ಬ್ರೇಕಿಂಗ್ ನ್ಯೂಸ್
07-09-25 03:34 pm Mangalore Correspondent ಕ್ರೈಂ
ಮಂಗಳೂರು, ಸೆ.7 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನಾಮಿಕ ವ್ಯಕ್ತಿ ಫೋನ್ ಕರೆ ಮಾಡಿ ಟರ್ಮಿನಲ್ ಬಿಲ್ಡಿಂಗ್ ಖಾಲಿ ಮಾಡಬೇಕು, ಇಲ್ಲವಾದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದು ಫೋನ್ ಕರೆ ಆಧರಿಸಿ ತನಿಖೆ ನಡೆಸಿದ ಬಜ್ಪೆ ಠಾಣೆ ಪೊಲೀಸರು ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಿವಾಸಿ ಸಸಿಕುಮಾರ್ (38) ಎಂಬಾತ ಬಂಧಿತ. ವೆಲ್ಲೂರ್ ನಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಫೋನ್ ಕರೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಆ.29ರಂದು ರಾತ್ರಿ ಮಂಗಳೂರು ಏರ್ಪೋರ್ಟ್ ಗೆ ಫೋನ್ ಕರೆ ಬಂದಿದ್ದು ಡ್ಯೂಟಿಯಲ್ಲಿದ್ಧ ಟರ್ಮಿನಲ್ ಮ್ಯಾನೇಜರ್ ಬಜಪೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಮೊ.ನಂ 156/2025 ಕಲಂ 351(2), 351(3) BNS ಮತ್ತು ವಿಮಾನ ನಿಲ್ದಾಣಗಳ ಭದ್ರತೆಗೆ ಆತಂಕ ಒಡ್ಡುವುದನ್ನು ನಿರ್ಬಂಧಿಸುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ವೆಲ್ಲೂರ್ ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಸರ್ಚ್ ಮಾಡಿ ಕರೆ ಮಾಡಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾನೆ. ಅದೇ ತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಫೋನ್ ಮಾಡಿ ಟರ್ಮಿನಲ್ ಬಿಲ್ಡಿಂಗ್ ನ್ನು ಖಾಲಿ ಮಾಡಲು ತಿಳಿಸಿ ಖಾಲಿ ಮಾಡದೆ ಹೋದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾನೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
A major security scare gripped Mangaluru International Airport after an anonymous caller threatened to blow up the terminal building if it was not evacuated. Swift investigation by Bajpe police led to the arrest of a suspect from Tamil Nadu’s Vellore district. The arrested person has been identified as Sasikumar (38), a resident of Vellore. During interrogation, Sasikumar confessed to making the threatening call. He revealed that he had searched online for mobile numbers of airports across the country and had issued similar threats to several airports before targeting Mangaluru.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 09:46 pm
HK News Staffer
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm