ಬ್ರೇಕಿಂಗ್ ನ್ಯೂಸ್
23-05-25 01:25 pm HK News Desk ಕ್ರೈಂ
ಲಕ್ನೋ, ಮೇ 23 : ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ನಡೆಸುತ್ತ ಭಾರತದ ವಿರುದ್ಧ ದಾಳಿ ಮಾಡುವಂತೆ ಪಾಕಿಸ್ತಾನಿ ಉಗ್ರರಿಗೆ ಪ್ರೇರಣೆ ನೀಡುತ್ತಿದ್ದ ವಾರಣಾಸಿಯ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಏಂಟಿ ಟೆರರಿಸ್ಟ್ ಸ್ಕ್ವಾಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ವ್ಯಕ್ತಿಯನ್ನು ತುಫೈಲ್ ಎಂದು ಗುರುತಿಸಲಾಗಿದೆ.
ಪಾಕಿಸ್ತಾನದ ಹಲವು ಪ್ರಜೆಗಳ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದುದಲ್ಲದೆ, ದೆಹಲಿ, ಉತ್ತರ ಪ್ರದೇಶ ಆಸುಪಾಸಿನ ಮಹತ್ವದ ಪ್ರದೇಶಗಳ ಫೋಟೋಗಳನ್ನು ವಾಟ್ಸಪ್ ನಲ್ಲಿ ಷೇರ್ ಮಾಡಿಕೊಂಡಿದ್ದ. ರಾಜ್ ಘಾಟ್, ನಮೋ ಘಾಟ್, ಗ್ಯಾನವಾಪಿ, ರೈಲ್ವೇ ನಿಲ್ದಾಣ, ಕೆಂಪು ಕೋಟೆಯ ಚಿತ್ರ ಮತ್ತು ಲೊಕೇಶನ್ ಅನ್ನು ವಾಟ್ಸಪ್ ನಲ್ಲಿ ಷೇರ್ ಮಾಡಿದ್ದು ಇದೇ ಮಾಹಿತಿ ಆಧರಿಸಿ ಪೊಲೀಸರು ತುಫೈಲ್ ನನ್ನು ಬಂಧಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಈತ ತನ್ನ ಮೊಬೈಲ್ ನಲ್ಲಿ ಪಾಕಿಸ್ತಾನಿ ಪ್ರಜೆಗಳೊಂದಿಗೆ ಹಲವಾರು ವಾಟ್ಸಪ್ ಗ್ರೂಪ್ ರಚಿಸಿದ್ದು, ಮತ್ತು ಅವರನ್ನು ಗ್ರೂಪಿನಲ್ಲಿ ಸೇರಿಸಿಕೊಂಡಿದ್ದು ಪತ್ತೆಯಾಗಿದೆ.
ಪಾಕಿಸ್ತಾನದ ಉಗ್ರವಾದಿ ಸಂಘಟನೆ ತೆಹ್ರೀಕ್ ಇ-ಲಬ್ಬೈಕ್ ಮುಖ್ಯಸ್ಥ ಮೌಲಾನಾ ಸಾದ್ ರಿಜ್ವಿ ಮಾಡುತ್ತಿದ್ದ ವಿಡಿಯೋಗಳನ್ನು ವಾರಣಾಸಿಯಲ್ಲಿ ವಾಟ್ಸಪ್ ಗ್ರೂಪ್ ಗಳಲ್ಲಿ ಷೇರ್ ಮಾಡುತ್ತಿದ್ದ. ಇದಲ್ಲದೆ, ವಾಟ್ಸಪ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಷೇರ್ ಮಾಡುತ್ತಿದ್ದ. ಬಾಬ್ರಿ ಮಸೀದಿ ಒಡೆದಿದ್ದಕ್ಕೆ ಪ್ರತಿಯಾಗಿ ಪ್ರತೀಕಾರ ತೀರಿಸಬೇಕು ಮತ್ತು ದೇಶದಲ್ಲಿ ಷರೀಯತ್ ಕಾನೂನು ತರಬೇಕು ಎನ್ನುವ ವಿಚಾರದಲ್ಲಿ ಸಂದೇಶಗಳನ್ನು ಹಾಕುತ್ತಿದ್ದ.
ವಾರಣಾಸಿಯಲ್ಲಿ ಪಾಕಿಸ್ತಾನಿ ಪ್ರಜೆಗಳಿದ್ದ ವಾಟ್ಸಪ್ ಗ್ರೂಪ್ ಗಳಿಗೆ ಯುವಕರನ್ನು ಸೇರಿಸುತ್ತಿದ್ದ ಮತ್ತು ಅದರ ಲಿಂಕ್ ಗಳನ್ನು ಷೇರ್ ಮಾಡುತ್ತಿದ್ದ. ಆಮೂಲಕ ಸ್ಥಳೀಯರು ಮತ್ತು ಪಾಕಿಸ್ತಾನಿ ಪ್ರಜೆಗಳೊಂದಿಗೆ ನೇರ ಸಂಪರ್ಕ ಆಗುವಂತೆ ಮಾಡುತ್ತಿದ್ದ. ಇದಲ್ಲದೆ, ಪಾಕಿಸ್ತಾನ ಮೂಲದ ನಫೀಸಾ ಎಂಬ ಮಹಿಳೆಯ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದ. ನಫೀಸಾಳ ಗಂಡ ಪಾಕಿಸ್ತಾನ ಸೇನೆಯಲ್ಲಿ ಸೈನಿಕನಾಗಿದ್ದು, ಈತ ಕೊಡುತ್ತಿದ್ದ ಮಾಹಿತಿಯನ್ನು ಆಕೆ ಗಂಡನಿಗೆ ಷೇರ್ ಮಾಡುತ್ತಿದ್ದಳು. ತುಫೈಲ್ ಸುಮಾರು 600 ಪಾಕಿಸ್ತಾನಿ ಪ್ರಜೆಗಳ ಜೊತೆಗೆ ನೇರ ಸಂಪರ್ಕ ಹೊಂದಿದ್ದ ಎಂಬ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ತುಫೈಲ್ ಯಾರೊಂದಿಗೆಲ್ಲ ಸಂಪರ್ಕದಲ್ಲಿದ್ದ ಮತ್ತು ಸ್ಥಳೀಯವಾಗಿ ಏನೆಲ್ಲ ಚಟುವಟಿಕೆ ಮಾಡುತ್ತಿದ್ದ ಎನ್ನುವ ಬಗ್ಗೆ ಉತ್ತರ ಪ್ರದೇಶ ಭಯೋತ್ಪಾದಕ ವಿರೋಧಿ ದಳವು ತನಿಖೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಸ್ಥಳೀಯವಾಗಿ ಮೂಲಭೂತವಾದ ಹಬ್ಬಿಸುವುದು ಮತ್ತು ಇದಕ್ಕಾಗಿ ಪಾಕಿಸ್ತಾನಿಯರ ನಂಟು ಹೊಂದಿರುವುದು ಸದ್ಯಕ್ಕೆ ಪತ್ತೆಯಾಗಿದೆ. ಪಾಕಿಸ್ತಾನ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಒಬ್ಬಳು ಯೂಟ್ಯೂಬರ್ ಮಹಿಳೆ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ. ಪಂಜಾಬ್ ನಲ್ಲಿ 6, ಹರ್ಯಾಣದಲ್ಲಿ 5, ಉತ್ತರ ಪ್ರದೇಶದಲ್ಲಿ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ.
The Uttar Pradesh Police's Anti-Terror Squad (ATS) has arrested a man named Tufail from Varanasi on charges of spying for Pakistan. He is accused of sharing sensitive information about India’s internal security with Pakistani contacts.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am