ಬ್ರೇಕಿಂಗ್ ನ್ಯೂಸ್
01-10-24 10:00 pm Mangalore Correspondent ಕ್ರೈಂ
ಮಂಗಳೂರು, ಅ.1: ಓಎಲ್ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಹಳೆ ಕ್ಯಾಮರಾವನ್ನು ಮಂಗಳೂರಿಗೆ ತರಿಸಿಕೊಂಡ ಕತರ್ನಾಕ್ ದಂಪತಿ ಖರೀದಿಸುತ್ತೇನೆಂದು ಹೇಳಿ ಯುವಕನೊಬ್ಬನನ್ನು ಯಾಮಾರಿಸಿ ಆತನಿಂದ ಕ್ಯಾಮರಾವನ್ನೇ ಕಿತ್ಕೊಂಡು ಪರಾರಿಯಾದ ಘಟನೆ ನಡೆದಿದೆ.
ಪುತ್ತೂರಿನಲ್ಲಿ ಪದವಿ ಓದುತ್ತಿರುವ ಯುವಕನೊಬ್ಬ ತನ್ನ ಕೆನಾನ್ ರೆಬಲ್ ಎಸ್ಎಲ್-2 ಹೆಸರಿನ ಕ್ಯಾಮರಾವನ್ನು ಸೇಲ್ ಮಾಡಲು ಓಎಲ್ ಎಕ್ಸ್ ನಲ್ಲಿ ಹಾಕಿದ್ದ. ಅದರಲ್ಲಿ ಕೊಟ್ಟಿದ್ದ ನಂಬರನ್ನು ನೋಡಿ ಫೋನಾಯಿಸಿದ್ದ ಮಂಗಳೂರಿನ ಮಹಿಳೆ, ಆ ಕ್ಯಾಮರಾ ತನಗೆ ಬೇಕೆಂದು ಡೀಲ್ ಕುದುರಿಸಿದ್ದಳು. ಅದರಂತೆ, ಸೆ.28ರಂದು ಕ್ಯಾಮರಾವನ್ನು ಮಂಗಳೂರು ನಗರದ ಯೂನಿಟಿ ಆಸ್ಪತ್ರೆ ಬಳಿಗೆ ತರುವಂತೆ ಹೇಳಿದ್ದಳು. ಹುಡುಗ ಅದರ ದಾಖಲೆ ಪತ್ರಗಳ ಸಹಿತ ಪ್ಯಾಕ್ ಮಾಡಿಕೊಂಡು ಬಸ್ಸಿನಲ್ಲಿ ಬಂದು ಯೂನಿಟಿ ಆಸ್ಪತ್ರೆ ಬಳಿ ಹೋಗಿದ್ದ.
ಅಷ್ಟರಲ್ಲಿ ಮಹಿಳೆಯ ಜೊತೆಗೆ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಬಂದಿದ್ದು ಕ್ಯಾಮರಾ ನೋಡಿ ಓಕೆ ಮಾಡಿ, 50 ಸಾವಿರಕ್ಕೆ ಡೀಲ್ ಕುದುರಿಸಿದ್ದರು. ಮಹಿಳೆ ತನ್ನಲ್ಲಿದ್ದ ಎಟಿಎಂ ಕಾರ್ಡ್ ಕೊಟ್ಟು ಜೊತೆಗಿದ್ದ ವ್ಯಕ್ತಿಯ ಬಳಿ ಯುವಕನಿಗೆ ಹಣ ತೆಗೆದು ನೀಡುವಂತೆ ಹೇಳಿದ್ದಳು. ಹುಡುಗ ಇವರನ್ನು ಸಾಚಾ ಎಂದೇ ನಂಬಿ ಕ್ಯಾಮರಾವನ್ನು ಆಕೆಯ ಕೈಗೆ ಕೊಟ್ಟು ಹಣ ಪಡೆಯಲೆಂದು ಆ ವ್ಯಕ್ತಿಯ ಜೊತೆಗೆ ಬೈಕಿನಲ್ಲಿ ಕಂಕನಾಡಿಯತ್ತ ತೆರಳಿದ್ದ. ಅಷ್ಟರಲ್ಲಿ ಹುಡುಗನನ್ನು ಬೈಕಿನಿಂದ ಇಳಿಯಲು ಹೇಳಿದ ಅಪರಿಚಿತ ವ್ಯಕ್ತಿ ಬೈಕಿನೊಂದಿಗೆ ನೇರವಾಗಿ ಪರಾರಿಯಾಗಿದ್ದಾನೆ. ಇತ್ತ ಮಹಿಳೆಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಆಗಿತ್ತು.
ವಂಚನೆಗೀಡಾದ ಯುವಕ ಅಮೃತ್ ಬಂದ ದಾರಿಗೆ ಸುಂಕವಿಲ್ಲ ಎನ್ನುತ್ತ ತಾನು ಮೋಸ ಹೋಗಿರುವುದನ್ನು ತಿಳಿದು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ. ಕ್ಯಾಮರಾ ಕಳಕೊಂಡ ಬಗ್ಗೆ ಪೊಲೀಸರಿಗೆ ಹೇಳುತ್ತಲೇ ಅವರಿಗೆ ಆ ಕಳ್ಳ ವ್ಯಕ್ತಿಯ ಪರಿಚಯ ಆಗಿತ್ತು. ಗೂಡ್ಸ್ ಮುನೀರ್ ಅಲ್ವಾ.. ಇವನೇಯಾ ಆ ವ್ಯಕ್ತಿ ಎಂದು ಒಬ್ಬನ ಫೋಟೋ ತೋರಿಸಿದ್ದಾರೆ. ಹುಡುಗ ಅದೇ ವ್ಯಕ್ತಿ ತನಗೆ ಮೋಸ ಮಾಡಿರುವುದೆಂದು ದೃಢಪಡಿಸಿದ್ದಾನೆ. ಆನಂತರ, ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಸಿಸಿಟಿವಿ ಇದೆಯಾ ಎಂದು ಚೆಕ್ ಮಾಡೋಣ ಎಂದು ಹೇಳಿ ಯುನಿಟಿ ಆಸ್ಪತ್ರೆ ಬಳಿಗೆ ಬಂದಿದ್ದಾರೆ. ಸ್ಥಳದಲ್ಲಿ ಸಿಸಿಟಿವಿ ಇದ್ದರೂ, ಆನಂತರ ಪೊಲೀಸರು ಮಾತ್ರ ತಮ್ಮ ವರಾತ ಬದಲಿಸಿದ್ದಾರೆ.
ಕ್ಯಾಮರಾ ಬಗ್ಗೆ ದಾಖಲೆಗಳನ್ನು ಕೊಡಿ ಎಂದು ಪೊಲೀಸರು ಕೇಳಿದ್ದು ಎಲ್ಲವನ್ನೂ ಅವರೇ ಹಿಡಿದೊಯ್ದಿದ್ದಾರೆ ಎಂದು ಹೇಳಿದರೂ ಕೇಳಲು ತಯಾರಿಲ್ಲ. ಕಳ್ಳ ಗೂಡ್ಸ್ ಮುನೀರ್ ಎಂದು ಗೊತ್ತಾದರೂ, ಪೊಲೀಸರು ಕೇಸು ದಾಖಲಿಸಲು ಮುಂದಾಗಿಲ್ಲ. ಬದಲಿಗೆ, ಎಫ್ಐಆರ್ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿ ಕಳಿಸಿದ್ದಾರೆ ಎಂದು ಹರೆಯದ ಹುಡುಗ ಅಲವತ್ತುಕೊಂಡಿದ್ದಾನೆ. ಗೂಡ್ಸ್ ಮುನೀರ್ ಶೋಕಿವಾಲನಾಗಿದ್ದು, ಈ ಹಿಂದೆ ಕಂಕನಾಡಿ, ಉಳ್ಳಾಲ, ಕದ್ರಿ ಸೇರಿ ಹಲವಾರು ಠಾಣೆಗಳಲ್ಲಿ 25ಕ್ಕೂ ಹೆಚ್ಚು ಕಳ್ಳತನ ಕೇಸುಗಳನ್ನು ಹೊಂದಿದ್ದಾನೆ. ತನ್ನ ಪತ್ನಿಯನ್ನೇ ಮುಂದಿಟ್ಟು ವಂಚನೆ ಪ್ರಕರಣ ನಡೆಸುತ್ತಿದ್ದು ಈ ಘಟನೆಯಿಂದಾಗಿ ಇಂಥ ಕಳ್ಳ ಫಟಿಂಗರಿಗೆ ಮಂಗಳೂರು ಪೊಲೀಸರೂ ಸಾಥ್ ಕೊಡುತ್ತಿದ್ದಾರೆಯೇ ಅನ್ನುವ ಸಂಶಯ ಬರುವಂತಾಗಿದೆ.
Muneer Goods Muneer fraud exposed in mangalore, loot camera posted on OLX, police fail to register case.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm