ಪಿಸಿಕೊಳ್ಳಲು ಆಕೆ ಲಿಫ್ಟ್ ಬಳಸಿ ಹೋಗಲು ಪ್ರಯತ್ನಿಸಿದಾಗ, ಜೀವನ್ ಗೌಡ ಆಕೆಯನ್ನು ಹಿಂಬಾಲಿಸಿ ಆರನೇ ಮಹಡಿಯಲ್ಲಿದ್ದ ಪುರುಷರ ಶೌಚಾಲಯಕ್ಕೆ ಬಲವಂತವಾಗಿ ಎಳೆದೊಯ್ದು, ಚಿಲಕ ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಆಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಜೀವನ್ ಗೌಡ ಮತ್ತು ಸಂತ್ರಸ್ತೆ ಶೌಚಾಲಯದಲ್ಲಿದ್ದಾಗ ಆಕೆಯ ರಿಂಗ್ ಆಗಿದೆ. ಆದರೆ, ಆತ ಫೋನ್ ಕಿತ್ತುಕೊಂಡಿದ್ದಾನೆ. ಈ ಅತ್ಯಾಚಾರವು ಮಧ್ಯಾಹ್ನ 1:30 ರಿಂದ 1:50 ರೊಳಗೆ ನಡೆದಿದೆ ಎನ್ನಲಾಗಿದೆ. ಘಟನೆಯ ನಂತರ, ಸಂತ್ರಸ್ತೆ ತನ್ನ ಇಬ್ಬರು ಸ್ನೇಹಿತೆಯರಿಗೆ ವಿಷಯ ತಿಳಿಸಿದ್ದಾಳೆ. ಅವರು ಆಕೆಗೆ ಸಮಾಧಾನ ಪಡಿಸಿದ್ದಾರೆ. ಆದರೆ ಆರೋಪಿ ಜೀವನ್ ಗೌಡ ನಂತರ ಸಂತ್ರಸ್ತೆಗೆ ಕರೆ ಮಾಡಿ, ʻಮಾತ್ರೆ ಬೇಕೇ?ʼ ಎಂದು ಕೇಳಿದ್ದನೆಂದು ಕೂಡ ಆಕೆ ದೂರಿನಲ್ಲಿ ತಿಳಿಸಿದ್ದಾನೆ
ಸಂತ್ರಸ್ತೆ ಮೊದಲು ದೂರು ನೀಡಲು ಹಿಂಜರಿದ್ದಳು. ಏಕೆಂದರೆ ಆಕೆ ತುಂಬಾ ನೊಂದಿದ್ದಳು ಮತ್ತು ಭಯಗೊಂಡಿದ್ದಳು. ನಂತರ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರೊಂದಿಗೆ ಹನುಮಂತನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಸದ್ಯ ಘಟನಾ ಸ್ಥಳದ ಮಹಜರು ಕಾರ್ಯ ಪೊಲೀಸರು ನಡೆಸಿದ್ದಾರೆ.
ಕಾಲೇಜಿನ ಮಹಡಿಯಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಹೀಗಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಮಸ್ಯೆಯಾಗಬಹುದು. ಆದರೂ, ಫೋರೆನ್ಸಿಕ್ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹನುಮಂತನಗರ ಪೊಲೀಸರು ತಿಳಿಸಿದ್ದಾರೆ.
In a shocking incident, a senior female student of a reputed private engineering college in Bengaluru was allegedly raped inside a campus restroom by her junior classmate. The accused, Jeevan Gowda, has been arrested by Hanumanthanagar Police and remanded to judicial custody.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm