ಬ್ರೇಕಿಂಗ್ ನ್ಯೂಸ್
08-08-25 09:44 pm Mangalore Correspondent ಕ್ರೈಂ
ಮಂಗಳೂರು, ಆ.8 : ನಗರದ ಜ್ಯೋತಿ – ಹಂಪನಕಟ್ಟೆಯ ಮಧ್ಯದಲ್ಲಿರುವ ಮಸಾಜ್ ಪಾರ್ಲರ್ ಮಾಲೀಕನೊಬ್ಬ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಗಿರಾಕಿಯೊಂದಿಗೆ ಮಸಾಜ್ ಹೆಸರಲ್ಲಿ ದೇಹ ಸುಖವನ್ನೂ ನೀಡುವಂತೆ ಒತ್ತಾಯಿಸಿದ ಬಗ್ಗೆ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆಯೊಬ್ಬರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನಗಾದ ನೋವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ, ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಬರ್ಕೆ ಪೊಲೀಸರಿಗೂ ದೂರು ನೀಡಿದ್ದಾರೆ.
ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದು ಒಂದೂವರೆ ತಿಂಗಳಿನಿಂದ ಹಂಪನಕಟ್ಟೆಯ ಮಸಾಜ್ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಪುರುಷರಿಗೂ ಮಸಾಜ್ ಮಾಡಬೇಕು, ಕೊನೆಯಲ್ಲಿ ಸಂತೋಷದಿಂದ ಆತ ಹೊರ ಹೋಗುವಂತೆ ಮಾಡಬೇಕು. ಇದಕ್ಕಾಗಿ 500ರಿಂದ ಒಂದು ಸಾವಿರ ರೂ. ಹೆಚ್ಚುವರಿ ಚಾರ್ಜ್ ಮಾಡುವಂತೆ ನನಗೆ ಸೂಚಿಸಿದ್ದರು. ಆಗಸ್ಟ್ 6ರಂದು ಪಾರ್ಲರ್ ಮಾಲಕನಿಗೆ ಬೇಕಾದ ವ್ಯಕ್ತಿಯೊಬ್ಬ ಬಂದಿದ್ದು ಆ ವ್ಯಕ್ತಿಗೆ ಮಸಾಜ್ ಮಾಡುವಂತೆ ನನಗೆ ಹೇಳಿದ್ದರು. ನಾನು ಮಸಾಜ್ ಮಾಡಿದ್ದು, ಆನಂತರ ಆ ವ್ಯಕ್ತಿ ದೈಹಿಕ ಸಂಪರ್ಕ ಮಾಡುವಂತೆ ಕೇಳಿದ್ದಾನೆ. ನಾನು ಅದಕ್ಕೆ ನಿರಾಕರಿಸಿದ್ದು ಕೊಠಡಿಯಿಂದ ಹೊರಗೆ ಬಂದಿದ್ದೆ.
ಆದರೆ ಮಸಾಜ್ ಪಾರ್ಲರ್ ಮಾಲಕ ನನಗೆ ಆ ರೀತಿ ಮಾಡದ್ದಕ್ಕೆ ಹೊಡೆದು ಹಲ್ಲೆ ನಡೆಸಿದ್ದು, ನನ್ನ ಬಟ್ಟೆಗಳನ್ನು ತೆಗೆಸಿ ಅರೆನಗ್ನ ಫೋಟೋಗಳನ್ನು ತೆಗೆದಿದ್ದಾರೆ. ಆನಂತರ ನಿನ್ನ ಗಂಡನಿಗೂ ಈ ಫೋಟೋ ತೋರಿಸುತ್ತೇನೆ. ನಿನ್ನ ಲೈಫ್ ಬರ್ಬಾದ್ ಮಾಡುತ್ತೇನೆಂದು ಬೆದರಿಸಿದ್ದಾರೆ. ಆನಂತರ ಗಂಡನನ್ನು ಕರೆದು ಫೋಟೋಗಳನ್ನು ತೋರಿಸಿ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ನಗರದ ಹಲವು ಕಡೆ ಮಸಾಜ್ ಪಾರ್ಲರ್ ಗಳಲ್ಲಿ ಯುವತಿಯರು ಮಾಲಕರಿಂದ ಇದೇ ರೀತಿಯ ಕಿರುಕುಳ ಅನುಭವಿಸುತ್ತಿದ್ದಾರೆ. ಪುರುಷರೊಂದಿಗೆ ಮಸಾಜ್ ಮಾಡುವಂತೆ ಒತ್ತಡ ಹೇರಿ ದೈಹಿಕ ಕಿರುಕುಳವನ್ನೂ ನೀಡುತ್ತಾರೆ. ಯಾರು ಕೂಡ ಇದನ್ನು ಹೊರಗೆ ಹೇಳಲು ಮುಂದೆ ಬರುವುದಿಲ್ಲ.
ನನ್ನ ಬಳಿಯಿಂದ 30 ಸಾವಿರ ಕೊಡಬೇಕೆಂದು ಮಾಲಕ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಿದ ಮಹಿಳೆ, ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಕಮಿಷನರಿಗೂ ದೂರು ಹೇಳಿದ್ದೇನೆ. ಮಾಲಕನ ವಿರುದ್ಧ ಕ್ರಮ ಜರುಗಿಸಿಲ್ಲ. ಪ್ರತಿಭಾ ಕುಳಾಯಿ ಅವರು ಬೆಂಬಲಿಸಿದ್ದರಿಂದ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದರು.
ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಾತನಾಡಿ, ಮಸಾಜ್ ಪಾರ್ಲರ್ ನಲ್ಲಿ ಪುರುಷನಿಗೆ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆಂದು ಈ ಮಹಿಳೆ ನನ್ನ ಬಳಿ ದೂರು ಹೇಳಿದ್ದರು. ಪಾರ್ಲರ್ ಮಾಲಕ ಈಕೆಯ ಅರೆನಗ್ನ ಫೋಟೋಗಳನ್ನು ತೆಗೆದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದಾನೆ. ವಿಚಿತ್ರ ಅಂದರೆ ಆಗಸ್ಟ್ 6ರಂದೇ ಬಂದರು ಠಾಣೆಗೆ ದೂರು ನೀಡಿದ್ದರೂ ಈವರೆಗೂ ಎಫ್ಐಆರ್ ರಿಜಿಸ್ಟರ್ ಮಾಡಿಲ್ಲ. ಆರೋಪಿ ವಿರುದ್ಧ ಕ್ರಮವನ್ನೂ ಜರುಗಿಸಿಲ್ಲ ಎಂದು ಹೇಳಿದರು.
A young woman working at a massage parlour in the Jyothi–Hampankatta area of the city has accused the owner of forcing her to provide sexual services to male customers under the guise of massage. She made the allegations publicly at the Mangaluru Press Club and has also filed complaints with the city’s Police
11-08-25 11:18 am
Bangalore Correspondent
ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಕೊಡ...
10-08-25 09:12 pm
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
11-08-25 11:49 am
Mangalore Correspondent
Kudla Rampage YouTuber, Ajay Anchan Case: ಬೈಕ...
11-08-25 11:38 am
ಹೊಸ್ತಿಲು ಬರೆದು, ಪಾತ್ರೆ ತೊಳೆದು, ದೇವರ ಸ್ತೋತ್ರ ಹ...
10-08-25 04:32 pm
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm